Advertisement
ಸಾಮಾನ್ಯ ವರ್ಗದಲ್ಲಿರುವ ಅಥವಾ ಮೇಲ್ಜಾತಿಯಲ್ಲಿರುವ ಆರ್ಥಿಕವಾಗಿ ಹಿಂದುಳಿದಿರುವವರಿಗೂ ನರೇಂದ್ರ ಮೋದಿ ಸರಕಾರವು ಶೇ.10 ಮೀಸಲಾತಿ ನೀಡಲು ನಿರ್ಧರಿಸಿರುವ ವಿಷಯದಲ್ಲಿ ಈಗ ಕರ್ನಾಟಕ ಮಾತ್ರವಲ್ಲದೆ ದೇಶದೆಲ್ಲೆಡೆ ಬಿಸಿಬಿಸಿ ಚರ್ಚೆಯಾಗುತ್ತಿರುವುದು ಸಹಜ ವಿದ್ಯಮಾನ. ಸಂಸತ್ತಿನ ಎರಡೂ ಸದನಗಳಲ್ಲಿ ಇದು ಸಣ್ಣ ವಿರೋಧದೊಂದಿಗೆ ಅಂಗೀಕಾರಗೊಂಡಿದೆ. ಹೀಗೆ ಮೇಲ್ವರ್ಗದಲ್ಲಿರುವ ಬಡವರಿಗೆ ಮೀಸಲಾತಿ ನೀಡುವುದು ಕೇಂದ್ರ ಸರಕಾರದ ನಿರ್ಧಾರ ಎನ್ನುವುದಕ್ಕಿಂತಲೂ ಜನರ ಸಾಮೂಹಿಕ ಅಭಿಪ್ರಾಯವೇ ಎನ್ನುವುದೇ ಹೆಚ್ಚು ಸರಿಯಾಗುತ್ತದೆ.
Related Articles
Advertisement
ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿ ಕೊಂಡೇ ಪ್ರಸ್ತುತ ಕೇಂದ್ರ ಸರಕಾರವು ಆರ್ಥಿಕವಾಗಿ ಹಿಂದುಳಿದಿರುವ ಸಾಮಾನ್ಯ ವರ್ಗದವರಿಗೂ ಶೇ. 10 ಮೀಸಲಾತಿ ನೀಡಲು ಮುಂದಾಗಿದೆ ಎಂಬ ಕಾರಣಕ್ಕೆ ಇದಕ್ಕೆ ಸದ್ಯ ವಿರೋಧ ವ್ಯಕ್ತವಾಗಿದೆ. ವಿಪಕ್ಷಗಳ ದಾಟಿ ಹೇಗಿದೆ ಎಂದರೆ ಅವುಗಳ ಎಂದೂ ಮತಗಳಿಸುವದಕ್ಕಾಗಿ ಜನಪ್ರಿಯ ಯೋಜನೆಗಳನ್ನು ಘೋಷಿಸಿಯೇ ಇಲ್ಲ ಎಂಬಂತೆ. ಆದರೂ ಮತದಾರರನ್ನು ಓಲೈಸಬೇಕಾಗಿರುವ ಕಾರಣ ಇಂಥ ಜನಪ್ರಿಯ ಯೋಜನೆಯನ್ನು ಕಟುವಾಗಿ ವಿರೋಧಿಸಲು ವಿಪಕ್ಷಗಳು ಮುಂದಾಗುತ್ತಿಲ್ಲ. ಬಿಜೆಪಿಯು ಮತ್ತೂಂದು ಬಾರಿಗೆ ಅಧಿಕಾರದಲ್ಲುಳಿಯಲು ಬಯಸುತ್ತಿರುವ ಪಕ್ಷವಾಗಿದೆ. ಇದು ರಾಜಕೀಯ ಸನ್ಯಾಸ ಸ್ವೀಕರಿಸುತ್ತಿಲ್ಲ. ಮೇಲ್ವರ್ಗದವರನ್ನು ಓಲೈಸುವ ಕ್ರಮದಲ್ಲಿ ಎಸ್‌ಸಿ, ಎಸ್‌ಟಿ ಮತಗಳು ಕೈ ತಪ್ಪುವ ಅಪಾಯ ಸಾಧ್ಯತೆಯ ಕುರಿತು ಕೂಡ ಬಿಜೆಪಿ ಚಿಂತಿಸುತ್ತಿದೆ. 2002ರ ಗೋಧೊತ್ತರ ಗಲಭೆಯ ಬಳಿಕ ಬಿಜೆಪಿಯು ಮುಸ್ಲಿಮರ ಮತಗಳನ್ನು ಪಡೆದು ಅಧಿಕಾರ ಉಳಿಸಿಕೊಳ್ಳವ ಯಾವ ನಿರೀಕ್ಷೆಯನ್ನೂ ಉಳಿಸಿಕೊಂಡಿಲ್ಲ.
