Advertisement
ಮಧ್ಯಾಹ್ನ 1.15 ಕ್ಕೆ ಸಣ್ಣದಾಗಿ ಆರಂಭವಾದ ಮಳೆ ಏಕಾಏಕಿ ಸುರಿಯ ತೊಡಗಿತು. ನೋಡ ನೋಡುತ್ತಿದ್ದಂತೆ ತಗ್ಗು ಪ್ರದೇಶವೆಲ್ಲಾ ಜಲಾವೃತವಾಗಿ ಒಳ ಚರಂಡಿಗಳು, ಕಟ್ಟಡಗಳು, ವಾಸದ ಮನೆಗಳು ಸೇರಿದಂತೆ ಹಲವು ಕಡೆ ನೀರು ಪ್ರವಾಹದ ರೂಪದಲ್ಲಿ ಹರಿಯಿತು.
Related Articles
Advertisement
ರಾಷ್ಟ್ರೀಯ ಹೆದ್ದಾರಿ ಡಾ| ಬಸವಂತಪ್ಪ ಕ್ಲಿನಿಕ್ ಮಗ್ಗುಲಲ್ಲಿ ವೆಂಕಟೇಶ್ವರ ನಗರಕ್ಕೆ ಸಾಗುವ ರಸ್ತೆಯಲ್ಲಿ ನೀರು ನುಗ್ಗಿದ್ದು ಇಡ್ಲಿ ರವಿ, ಜಯಣ್ಣ ಅವರ ಮನೆಗಳಿಗೆ ನೀರು ನುಗ್ಗಿ ನಷ್ಟ ಸಂಭವಿಸಿದೆ. ಮಂಗಲಜ್ಯೋತಿ ಮುಂದೆ ಸಂಗ್ರಹವಾಗಿರುವ ನೀರನ್ನು ಪುರಸಭೆ ವತಿಯಿಂದ ಮೋಟಾರ್ ಮೂಲಕ ಎತ್ತುವ ಕೆಲಸ ಆರಂಭವಾಗಿದ್ದು. ಸುಮಾರು ಗಂಟೆಗಳೇ ಇದಕ್ಕೆ ತಗುಲಿವೆ. ಶಾಸಕ ಬೆಳ್ಳಿಪ್ರಕಾಶ್ ಖುದ್ದಾಗಿ ಪಟ್ಟಣದ ಅನೇಕ ಭಾಗಗಳಿಗೆ ತೆರಳಿ ಮಳೆಹಾನಿ ವೀಕ್ಷಿಸಿದ್ದಲ್ಲದೆ ಸಂಬಂಧಪಟ್ಟ ಅಧಿಕಾರಿಗಳಿಗೆ ತುರ್ತಾಗಿ ಪರಿಹಾರ ಕಾಮಗಾರಿ ಕೈಗೊಳ್ಳಲು ಸೂಚಿಸಿದರು. ಮಳೆ ಹಾವಳಿ ಬಳಿಕ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಪದೇ ಪದೇ ಸಮಸ್ಯೆ ಉದ್ಭವವಾಗುತ್ತಿರುವುದರಿಂದ ಹೆದ್ದಾರಿ ಪ್ರಾ ಧಿಕಾರದ ಅ ಧಿಕಾರಿಗಳು ಪುರಸಭೆ ಅಧಿ ಕಾರಿಗಳ ಸಭೆ ಕರೆದು ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರಿಕೆಗೆ ಮಾಹಿತಿ ನೀಡಿದರು.
ಮಂಗಲ್ ಜ್ಯೋತಿ ಶೋರೂಂ ಮಾಲೀಕ ಮಹಾವೀರ ಸುರಾನ ಮಾತನಾಡಿ, ಮಳೆ ನೀರು ವ್ಯಾಪಕವಾಗಿ ಸಂಗ್ರಹವಾಗುತ್ತಿದ್ದಾಗ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಸಮಸ್ಯೆಯನ್ನು ತೋಡಿಕೊಂಡು ಪರಿಹಾರಕ್ಕಾಗಿ ಕರೆದರೆ ಅಲ್ಲಿನ ಸಿಬ್ಬಂದಿ ತಮಗೆ ಆದೇಶವಿಲ್ಲ ಎಂದು ಕುಂಟು ನೆಪ ಹೇಳಿದ್ದು ಬೇಸರ ತಂದಿದೆ. ಮಳೆಯ ನೀರು ನುಗ್ಗಿರುವುದರಿಂದ ಸುಮಾರು 70 ಲಕ್ಷ ರೂ.ಗೂ ಹೆಚ್ಚಿನ ಪ್ರಮಾಣದಲ್ಲಿ ನಷ್ಟವಾಗಿದೆ ಎಂದರು.