Advertisement

ಕೋವಿಡ್‌ 19 ನಿಧಿಗೆ ವಿದೇಶಿ ಕನ್ನಡಿಗರಿಂದ 10ಲಕ್ಷ ದೇಣಿಗೆ

06:04 AM Jun 01, 2020 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ 19 ಸಂಕಷ್ಟ ಪರಿಹಾರ ನಿಧಿಗೆ ಅಮೆರಿಕದ “ನಾವು ವಿಶ್ವ ಕನ್ನಡಿಗರು’ ನಾವಿಕ ಕನ್ನಡ ಒಕ್ಕೂಟ ಹತ್ತು ಲಕ್ಷ ರೂ. ದೇಣಿಗೆ ನೀಡಿದೆ.ರಾಜ್ಯದಲ್ಲಿ ಕೋವಿಡ್‌ 19 ಸುರಕ್ಷತಾ ಕ್ರಮಗಳಿಗಾಗಿ ಅಮೆರಿಕದಿಂದ ಸ್ಪಂದನೆ ಮಾಡಿರುವ ನಾವಿಕ ಕನ್ನಡ ಒಕ್ಕೂಟದ ಪದಾಧಿಕಾರಿಗಳಿಗೆ ಸರ್ಕಾರದ ಪರವಾಗಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.  ಅಶ್ವತ್ಥನಾರಾಯಣ ಕೃತಜ್ಞತೆ ಸಲ್ಲಿಸಿ, ಅಮೆರಿಕದಲ್ಲೂ ಕೋವಿಡ್‌ 19 ವಿರುದ್ಧದ ಹೋರಾಟದಲ್ಲಿ ಕನ್ನಡಿಗರು  ಕೈ ಜೋಡಿಸಿರುವುದಕ್ಕೂ ಅಭಿನಂದನೆ ಸಲ್ಲಿಸಿದರು.

Advertisement

ಶನಿವಾರ ವಿಡಿಯೋ ಕಾನ್ಫರೆನ್ಸ್‌ ನಡೆಸಿದ ಅವರು, ಕೋವಿಡ್‌ 19 ಸಂಕಷ್ಟದಲ್ಲಿ ಕರ್ನಾಟಕದಲ್ಲಿರುವ ನಿಮ್ಮವರ ಕಾಳಜಿಗೆ ಸರ್ಕಾರ ಬದ್ಧವಾಗಿದೆ. ರಾಜ್ಯದಲ್ಲಿ ದೇಶದಲ್ಲೇ ಉತ್ತಮವಾದ  ಆರೋಗ್ಯ ವ್ಯವಸ್ಥೆಯಿದ್ದು ಕೋವಿಡ್‌ 19 ನಿಯಂತ್ರಣದಲ್ಲಿ ಒಂದು ಹಂತದ ಯಶಸ್ಸು ಸಾಧಿಸಿದ್ದೇವೆ ಎಂದು ಹೇಳಿದರು.

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕೋವಿಡ್‌ 19  ಪರಿಸ್ಥಿತಿ ಅತ್ಯಂತ ಸಮರ್ಥವಾಗಿ ನಿಭಾಯಿಸಲಾಗುತ್ತಿದೆ. ಕೋವಿಡ್‌ 19 ದೀರ್ಘ‌ಕಾಲ ನಮ್ಮೊಂದಿಗೆ ಇರುವುದರಿಂದ ಆರೋಗ್ಯ, ಆರ್ಥಿಕ ಸಮಸ್ಯೆ ಎದುರಿಸಲು ಪರಸ್ಪರ ಸಹಕಾರ ಮುಖ್ಯ. ಈ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲೂ ಆರೋಗ್ಯ  ಸಮೀಕ್ಷೆ ನಡೆಸಿ ಆ ಮಾಹಿತಿ ಡಿಜಿಟಲೈಸ್‌ ಮಾಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next