ಇತ್ತೀಚೆಗೆ ಕನ್ನಡದ ಟಿವಿ ಚಾನೆಲೊಂದರಲ್ಲಿ ಪ್ರಸಾರವಾದ ಚರ್ಚೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯೋರ್ವಳು ಮಾತ ನಾಡುತ್ತಾ, ಕರ್ನಾಟಕದಲ್ಲಿರುವ ಕೇವಲ ಶೇ. 4ರಷ್ಟು ಮೇಲ್ವರ್ಗದ ಬ್ರಾಹ್ಮಣರಿಗೆ ಶೇ. 10 ಮೀಸಲಾತಿ ಸಿಗುತ್ತಿದೆ ಎಂದು ಆಕ್ಷೇಪಿಸಿದ್ದಳು. ಆದರೆ ಆಕೆಯ ಆ ಅಭಿಪ್ರಾಯ ತಪ್ಪಿನಿಂದ ಕೂಡಿದೆ. ಆಕೆ ಭಾವಿಸಿದಂತೆ ಇಲ್ಲಿ ಕೇವಲ ಬ್ರಾಹ್ಮಣರು ಮಾತ್ರ ಮೇಲ್ವರ್ಗದವರಲ್ಲ. ಹಿಂದುಳಿದ ವರ್ಗದಲ್ಲಿರುವ ಕೆನೆಪದರಕ್ಕೆ ಸೇರುವ ವರ್ಗದವರು ಕೂಡ ಇದರಲ್ಲಿ ಸೇರುತ್ತಾರೆ. ಕರ್ನಾಟಕದಲ್ಲಿ ಲಿಂಗಾಯತ ಮತ್ತು ಒಕ್ಕಲಿಗರೆಂಬ ಎರಡು ಪ್ರಭಾವಿ ಸಮುದಾಯಗಳು (ಇದರಲ್ಲಿ ಕೆಲವರು ಹಿಂದುಳಿದವರು ಎಂದು ಪರಿಗಣಿಸಲ್ಪಡುತ್ತಾರೆ), ಬ್ರಾಹ್ಮಣರು, ವೈಶ್ಯರು ಮತ್ತು ಇತರ ಕೆಲವರು ಕೂಡ ಇದರಲ್ಲೇ ಸೇರುತ್ತಾರೆ. ಸರಿಯಾಗಿ 100 ವರ್ಷಗಳ ಹಿಂದೆ ನ್ಯಾ| ಲೆಸ್ಲಿà ಮಿಲ್ಲರ್ ಕಮಿಟಿಯು ಬ್ರಾಹ್ಮಣರು, ಯೂರೋಪಿಯನ್ಸ್ ಮತ್ತು ಆಂಗ್ಲೋ ಇಂಡಿಯನ್ಸ್ ಮಾತ್ರ ಮೈಸೂರಿನಲ್ಲಿ ಮುಂದುವರಿದ ಸಮುದಾಯ ಗಳೆಂದು ವರ್ಗೀಕರಿ ಸಿತ್ತು. ಆ ಬಳಿಕ ಶ್ರೀಮಂತ ಮತ್ತು ಪ್ರಭಾವಶಾಲಿ ಎಸ್‌ಸಿ, ಎಸ್‌ಟಿ ಸಹಿತ ಕೆಲವು ಇತರ ಜಾತಿಯವರು ಉತ್ತಮ ಸ್ಥಿತಿಯನ್ನು ಕಂಡುಕೊಂಡವು. ಶ್ರೀಮಂತ ಯುರೋಪಿಯನ್ನರು ಮತ್ತು ಆಂಗ್ಲೋ ಇಂಡಿಯನ್ನರು ತಮ್ಮ ಒಳಿತಿಗಾಗಿ ದೇಶ ತೊರೆದರು. ಕೇವಲ ಬಡ ಆಂಗ್ಲೋ ಇಂಡಿಯನ್ನರು ಮಾತ್ರ ನಮ್ಮ ಜತೆ ಉಳಿದುಕೊಂಡರು.
