Advertisement

ಒಂದು ಗಂಟೆಯಲ್ಲಿ 33 ತಿಂಡಿ-ತಿನಿಸು; ಎರ್ನಾಕುಳಂ ಬಾಲಕಿ ಸಾನ್ವಿಯ ಅದ್ವಿತೀಯ ಸಾಧನೆ

01:07 AM Oct 16, 2020 | mahesh |

ಎರ್ನಾಕುಳಂ: ಒಂದು ಗಂಟೆಯಲ್ಲಿ ಮೂವತ್ತ ಮೂರು ವಿಧಗಳ ತಿಂಡಿ-ತಿನಿಸುಗಳು ಸಿದ್ಧ. ಇದು ನುರಿತ ಅಡುಗೆಯವರ ಸಾಧನೆಯಲ್ಲ. ಕೇರಳದ ಎರ್ನಾಕುಳಂನ ಹತ್ತು ವರ್ಷದ ಸಾನ್ವಿ ಎಂ. ಪ್ರಜಿತ್‌ ಈ ಸಾಧನೆ ಮಾಡಿದ್ದಾಳೆ. ಅದು ಏಷ್ಯಾ ಬುಕ್‌ ಆಫ್ ರೆಕಾರ್ಡ್ಸ್ ಮತ್ತು ಇಂಡಿಯಾ ಬುಕ್‌ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ.

Advertisement

ಅಂದ ಹಾಗೆ ಈ ಅದ್ಭುತ ಸಾಧನೆಗಳ ಬಾಲಕಿ ಸದ್ಯ ವಾಸ್ತವ್ಯ ಇರುವುದು ವಿಶಾಖಪಟ್ಟಣಂನಲ್ಲಿ. ಆಕೆಯ ತಂದೆ ಐಎಎಫ್ನಲ್ಲಿ ವಿಂಗ್‌ ಕಮಾಂಡರ್‌ ಆಗಿದ್ದಾರೆ. ಪ್ರಜಿತ್‌ ಬಾಬು ಮತ್ತು ಮಂಜ್ಮಾ ದಂಪತಿಯ ಮುದ್ದಿನ ಕುವರಿ ಈಕೆ. ಒಂದು ಗಂಟೆಯ ಅವಧಿಯಲ್ಲಿ ಇಡ್ಲಿ, ಚಿಕನ್‌ ರೋಸ್ಟ್‌, ಫ್ರೈಡ್‌ ರೈಸ್‌, ಕಾರ್ನ್ ಫ್ರಿಟ್ಟರ್ಸ್‌, ವಾಫೆನ್ಸ್‌, ಮಶ್ರೂಮ್‌ ಟಿಕ್ಕಾ, ಊತಪ್ಪಮ್‌, ಪಾಪಿx ಚಾಟ್‌ಗಳನ್ನು ಸಿದ್ಧಪಡಿಸಿದ್ದಾಳೆ. ಅಂದ ಹಾಗೆ ಈ ದಾಖಲೆ ನಿರ್ಮಾಣವಾದದ್ದು ಆ.29ರಂದು. ಆಕೆಯ ಅಡುಗೆ ಮಾಡುವ ಕ್ಷಿಪ್ರತೆ ಮತ್ತು ಇತರ ವಿಚಾರಗಳನ್ನು ಇಬ್ಬರು ಪತ್ರಾಂಕಿತ ಅಧಿಕಾರಿಗಳು, ಏಷ್ಯಾ ಬುಕ್‌ ಆಫ್ ರೆಕಾರ್ಡ್ಸ್ನ ಪ್ರತಿನಿಧಿಗಳು ಆನ್‌ಲೈನ್‌ ಮೂಲಕ ವೀಕ್ಷಿಸಿದ್ದರು.

ಪುತ್ರಿಯ ಸಾಧನೆಯ ಬಗ್ಗೆ ತಾಯಿ ಮಂಜ್ಮಾ ಸಂತಸ ವ್ಯಕ್ತಪಡಿಸಿದ್ದಾರೆ. ಮಗುವಾಗಿದ್ದಾಗಲೇ ಆಕೆ ಅಡುಗೆಯತ್ತ ಹೆಚ್ಚು ಆಸ್ಥೆ ಹೊಂದಿದ್ದಳು. ನಮ್ಮ ಕುಟುಂಬದಲ್ಲಿ ಆಹಾರ ಸಿದ್ಧತೆಯ ಬಗ್ಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ.

ಜುಲೈವರೆಗೆ ಸಾನ್ವಿಗೆ ಗ್ಯಾಸ್‌ ಸ್ಟೌನಲ್ಲಿ ಅಡುಗೆ ಮಾಡಲು ಅವಕಾಶ ನೀಡಿರಲಿಲ್ಲ. ಅದುವರೆಗೆ ಇಂಡಕ್ಷನ್‌ ಸ್ಟವ್‌ನಲ್ಲಿ ಅಡುಗೆಯ ಪ್ರಯೋಗ ಮಾಡುತ್ತಿದ್ದಳು ಎಂದು ಮಂಜ್ಮಾ ಹೇಳಿದ್ದಾರೆ. ಅಜ್ಜಿ ಮತ್ತು ನಾನು ಅಡುಗೆ ಮಾಡುವುದನ್ನು ನೋಡಿ, ಹಲವು ಪ್ರಯೋಗಗಳನ್ನು ಮಾಡಿದ್ದಾಳೆ ಎಂದರು. ಆಕೆಯ ತಂದೆ ಅಡುಗೆ ಮಾಡುವಲ್ಲಿ ತಪ್ಪಿದ್ದಾಗ ಅದನ್ನು ಸರಿಪಡಿಸುವಷ್ಟು ಜಾಣ್ಮೆ ಆಕೆಯಲ್ಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next