Advertisement

10 ಲಕ್ಷ ನಕಲಿ ವಿದ್ಯಾರ್ಥಿಗಳು ಮಾಯ!

08:15 AM Feb 11, 2018 | |

ಲಕ್ನೋ: ಪ್ರೌಢ ಶಿಕ್ಷಣ ವ್ಯವಸ್ಥೆಯು ದಂಧೆಯ ವಿರುದ್ಧ ಉತ್ತರ ಪ್ರದೇಶ ಸರಕಾರ ಸಾರಿರುವ ಸಮರದ ಪರಿಣಾಮವಾಗಿ, ಸದ್ಯಕ್ಕೆ ನಡೆಯುತ್ತಿರುವ 10ನೇ ತರಗತಿ ಪಬ್ಲಿಕ್‌ ಪರೀಕ್ಷೆಯನ್ನು ಸುಮಾರು 10 ಲಕ್ಷ ನಕಲಿ ವಿದ್ಯಾರ್ಥಿಗಳು ಕೈಬಿಟ್ಟಿದ್ದಾರೆ. ಮೂಲಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ 10ನೇ ತರಗತಿ ಪರೀಕ್ಷೆಗೆ ಅಸಲಿಗಿಂತ ನಕಲಿ ವಿದ್ಯಾರ್ಥಿಗಳೇ ಬಂದು ತುಂಬಿಕೊಳ್ಳುತ್ತಿದ್ದುದು ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಾಗಿತ್ತು. 

Advertisement

ಈ ಬಾರಿಯ 10 ಮತ್ತು 12ನೇ ತರಗತಿ ಪರೀಕ್ಷೆಗಳಿಗೆ ಒಟ್ಟು 66 ಲಕ್ಷ ವಿದ್ಯಾರ್ಥಿಗಳು ಹಾಜರಾಗಬೇಕಿತ್ತು. ಆದರೆ, ಪರೀಕ್ಷೆಯಾದ ದಿನದಿಂದಲೇ
(ಫೆ. 6) ಶಿಕ್ಷಣಾಧಿಕಾರಿಗಳು ಪರೀಕ್ಷಾ ಕೇಂದ್ರಗಳ ಮೇಲೆ ದಿಢೀರ್‌ ದಾಳಿ ನಡೆಸಿ ನಕಲಿ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಲಾರಂಭಿಸಿದರು. ಇದರ ಪರಿಣಾಮ ವಾಗಿ, ಪರೀಕ್ಷೆ ಆರಂಭವಾದ ಕೇವಲ 4 ದಿನ ಗಳಲ್ಲಿ 10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗದೇ “ಗಾಯಬ್‌’ ಆಗಿದ್ದಾರೆ!

Advertisement

Udayavani is now on Telegram. Click here to join our channel and stay updated with the latest news.

Next