ಈಗ ಹೊಸದಾಗಿ ಜಾರಿಗೆ ತರಲುದ್ದೇಶಿಸಿರುವ ಶೇ. 10 ಮೀಸಲಾತಿಗೆ ಕುಟುಂಬದ ವಾರ್ಷಿಕ ಆದಾಯ 8 ಲ. ರೂ. ನಿಗದಿ ಮಾಡಿರುವುದು ಸರಿಯಲ್ಲ. ಮುಂದುವರಿದ ಜಾತಿಯವರ ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸಲು ಈ ಮಾನದಂಡ ಮಾಡಿಕೊಂಡಿರುವುದು ತುಂಬಾ ಹೆಚ್ಚಾಯಿತು. ಇದನ್ನು ಕಡಿಮೆ ಮಾಡಲೇ ಬೇಕಾಗಿದೆ. ಹಿಂದುಳಿದ ವರ್ಗದಲ್ಲಿರುವ ಕೆನೆಪದರ ವ್ಯಾಪ್ತಿಯವರನ್ನು ಗುರುತಿಸಲು ಕೂಡ ಇದೇ ಮಾನದಂಡವನ್ನು ಅನುಸರಿಸಲಾಗುತ್ತಿದೆ. 8 ಲಕ್ಷ ರೂ. ಅನ್ನೇ ಅಂತಿಮಗೊಳಿಸಿದರೆ ಇದರ ವಿರುದ್ಧ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಅದರಿಂದಾಗಿ ಹೆಚ್ಚಿನ ಅನರ್ಹ ಒಬಿಸಿಗಳು ಕೂಡ ಹಿಂದುಳಿದವರ ಸಾಲಿಗೆ ಸೇರುವ ಸಾಧ್ಯತೆಯಿದೆ. ಉದಾಹರಣೆಗೆ, ಮುಜರಾಯಿ ದೇವ ಸ್ಥಾನ ವೊಂದರ ಮಾಸಿಕ 3 ಸಾವಿರ ರೂ. ಆದಾಯ ಹೊಂದಿರುವ ಅರ್ಚಕರ ಮಗು ಮಾಸಿಕ 67 ಸಾವಿರ ರೂ. ಆದಾಯ ಹೊಂದಿ ರುವ ಕುಟುಂಬದವರೊಂದಿಗೆ ಸ್ಪರ್ಧಿಸಲು ಸಾಧ್ಯ ಎಂದು ನಾವು ನಿರೀಕ್ಷಿಸುವಂತಿಲ್ಲ. ಆಗಮ ಶಾಸ್ತ್ರ ಕಲಿತ ಅರ್ಚಕರಿಗಿಂತ ಬೆಂಗಳೂರಿನಲ್ಲಿ ತಿಂಗಳಿಗೆ 17 ಸಾವಿರ ರೂ. (ಸರಕಾರ ನಿಗದಿ ಮಾಡಿ ರು ವುದು) ಆದಾಯ ಪಡೆಯುವ ಸ್ವೀಪರ್ ಕೆಲಸ ಮಾಡು ವವರ (ಕಸ ಗುಡಿಸುವವರ) ಆರ್ಥಿಕ ಸ್ಥಿತಿಯೇ ಉತ್ತಮವಿರುತ್ತದೆ.
