Advertisement

ಮಾನವ ಕಳ್ಳಸಾಗಣೆ: 5 ಬಾಲಕರ ಸಹಿತ 10 ಮಂದಿಯ ರಕ್ಷಣೆ, ಇಬ್ಬರು ಸೆರೆ

12:07 PM May 16, 2018 | udayavani editorial |

ರಂಗಿಯಾ, ಅಸ್ಸಾಂ : ರಂಗಿಯಾ ರೈಲು ನಿಲ್ದಾಣದಲ್ಲಿ  ಮಾನವ ಕಳ್ಳಸಾಗಣೆಗಾರರ ಕಪಿಮುಷ್ಟಿಯಿಂದ ಐವರು ಬಾಲಕರನ್ನು ಮತ್ತು ಐವರು ಪುರುಷರನ್ನು ರಕ್ಷಿಸಲಾಗಿದೆ ಎಂದು ಆರ್‌ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಕಳ್ಳಸಾಗಣೆಗೆ ಒಳಗಾಗುತ್ತಿದ್ದವರ ಜತೆಗಿದ್ದ ಇಬ್ಬರು ವ್ಯಕ್ತಿಗಳನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದ ರೈಲ್ವೆ ರಕ್ಷಣಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ. 

ಕಳ್ಳಸಾಗಣೆಗೆ ಗುರಿಯಾಗುತ್ತಿದ್ದ ಐವರು ಬಾಲಕರನ್ನು ಇಲ್ಲಿಂದ ಜಲಪಾಯ್‌ಗಾಡಿಗೆ ಮತ್ತು ಅಲ್ಲಿ,ದ ನೇಪಾಲಕ್ಕೆ ಒಯ್ಯುವ ಯೋಜನೆ ಮಾನವ ಕಳ್ಳಸಾಗಣೆಗಾರರದ್ದಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಬಾಲಕರೊಂದಿಗೆ ಕಳ್ಳಸಾಗಣೆಗೆ ಗುರಿಯಾಗಲಿದ್ದ ಐವರು ಪುರುಷರು 20ರ ಹರೆಯದ ಒಳಗಿನವರಾಗಿದ್ದು ಅವರನ್ನು ಲೂಧಿಯಾನಕ್ಕೆ ಕಳುಹಿಸಲಾಗುತ್ತಿತ್ತು ಎಂದು ಆರ್‌ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next