Advertisement

Nashik; ಗೋ ಮಾಂಸ ಸಾಗಿಸುತ್ತಿದ್ದ ಇಬ್ಬರ ಮೇಲೆ ಗುಂಪು ದಾಳಿ: ಓರ್ವ ಸಾವು

01:01 PM Jun 26, 2023 | Team Udayavani |

ನಾಸಿಕ್ : ಮಹಾರಾಷ್ಟ್ರದ ನಾಸಿಕ್‌ನಲ್ಲಿ ಕಾರಿನಲ್ಲಿ ದನದ ಮಾಂಸವನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಗುಂಪೊಂದು ಇಬ್ಬರನ್ನು ಅಮಾನುಷವಾಗಿ ಥಳಿಸಿದೆ ಎಂದು ಮಹಾರಾಷ್ಟ್ರ ಪೊಲೀಸರು ಸೋಮವಾರ ತಿಳಿಸಿದ್ದಾರೆ. ದಾಳಿಯ ಗಾಯಗಗೊಂಡ ಇಬ್ಬರಲ್ಲಿ ಒಬ್ಬ ಸಾವನ್ನಪ್ಪಿದ್ದಾನೆ.

Advertisement

ನಾಸಿರ್ ಶೇಖ್ ಮತ್ತು ಅಫಾನ್ ಅಬ್ದುಲ್ ಮಜೀದ್ ಅನ್ಸಾರಿ ಶನಿವಾರ (ಜೂನ್ 24) ಮುಂಬೈಗೆ ಪ್ರಯಾಣಿಸುತ್ತಿದ್ದರು. ಅವರು ಸಿನ್ನಾರ್ ಘೋಟಿ ಹೆದ್ದಾರಿಯಲ್ಲಿದ್ದಾಗ, ಅವರ ಕಾರನ್ನು ಜನರ ಗುಂಪು ತಪಾಸಣೆಗಾಗಿ ನಿಲ್ಲಿಸಿದೆ. ಈ ವೇಳೆ ದನದ ಮಾಂಸ ಪತ್ತೆಯಾಗಿದೆ ಎನ್ನಲಾಗಿದೆ. ನಂತರ ಸುಮಾರು 15 ಜನರು ಕಬ್ಬಿಣದ ರಾಡ್ ಮತ್ತು ದೊಣ್ಣೆಗಳಿಂದ ಇಬ್ಬರ ಮೇಲೆ ಹಲ್ಲೆ ನಡೆಸಿದ್ದು, ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅಫಾನ್ ಅಬ್ದುಲ್ ಮಜೀದ್ ಅನ್ಸಾರಿ ಸಾವನ್ನಪ್ಪಿದ್ದಾರೆ. ಕೊಲೆ ಪ್ರಕರಣ ದಾಖಲಾಗಿದೆ.

ಮಾರ್ಚ್‌ನಲ್ಲಿ ಇದೇ ರೀತಿಯ ಘಟನೆಯಲ್ಲಿ, ಬಿಹಾರದ ಸರನ್ ಜಿಲ್ಲೆಯಲ್ಲಿ 56 ವರ್ಷದ ವ್ಯಕ್ತಿಯನ್ನು ಗೋಮಾಂಸ ಸಾಗಿಸುತ್ತಿದ್ದನೆಂಬ ಶಂಕೆಯ ಮೇಲೆ ಹತ್ಯೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next