ಗಾಂಧಿನಗರ: ಕಳೆದ 24 ಗಂಟೆಗಳಲ್ಲಿ ಗುಜರಾತ್‌ನಲ್ಲಿ ನವರಾತ್ರಿ ಆಚರಣೆಯ ಸಂದರ್ಭದಲ್ಲಿ ಗರ್ಬಾ ಕಾರ್ಯಕ್ರಮದ ವೇಳೆ ಕನಿಷ್ಠ 10 ಜನರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಬಲಿಪಶುಗಳಲ್ಲಿ ಹದಿಹರೆಯದವರಿಂದ ಮಧ್ಯವಯಸ್ಕವರೇ ಹೆಚ್ಚು ಮಂದಿ ಎಂದು ತಿಳಿದುಬಂದಿದೆ, ಅಲ್ಲದೆ ಬರೋಡಾದ ದಾಭೋಯ್‌ನ 13 ವರ್ಷದ ಹುಡುಗ ಗರ್ಬಾ ಕಾರ್ಯಕ್ರಮದ ವೇಳೆ ಹೃದಯಾಘಾತದಿಂದ ಮೃತಪಟ್ಟ ಕಿರಿಯ ವ್ಯಕ್ತಿ ಎಂದು ಹೇಳಳಾಗಿದೆ.
ಶುಕ್ರವಾರ ಅಹಮದಾಬಾದ್‌ನ 24 ವರ್ಷದ ಯುವಕ ಗಾರ್ಬಾ ಆಡುತ್ತಿದ್ದಾಗ ಹಠಾತ್ ಕುಸಿದು ಮೃತಪಟ್ಟಿದ್ದಾನೆ. ಅದೇ ರೀತಿ ಕಪದ್ವಾಂಜ್‌ನ 17 ವರ್ಷದ ಬಾಲಕ ಕೂಡ ಗಾರ್ಬಾ ಆಡುವ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ರಾಜ್ಯದಲ್ಲಿ ಕಳೆದೊಂದು ದಿನದಲ್ಲಿ ಇದೇ ರೀತಿಯ ಪ್ರಕರಣಗಳು ಸರಣಿಯಾಗಿ ವರದಿಯಾಗಿವೆ.
ಇದರ ಜೊತೆಗೆ, ನವರಾತ್ರಿಯ ಮೊದಲ ಆರು ದಿನಗಳಲ್ಲಿ, 108 ತುರ್ತು ಆಂಬ್ಯುಲೆನ್ಸ್ ಸೇವೆಗಳಿಗೆ ಹೃದಯ ಸಂಬಂಧಿ ಸಮಸ್ಯೆಗಳಿಗೆ 521 ಕರೆಗಳು ಮತ್ತು ಉಸಿರಾಟದ ತೊಂದರೆಗಾಗಿ ಹೆಚ್ಚುವರಿ 609 ಕರೆಗಳು ಬಂದಿವೆಯೆಂದು ಹೇಳಲಾಗಿದೆ. ಗಾರ್ಬಾ ಆಚರಣೆಗಳು ಸಾಮಾನ್ಯವಾಗಿ ಸಂಜೆ 6 ರಿಂದ ಮಧ್ಯರಾತ್ರಿ 2 ಗಂಟೆಯ ನಡುವೆ ನಡೆಯುತ್ತಿದ್ದು ಈ ಅವಧಿಯಲ್ಲೇ ಕರೆಗಳು ಬಂದಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಘಟನೆ ಬಳಿಕ ಗಾರ್ಬಾ ಕಾರ್ಯಕ್ರಮ ನಡೆಯುವ ಸ್ಥಳಗಳ ಸಮೀಪವಿರುವ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ರಾಜ್ಯ ಸರ್ಕಾರ ಎಚ್ಚರಿಕೆಯನ್ನು ನೀಡಿದ್ದು, ಆಸ್ಪತ್ರೆ ಸಿಬ್ಬಂದಿಗಳು ಜಾಗರೂಕರಾಗಿರುವಂತೆ ಸೂಚನೆ ನೀಡಿದೆ ಅಲ್ಲದೆ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡುವಂತೆ ಸಲಹೆಯನ್ನೂ ನೀಡಿದೆ.
ಅಷ್ಟು ಮಾತ್ರವಲ್ಲದೆ ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್‌ಗಳಿಗೆ ಗರ್ಬಾ ಕಾರ್ಯಕ್ರಮದ ಬಳಿ ತ್ವರಿತವಾಗಿ ಪ್ರವೇಶಿಸಲು ಕಾರಿಡಾರ್‌ಗಳನ್ನು ರಚಿಸಲು ಗರ್ಬಾ ಸಂಘಟಕರಿಗೆ ಸೂಚನೆ ನೀಡಿದೆ.
ಇದಕ್ಕಿಂದ ಮಿಗಿಲಾಗಿ ಗರ್ಬಾ ಆಯೋಜಕರು ಕಾರ್ಯಕ್ರಮ ನಡೆಯುವ ಸ್ಥಳದಲ್ಲೇ ವೈದ್ಯರು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಸೂಚನೆಯನ್ನೂ ನೀಡಿದ್ದು ಅಷ್ಟುಮಾತ್ರವಲ್ಲದೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಪರ್ಧಾಳುಗಳಿಗೆ ಬೇಕಾಗುವಷ್ಟು ನೀರಿನ ವ್ಯವಸ್ಥೆಯನ್ನು ಮಾಡಲು ಸೂಚನೆಯನ್ನು ನೀಡಿದೆ.
ಇದನ್ನೂ ಓದಿ: K47: ಹೊಸ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ; ಕಿಚ್ಚನಿಗೆ ನಾಯಕಿಯಾದ ಕರಾವಳಿ ಕುವರಿ