ನಾವು ಸಾಮಾಜಿಕ ಹಿಂದುಳಿದವರ ಬಗೆಗಿನ ಚಿಂತನೆಯನ್ನು ಮರುಪರಿಶೀಲಿಸಬೇಕಾಗಿದೆ. ಕಡಿಮೆ ಆದಾಯವು ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿಯುವಿಕೆಗೆ ಕಾರಣವಾಗುತ್ತದೆ. ಈಗಿನ ನಗರೀಕರಣದಲ್ಲಿ ಉದ್ಯೋಗ ಆಧಾರಿತ ತಾರತಮ್ಯ ಬಹುತೇಕ ಕೊನೆಗೊಂಡಿದೆ. ಆದಾಯ ತೆರಿಗೆ ಪಾವತಿಸದ ಸಾಮಾನ್ಯ ವರ್ಗದ ಜನರು ಆರ್ಥಿಕವಾಗಿ ಹಿಂದುಳಿದವರು ಮತ್ತು ಅವರನ್ನು ಒಬಿಸಿಗೆ ಸಮಾನವಾಗಿ ಪರಿಗಣಿಸಬೇಕು ಎಂದು 2006ರಲ್ಲಿ ಮನಮೋಹನ್ ಸಿಂಗ್ ಸರಕಾರ ಮೇಲ್ವರ್ಗದಲ್ಲಿರುವ ಬಡವರಿಗೆ ಮೀಸಲಾತಿ ನೀಡುವುದಕ್ಕಾಗಿ ರಚಿಸಿದ ನಾಲ್ಕು ಸದಸ್ಯರ ಸಮಿತಿಯು ಹೇಳಿದೆ. ಇದು ತುಂಬಾ ಸರಿಯಾಗಿದೆ. ಈ ಸಮಿತಿಯನ್ನು ಮೇಜರ್ ಜನರಲ್ ಎಸ್. ಆರ್. ಸಿನ್ಹ ಅವರ ನೇತೃತ್ವದಲ್ಲಿ ರಚಿಸಲಾಗಿತ್ತು. ಮೋದಿ ಸರಕಾರವು ಕೂಡ ಈ ಶಿಫಾರಸನ್ನು ಪರಿಗಣಿಸಬೇಕಾಗಿದೆ. ಈಗ ಸಂವಿಧಾನಕ್ಕೆ ಮಾಡಿರುವ ತಿದ್ದುಪಡಿಗೆ ಆ ಸಮಿತಿಯು ಆಗಲೇ ಶಿಫಾರಸು ಮಾಡಿತ್ತು ಎಂಬುದು ಉಲ್ಲೇಖನೀಯ ಸಂಗತಿ.
ಕೇಂದ್ರ ಸರಕಾರದ ವಿಷಯದಲ್ಲಿ ಹೇಳುವುದಾದರೆ, ಮೇಲ್ವ ರ್ಗದ ಜಾತಿಯಲ್ಲಿರುವ ಬಡವರಿಗೂ ಶೇ. 10 ಮೀಸಲಾತಿಯನ್ನು ಮೊತ್ತಮೊದಲು ನೀಡಿದ್ದು ಪಿ.ವಿ. ನರಸಿಂಹ ರಾವ್ ನೇತೃತ್ವದ ಸರಕಾರವಾಗಿತ್ತು. ಆದರೆ ಸರಕಾರದ ಈ ಆದೇಶವನ್ನು ಸುಪ್ರೀಂಕೋರ್ಟ್ ರದ್ದು ಮಾಡಿತ್ತು. ಕೇವಲ ಆರ್ಥಿಕ ಮಾನದಂಡ ದಲ್ಲಿ ಮಾತ್ರವೇ ಹಿಂದುಳಿದ ವರ್ಗ ಎಂದು ಗುರುತಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಇಂದ್ರಾ ಸಾಹಿ° ತೀರ್ಪಿನ ಆಧಾರದಲ್ಲಿ ಅಭಿಪ್ರಾಯಪಟ್ಟಿತ್ತು. ಕೆಲವು ವಿಶೇಷ ಪರಿಸ್ಥಿತಿಯಲ್ಲಿ ಮಾತ್ರ ಮೀಸಲಾತಿಯ ಪ್ರಮಾಣ ಶೇ. 