ಶಾರ್ಜಾ: ಅಫ್ಘಾನಿಸ್ತಾನದ ಡೆಡ್ಲಿ ಸ್ಪಿನ್ನರ್ ರಶೀದ್ ಖಾನ್ ಐಪಿಎಲ್ ಹೊಸ್ತಿಲಲ್ಲೇ ಟಿ-20 ಕ್ರಿಕೆಟ್‌ನಲ್ಲಿ ನೂತನ ಸಾಧನೆ ಮೆರೆದಿದ್ದಾರೆ.
ಟಿ-20 ಕ್ರಿಕೆಟ್‌ನಲ್ಲಿ ತನ್ನ ಸ್ಪಿನ್ ಜಾಲದ ಮೂಲಕವೇ ಬ್ಯಾಟ್ಸ್‌ಮನ್ ಎದೆಯನ್ನು ನಡುಗಿಸುವ ರಶೀದ್ ಖಾನ್ ಇದೀಗ ಹೊಸ ಸಾಧನೆ ಮಾಡಿದ್ದಾರೆ. 100 ಕ್ಕೂ ಅಧಿಕ ಎಸೆತಗಳಲ್ಲಿ ಒಂದೇ ಒಂದು ಬೌಂಡರಿ ನೀಡದ ಸಾಧನೆ ಮೆರೆದಿದ್ದಾರೆ ಅಫ್ಘನ್ ಸ್ಪಿನ್ನರ್ ರಶೀದ್ ಖಾನ್.
ಇತ್ತೀಚೆಗೆ ಶಾರ್ಜಾದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ 3 ನೇ ಟಿ-20 ಪಂದ್ಯದಲ್ಲಿ ರಶೀದ್ ಎಸೆದ ಎಸೆತಕ್ಕೆ ಸಯೀಮ್ ಅಯುಬ್ ಬಾರಿಸಿದ ಸಿಕ್ಸರ್ ಟಿ-20ಯಲ್ಲಿ ರಶೀದ್‌ನ ಸುಮಾರು 106 ಎಸೆತಗಳ ಬಳಿಕ ಬಂದ ಬೌಂಡರಿಯಾಗಿದೆ.
ಇದನ್ನೂ ಓದಿ: ಈ ಬಾರಿಯ ಐಪಿಎಲ್ ಗೆ ಹೊಸ ನಿಯಮ: ಯಾರಿದು ಇಂಪ್ಯಾಕ್ಟ್ ಪ್ಲೇಯರ್? ಯಾವ ರೀತಿ ಬಳಸಬಹುದು?