Advertisement
ರಾಜ್ಯಾದ್ಯಂತ ವಾಡಿಕೆ ಮಳೆಯಿಂದ ಪ್ರಮುಖ ಜಲಾಶಯಗಳು ಭರ್ತಿಯಾಗುತ್ತಿವೆ. ಕುಡಿಯುವ ನೀರಿನ ಬವಣೆಯೂ ನೀಗಿದೆ. ಆದರೆ, ಕೃಷಿ ಕ್ಷೇತ್ರದ ಮೇಲಿನ ಬರದ ಛಾಯೆ ಮಾತ್ರ ಸಂಪೂರ್ಣವಾಗಿ ಸರಿದಿಲ್ಲ. ಸಕಾಲದಲ್ಲಿ ಮಳೆಯಾಗದಿದ್ದರಿಂದ ಒಟ್ಟಾರೆ ಬಿತ್ತನೆ ಪ್ರದೇಶದಲ್ಲಿ ಶೇ. 20ರಷ್ಟು ಬೆಳೆ ಬಾಧಿತ ವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ ಇದುವರೆಗೆ 60.46 ಲಕ್ಷ ಹೆಕ್ಟೇರ್ಪ್ರದೇಶದಲ್ಲಿ ಬಿತ್ತನೆಯಾಗಿದೆ. ಈ ಪೈಕಿ 10.60 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ದ ಬೆಳೆ ಮಳೆ ಅಭಾವದಿಂದ ಬಾಧಿತವಾಗಿದೆ ಎಂದು ಕೃಷಿ ಇಲಾಖೆ ಅಂದಾಜು ಮಾಡಿದೆ. ಈ ಮಧ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ, 9 ಲಕ್ಷ ಹೆಕ್ಟೇರ್ ಬಿತ್ತನೆ ಪ್ರಮಾಣ ಕೂಡ ಕಡಿಮೆ ಯಾಗಿದೆ. ಇದೆಲ್ಲದರ ಪರಿಣಾಮ ವಾಡಿಕೆ ಮಳೆ ನಡುವೆಯೂ ಉತ್ಪಾದನೆ ಗಣನೀಯ ವಾಗಿ ಕುಂಠಿತಗೊಳ್ಳುವ ಸಾಧ್ಯತೆ ಇದೆ. ಒಂದು
ವೇಳೆ ಮಳೆ ಇದೇ ರೀತಿ ಮುಂದುವರಿದರೆ, ಕೊಂಚ ಚೇತರಿಸಿಕೊಳ್ಳುವ ಸಾಧ್ಯತೆಯಿದೆ ಎಂದೂ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಲಬುರಗಿ, ಯಾದಗಿರಿಯಲ್ಲಿ ಅತಿ ಹೆಚ್ಚು ಪ್ರದೇಶ ಮಳೆ ಅಭಾವದಿಂದ ಬಾಧಿತವಾಗಿದೆ. ಹಾಗಾಗಿ, ಈ ಭಾಗದ ರೈತರಿಗೆ ಇದರ ಪರಿಣಾಮ ತುಸು ಜೋರಾಗಿಯೇ ತಟ್ಟಲಿದೆ.
Related Articles
ಮುಖ್ಯವಾಗಿ ಭತ್ತ, ರಾಗಿಯಂತಹ ಆಹಾರ ಧಾನ್ಯಗಳಿಗೆ ಹೊಡೆತ ಬಿದ್ದಿರುವುದು ನಿಜ. ಆದರೆ, ಕಳೆದ ಒಂದು ವಾರದಿಂದ ಬೀಳುತ್ತಿರುವ ಮಳೆ ಆಶಾದಾಯಕವಾಗಿದೆ. ಈ ಮಳೆಯಿಂದ ಬೆಳೆಗಳು ತಕ್ಕಮಟ್ಟಿಗೆ ಚೇತರಿಸಿ ಕೊಳ್ಳುವ ಸಾಧ್ಯತೆಯಿದೆ. ಆಗ, ಬೆಳೆಗಳ ಬಾಧಿತ ಪ್ರಮಾಣ ತಗ್ಗಬಹುದೆಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಪ್ರಕಾಶ್ ಕಮ್ಮರಡಿ ವಿಶ್ವಾಸ ವ್ಯಕ್ತಪಡಿಸುತ್ತಾರೆ. ರಾಜ್ಯದಲ್ಲಿ ಬಿತ್ತನೆ ಗುರಿ ಇರುವುದು 73 ಲಕ್ಷ ಕ್ಟೇರ್. ವಾಡಿಕೆ ಬಿತ್ತನೆ ವಿಸ್ತೀರ್ಣ 65.74 ಲಕ್ಷ ಹೆಕ್ಟೇರ್. ಕಳೆದ ವರ್ಷ ಇದೇ ಅವಧಿ ಯಲ್ಲಿ 69.75 ಲಕ್ಷ ಬಿತ್ತನೆಯಾಗಿತ್ತು. ಆದರೆ, ಈ ಬಾರಿ ಇದುವರೆಗೆ 60.46 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಮುಂಗಾರಿನ ಕೃಷಿ ಉತ್ಪಾದನೆ ಗುರಿ 100.8 ಲಕ್ಷ ಟನ್. ಇದರಲ್ಲಿ ಶೆ. 20ರಿಂದ 25ರಷ್ಟು ಕುಂಠಿತವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
Advertisement
781.6 ಮಿ.ಮೀ. ವಾಡಿಕೆ ಮಳೆ ರಾಜ್ಯದಲ್ಲಿ ಜೂನ್ 1ರಿಂದ ಸೆ. 22ರವರೆಗಿನ ವಾಡಿಕೆ ಮಳೆ 781.6 ಮಿ.ಮೀ. ಬಿದ್ದ ಮಳೆ 712 ಮಿ.ಮೀ. ಅಂತರ ಶೇ. 9ರಷ್ಟು ಇರುವುದರಿಂದ ವಾಡಿಕೆ ಮಳೆ ಎಂದು ಪರಿಗಣಿಸಲಾಗುವುದು. ಪ್ರದೇಶವಾರು ಮಳೆ ಪ್ರಮಾಣ ಹೀಗಿದೆ (ಮಿ.ಮೀ.ಗಳಲ್ಲಿ).