50ನ್ನು ದಾಟಬಹುದು ಎಂದು ಕೂಡ ಸುಪ್ರೀಂಕೋರ್ಟ್ ಈ ಸಂದರ್ಭದಲ್ಲಿ ನೀಡಿದ್ದ ತೀರ್ಪಿನಲ್ಲಿ ಹೇಳಿತ್ತು. ಆಗಿನ ಮುಖ್ಯ ನ್ಯಾಯಮೂರ್ತಿ ಎಂ. ಎಚ್. ಕಾನಿಯಾ ನೇತೃತ್ವದ 9 ಮಂದಿ ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದಲ್ಲಿ 6-3ರಂತೆ ಈ ತೀರ್ಪು ಪ್ರಕಟವಾಗಿತ್ತು. ಈಗ ಮೋದಿ ಸರಕಾರ ಏನು ಮಾಡಿದೆಯೋ, ಅದನ್ನೇ ಮಾಡಲು 2003, 2004ರಲ್ಲಿ ಮಾಡಲು ಆಗಿನ ಎ.ಬಿ. ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಪರಿಶೀಲಿಸಿತ್ತು. ಅದಕ್ಕಾಗಿ ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಬಾಲ್ಮೀಕಿ ಪ್ರಸಾದ್ ಸಿಂಗ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು.
ಈಗ ಮೋದಿ ಸರಕಾರ ಏನು ಮಾಡಲು ಮುಂದಾಗಿದೆಯೋ ಅದನ್ನು ಹಿಂದೆಯೇ ಕೆಲವರು ಮಾಡಲು ಶ್ರಮಿಸಿ ಸೋತಿದ್ದರು. ಹೊಸ ಮೀಸಲಾತಿಯನ್ನು ರದ್ದು ಮಾಡುವಂತೆ ಕೋರಿ ಸುಪ್ರೀಂಕೋರ್ಟಿನ ಮೊರೆ ಹೋಗುವವರ ಸಂಖ್ಯೆ ಹೆಚ್ಚಾಗಿ ಅಪಾರ ಪ್ರಮಾಣದಲ್ಲಿ ಪ್ರಕರಣಗಳು ಬಾಕಿಯಾಗುವುದು ಖಚಿತ. ಇಂಥದ್ದೊಂದು ಗಂಭೀರ ವಿಷಯದ ಬಗ್ಗೆ ಜನರಲ್ಲೂ ಚರ್ಚೆಗೆ ಅವಕಾಶ ಕೊಡಬೇಕು. ಇಂಥ ಮಹತ್ವದ ವಿಷಯದ ಬಗೆಗೆ ಸಂಸತ್ತಿನ ಎರಡು ಸದನಗಳಲ್ಲಿ ಕೇವಲ ಎರಡು ದಿನಗಳ ಚರ್ಚೆ ತುಂಬಾ ಕಡಿಮೆಯಾಯಿತು ಎಂದು ಹೇಳಬೇಕಾಗುತ್ತದೆ. ನ್ಯಾಯಾಲಯದ ಈ ಅಗ್ನಿಪರೀಕ್ಷೆಯಲ್ಲಿ ತೇರ್ಗಡೆಯಾಗಿ ಮೇಲ್ಜಾತಿಯ ಬಡವರಿಗೆ ಶೇ. 10 ಮೀಸಲಾತಿ ನೀಡುವಲ್ಲಿ ಮೋದಿ ಸರಕಾರ ಸಫಲವಾದರೆ ಅದೊಂದು ಐತಿಹಾಸಿಕ ನಿರ್ಧಾರವೆಂದೇ ದಾಖಲಾಗಲಿದೆ.