Advertisement
ಇಂದು ಕೆ.ಸಿ ಜನರಲ್ ಆಸ್ಪತ್ರೆಗೆ ಭೇಟಿ ನೀಡಿ ವ್ಯವಸ್ಥೆಗಳನ್ನ ಪರಿಶೀಲಿಸಿದ ಸಚಿವರು, ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಅವರೊಂದಿಗೆ ಸಭೆ ನಡೆಸಿದರು.
-ಸುಸಜ್ಜಿತ ಅತ್ಯಾಧುನಿಕ ಪ್ರಯೋಗ ಶಾಲೆಯ ನಿರ್ಮಾಣಕ್ಕೆ ಚಿಂತನೆ.
-ಆಸ್ಪತ್ರೆಯ ರೋಗಿಗಳಿಗೆ ಅವಶ್ಯಕವಿರುವ CT Scanning ಮತ್ತು MRI Scanning ಮಾಡಲು ಯಂತ್ರೋಪಕರಣಗಳು. ಮತ್ತು ಅವಶ್ಯಕವಾದ ಸಿಬ್ಬಂದಿಗಳ ನೇಮಕಕ್ಕೆ ತೀರ್ಮಾನ
-ಆಸ್ಪತ್ರೆಯಲ್ಲಿ ಹಾಲಿ ಇರುವ ಶವಗಾರ ಶಿಥಿಲಾವಸ್ಥೆಗೊಂಡಿದ್ದು ಹಾಗೂ ಕೋಲ್ಡ್ ಸ್ಟೋರೇಜ್ ಉಪಕರಣಗಳು ಹಳೆಯದಾಗಿರುವುದರಿಂದ ಹೊಸದಾದ ಶವಗಾರ ನಿರ್ಮಾಣಕ್ಕೆ ತೀರ್ಮಾನ.
-ಡಿಎನ್‌ಬಿ, ಪ್ಯಾರಾಮೆಡಿಕಲ್, ಬ್ರಿಡ್ಜ್ ಕೋರ್ಸ್‌ಗಳು ಸುಗಮವಾಗಿ ನಡೆಯಲು ಸುಸಜ್ಜಿತ ಪ್ರತ್ಯೇಕ ಅಕಾಡೆಮಿಕ್ ಬ್ಲಾಕ್.
-ಹೊಸ ಉಪಕರಣಗಳು ಹಾಗೂ ಪೀಠೋಪಕರಣಗಳ ಖರೀದಿ.
– ಆಸ್ಪತ್ರೆಯ ಒಳರೋಗಿಗಳಿಗೆ ಪಥ್ಯಾಹಾರ ತಯಾರಿಸಲು ಹೊಸ ಮಾಡ್ಯುಲರ್ ಸ್ಟೀಮ್ ಅಡುಗೆ ಮನೆ ನಿರ್ಮಾಣ.
– ಆಸ್ಪತ್ರೆಯಲ್ಲಿ ಹಾಲಿ ಇರುವ ನೀರಿನ ಶೇಖರಣೆ ಟ್ಯಾಂಕ್ ನವೀಕರಣ,
– ಆಸ್ಪತ್ರೆಯ ಆಡಳಿತಾತ್ಮಕ ಕಡತಗಳ ನಿರ್ವಹಣೆಗಾಗಿ ಪ್ರತ್ಯೇಕ ದಾಖಲಾತಿ ಕೊಠಡಿ.
– ಜಿ.ಎನ್.ಎಂ. ಶಾಲಾ ಹೊಸ ಕಟ್ಟಡ, ಮಹಿಳಾ ಮತ್ತು ಮಕ್ಕಳ ಘಟಕ ಮೇಲ್ದರ್ಜೆಗೆ.
– ಮಾಡ್ಯುಲರ್ ಲಾಂಡಿ ಹಾಗೂ ಯಂತ್ರೋಪಕರಣಗಳ ವ್ಯವಸ್ಥೆಗೆ ಪ್ಲಾನ್.
– ಆಸ್ಪತ್ರೆಯಲ್ಲಿನ ರೋಗಿಗಳ ಉಪಯೋಗಕ್ಕಾಗಿ ಪ್ರಸ್ತುತ ಇರುವ ಕಾಟ್ಸ್ (Cots) ಕೋವಿಡ್ ಸಮಯದಲ್ಲಿ ಹೈಪೋಕ್ಲೋರೈಡ್ ಸಲ್ಯೂಷನ್ ಸಿಂಪಡಿಸಿರುವುದರಿಂದ ತುಕ್ಕು ಹಿಡಿದಿದ್ದು ಪರಿಹಾರ ಕ್ರಮ ಕೈಗೊಳ್ಳಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ.
-ತುರ್ತು ಚಿಕಿತ್ಸಾ ಘಟಕಕ್ಕೆ Five Function Cots ಗಳು,Oxygen Flow Meters Jar ಗಳ ಅಳವಡಿಕೆ ನಿರ್ಧಾರ.
-ಆಸ್ಪತ್ರೆಯಲ್ಲಿ ಬಾಕಿ ಇರುವ ವಿದ್ಯುತ್ ಹಾಗೂ ನೀರಿನ ಬಿಲ್ಲುಗಳ ಪಾವತಿಗಾಗಿ 10 ಕೋಟಿ ಅಭಿವೃದ್ದಿ ಅನುದಾನ ಹೊರತುಪಡಿಸಿ, ರಾಜ್ಯದ ಅನುದಾನದಲ್ಲಿ ಬಳಸಿಕೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಸಲು ಮಾತ್ರ ಪಾವತಿಸಿ ಬಡ್ಡಿ ಮನ್ನಾಗೆ ಪ್ರಸ್ತಾವನೆ ಸಲ್ಲಿಸುವಂತೆ ಇದೇ ವೇಳೆ ಆರೋಗ್ಯ ಆಯುಕ್ತರಿಗೆ ಸೂಚಿಸಿದ್ದಾರೆ.