Advertisement
ಎಪ್ರಿಲ್ ಅವಧಿಯಲ್ಲಿ ರಬ್ಬರ್ ದರ ಏರುಮುಖ ಕಂಡಿದ್ದು, ಎ.8ಕ್ಕೆ ಕೆ.ಜಿ. ಒಂದಕ್ಕೆ 1ಎಕ್ಸ್ ಗ್ರೇಡ್‌ಗೆ 195 ರೂ. ತಲುಪಿತ್ತು. ಬಳಿಕ 200 ರೂ. ಗಡಿ ದಾಟಿ ಪ್ರಸ್ತುತ 1ಎಕ್ಸ್-245 ಹಾಗೂ 3-230 ಆಸುಪಾಸಿನಲ್ಲಿದೆ. ಸ್ಥಳೀಯವಾಗಿ 1ಎಕ್ಸ್ ಬಹಳ ವಿರಳವಾಗಿದ್ದು, ದೊಡ್ಡ ದೊಡ್ಡ ಎಸ್ಟೇಟ್‌ನಲ್ಲಿ ಮಾತ್ರ ಬೆಳೆಯಲಾಗುತ್ತಿದೆ. ಉಳಿದಂತೆ ಸ್ಥಳೀಯವಾಗಿ 3-4 ಗ್ರೇಡ್ ರಬ್ಬರ್ ಬೆಳೆಯಲಾಗುತ್ತದೆ. ಒಟ್ಟು 70 ರೀತಿಯ ವಸ್ತುಗಳಿಗೆ ರಬ್ಬರ್ ಉಪಯೋಗಿಸಲಾಗುತ್ತಿದೆ.
Related Articles
ಈ ಬಾರಿ ಹವಾಮಾನ ವೈಪರೀತ್ಯದಿಂದ ಭಾರತದಲ್ಲಿ ರಬ್ಬರ್ ಬೆಳೆ ಇಳುವರಿ ಕೀÒಣಿಸಿತ್ತು. ರಬ್ಬರ್ ಬೆಳೆಯುವ ಇತರ ದೇಶಗಳಲ್ಲೂ ಇಳುವರಿ ಹೊಡೆತದಿಂದ ಧಾರಣೆ ಏರಿಕೆಯಾಗಿದೆ. ಪೂರ್ವ ಮುಂಗಾರು ನಿರೀಕ್ಷಿತ ಮಟ್ಟದಲ್ಲಿ ಬಾರದಿದ್ದರಿಂದ ರಬ್ಬರ್ ಟ್ಯಾಪಿಂಗ್ ವಿಳಂಬವಾಗಿತ್ತು. ಪ್ರಸಕ್ತ ಮುಂಗಾರು ಅವಧಿಯಲ್ಲಿ ಈಗಾಗಲೇ ಎಲ್ಲೆಡೆ ರಬ್ಬರ್ ಸುತ್ತ ಕಳೆ ತೆಗೆದು ಪ್ಲಾಸ್ಟಿಕ್ ಅಳವಡಿಸಿದ್ದಾರೆ.
Advertisement
6.30 ಕೋಟಿ ರೂ. ಲಾಭಪ್ರಸ್ತುತ ರಬ್ಬರ್‌ಗೆ ಉತ್ತಮ ಬೇಡಿಕೆ ಇದ್ದು, ಉತ್ಪಾದನೆ ಕಡಿಮೆ ಇದೆ. ರಬ್ಬರ್ ಗಿಡಗಳನ್ನು ಕಡಿಯುವ ತಪ್ಪು³ ನಿರ್ಧಾರವನ್ನು ಕೃಷಿಕರು ಮಾಡಬಾರದು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಬ್ಬರ್‌ಗೆ ಬೇಡಿಕೆ ಏರಿಕೆ ಯಾಗುತ್ತಿದೆ. ಈ ವರ್ಷ ಬೆಲೆ ಏರಿಕೆಯಿಂದ ನಮ್ಮ ಸದಸ್ಯರಿಗೆ ಸುಮಾರು 6.30 ಕೋಟಿ ರೂ. ಲಾಭ ದೊರಕಿದೆ. ಮುಂದಿನ 10 ವರ್ಷದವರೆಗೆ ಈಗಿನ ಧಾರಣೆ ಸ್ಥಿರವಾಗಿರಲಿದೆ.
-ಶ್ರೀಧರ ಜಿ.ಭಿಡೆ, ಅಧ್ಯಕ್ಷರು,
ಉಜಿರೆ ರಬ್ಬರ್ ಸೊಸೈಟಿ -ಚೈತ್ರೇಶ್ ಇಳಂತಿಲ