Advertisement

1.2 ಕೋಟಿ ವೈದ್ಯಕೀಯ ಸಲಹೆ; ಟೆಲಿಮೆಡಿಸಿನ್‌ ಬಳಕೆ ಕರ್ನಾಟಕ ನಂ.2

02:05 PM Sep 22, 2021 | Team Udayavani |

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿದ ಟೆಲಿಮೆಡಿಸಿನ್‌ ವ್ಯವಸ್ಥೆ, ಇ-ಸಂಜೀವಿನಿ ಅಡಿಯಲ್ಲಿ 1.2 ಕೋಟಿ ಮಂದಿ ಸೇವೆಗಳನ್ನು ಪಡೆದಿದ್ದಾರೆ. ಈ ಪೈಕಿ ಕರ್ನಾಟಕ ಮೊದಲ ಹತ್ತು ಸ್ಥಾನಗಳ ಪೈಕಿ ದ್ವಿತೀಯ ಸ್ಥಾನದಲ್ಲಿದೆ.

Advertisement

ಇದನ್ನೂ ಓದಿ:ಒಂದೇ ಗಿಡದಲ್ಲಿ 100ಕ್ಕೂಹೆಚ್ಚು ಶೇಂಗಾ ಕಾಯಿ!

ರಾಜ್ಯದಲ್ಲಿ 22,57,994 ಸಲಹೆಗಳನ್ನು ನೀಡಲಾಗಿದೆ. ಈ ಪಟ್ಟಿಯಲ್ಲಿ ಆಂಧ್ರಪ್ರದೇಶ 37,04,258 ಸಲಹೆಗಳನ್ನು ನೀಡುವ ಮೂಲಕ ಮೊದಲ ಸ್ಥಾನದಲ್ಲಿದೆ. ತಮಿಳುನಾಡು ತೃತೀಯ, ಉತ್ತರ ಪ್ರದೇಶ ನಾಲ್ಕನೇ ಸ್ಥಾನಗಳಲ್ಲಿವೆ. ಗುಜರಾತ್‌, ಮಧ್ಯಪ್ರದೇಶ, ಬಿಹಾರ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕೇರಳ ಇ-ಸಂಜೀವಿನಿ ವ್ಯವಸ್ಥೆಯನ್ನು ಅತ್ಯುತ್ತಮವಾಗಿ ಬಳಕೆ ಮಾಡಿಕೊಂಡಿವೆ ಎಂದು ಕೇಂದ್ರ ಆರೋಗ್ಯಸಚಿವಾಲಯ ಮಂಗಳವಾರ ತಿಳಿಸಿದೆ.

ಕೊರೊನಾ ಸೋಂಕು ಹೆಚ್ಚಿನ ಸಮಸ್ಯೆಗೆ ಕಾರಣವಾಗಿದ್ದ ಸಂದರ್ಭದಲ್ಲಿ ಇತರ ಆರೋಗ್ಯ ಸಮಸ್ಯೆಗಳಿಗೆ ವೈದ್ಯಕೀಯ ಸಲಹೆ ಮತ್ತು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆಯುಷ್ಮಾನ್‌ ಭಾರತ್‌- ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ ಮತ್ತು ಹಿರಿಯ ನಾಗರಿಕರಿಗಾಗಿ ದೂರವಾಣಿ ಮೂಲಕ ಆರೋಗ್ಯ ಸಲಹೆ ನೀಡುವ ಇ-ಸಂಜೀವಿನಿ ಎಂಬ 2 ವ್ಯವಸ್ಥೆಗಳನ್ನು ಜಾರಿಗೊಳಿಸಲಾಗಿತ್ತು. 2019ರಲ್ಲಿ ಕೇಂದ್ರ ಸರ್ಕಾರ ಅದನ್ನು ಜಾರಿಗೊಳಿಸಿದ್ದರೆ, ರಾಜ್ಯಗಳ ಮಟ್ಟದಲ್ಲಿ ಆಂಧ್ರಪ್ರದೇಶ ಮೊದಲು ಅದನ್ನು ಅನುಷ್ಠಾನಗೊಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next