Advertisement

ಅಬ್ಬಾ ಈ ವ್ಯಕ್ತಿ ಸರ್ಕಾರಕ್ಕೆ 21, 870ಕೋಟಿ ತೆರಿಗೆ ಪಾವತಿಸಬೇಕಾಗಿದೆ

04:45 PM Jan 24, 2017 | udayavani editorial |

ಹೊಸದಿಲ್ಲಿ : ದೇಶದಲ್ಲಿನ ಹೆಸರು ಬಹಿರಂಗಪಡಿಸದ ತೆರಿಗೆ ಪಾವತಿದಾರರೋರ್ವರು 2014-15ರ ಅಸೆಸ್‌ಮೆಂಟ್‌ ವರ್ಷಕ್ಕೆ ಸಂಬಂಧಿಸಿದಂತೆ ಸರಕಾರಕ್ಕೆ 21,870 ಕೋಟಿ ರೂ. ತೆರಿಗೆ ಪಾವತಿಸಬೇಕಾಗಿದೆ.

Advertisement

ವಿಶೇಷವೆಂದರೆ ಈ ಒಬ್ಬ ತೆರಿಗೆ ಪಾವತಿದಾರ ವ್ಯಕ್ತಿಯು ಸರಕಾರಕ್ಕೆ ಕೊಡಬೇಕಿರುವ ತೆರಿಗೆಯು ಎಲ್ಲ ಭಾರತೀಯ ತೆರಿಗೆ ಪಾವತಿದಾರರು ಕೊಡಬೇಕಿರುವ ತೆರಿಗೆಯ ಶೇ.11ರಷ್ಟು ಇದೆ.  ಆದಾಯ ತೆರಿಗೆ ಇಲಾಖೆಯು ಒದಗಿಸಿರುವ 2016ರ ತಾಜಾ ಅಂಕಿ ಅಂಶಗಳಿಂದ ಈ ಸಂಗತಿ ಬಹಿರಂಗವಾಗಿದೆ.

ಇನ್ನೂ ಒಂದು ವಿಶೇಷವೆಂದರೆ ದೇಶದಲ್ಲಿ ಕೇವಲ ಮೂವರು ತೆರಿಗೆ ಪಾವತಿದಾರರು ಮಾತ್ರವೇ ತಮ್ಮ ಔದ್ಯಮಿಕ ಆದಾಯ 500 ಕೋಟಿ ರೂ.ಗಳಿಗಿಂತ ಹೆಚ್ಚಿದೆ ಎಂದು ಘೋಷಿಸಿಕೊಂಡಿದ್ದಾರೆ. ಇದೇ ವೇಳೆ ಇಬ್ಬರು ವೈಯಕ್ತಿಕ ತೆರಿಗೆ ಪಾವತಿದಾರರು 2014-15ರಲ್ಲಿ 500 ಕೋಟಿ ರೂ. ಮೀರಿದ ದೀರ್ಘಾವಧಿ ಕ್ಯಾಪಿಟಲ್‌ ಗೇನ್ಸ್‌ ತೆರಿಗೆಯನ್ನು ಘೋಷಿಸಿಕೊಂಡಿದ್ದಾರೆ. ಈ ತೆರಿಗೆ ಪಾವತಿದಾರರ ಹೆಸರನ್ನು ಸರಕಾರ ಬಹಿರಂಗಪಡಿಸಿಲ್ಲ.

2016ರ ತಾಜಾ ಆದಾಯ-ತೆರಿಗೆ ಅಂಕಿ ಅಂಶಗಳಿಂದ ಇನ್ನೂ ಹಲವಾರು ಚೋದ್ಯದ ಸಂಗತಿಗಳು ಬಹಿರಂಗವಾಗಿವೆ:

1. ದೇಶದ ಅತ್ಯಂತ ಸಿರಿವಂತ ಶೇ.1 ಭಾರತೀಯರು, ದೇಶದ ಶೇ.58 ಸಂಪತ್ತಿನ ಒಡೆಯರಾಗಿದ್ದಾರೆ.

Advertisement

2, ದೇಶದ 57 ಬಿಲಿಯಾಧಿಪತಿಗಳ ಕೈಯಲ್ಲಿರುವ ಸಂಪತ್ತು ದೇಶದ ತಳಮಟ್ಟದ ಶೇ.70 ಮಂದಿ ಹೊಂದಿರುವ ಒಟ್ಟು ಸಂಪತ್ತಿಗೆ ಸಮನಾಗಿದೆ.

ಭಾರತಕ್ಕೆ ವ್ಯತಿರಿಕ್ತವಾಗಿ ಅಮೆರಿಕದ ಕತೆ ಬೇರೆಯೇ ಇದೆ : ಅಮೆರಿಕದಲ್ಲಿನ ಉನ್ನತ ಶೇ.1 ಸಿರಿವಂತರ ಕೈಯಲ್ಲಿ ದೇಶದ ಒಟ್ಟು ಆದಾಯದ ಶೇ.19 ಪಾಲು ಇದೆ. ಇವರು ದೇಶದಲ್ಲಿ ಪಾವತಿಯಾಗುತ್ತಿರುವ ತೆರಿಗೆಯ ಶೇ.38ರ ಪ್ರಮಾಣವನ್ನು ಪಾವತಿಸುತ್ತಿದ್ದಾರೆ. 

ವಿಶ್ವದ ಕತೆ ಇದಕ್ಕಿಂತ ಭಿನ್ನವಾಗಿದೆ : 2010ರ ವಿಶ್ವ ಜನಸಂಖ್ಯೆಯ ಅರ್ಧದಷ್ಟು ಬಡವರ ಕೈಯಲ್ಲಿದ್ದ ಸಂಪತ್ತಿಗೆ ಸಮವಾದ ಪ್ರಮಾಣದ ಸಂಪತ್ತು ಕೇವಲ 388 ಸಿರಿವಂತರ ಕೈಯಲ್ಲಿದೆ.

ವಿಶೇಷವೆಂದರೆ 2015ರಲ್ಲಿ ಇದು ಕೇವಲ 68 ಸಿರಿವಂತರ ಕೈಯಲ್ಲಿ ಕೇಂದ್ರೀಕೃತವಾಯಿತು !
ಆದಾಯ ತೆರಿಗೆ, 21,870 ಕೋಟಿ ರೂ. ಒಬ್ಬ ವ್ಯಕ್ತಿಯಿಂದ ಸಲ್ಲಬೇಕಿರುವ ಮೊತ್ತ

Advertisement

Udayavani is now on Telegram. Click here to join our channel and stay updated with the latest news.

Next