Advertisement
ಝೈಕೋವ್-ಡಿ ಎನ್ನುವುದು ಮೂರು ಡೋಸ್‌ನ ಲಸಿಕೆಯಾಗಿದೆ. ಇದನ್ನು ಟ್ರೋಪಿಸ್ ಎಂಬ ಸೂಜಿರಹಿತ ವ್ಯವಸ್ಥೆ ಮೂಲಕ ನೀಡಲಾಗುತ್ತದೆ. ಇದರಿಂದಾಗಿ ಅಡ್ಡ ಪರಿಣಾಮವೂ ಕಡಿಮೆಯಿರುತ್ತದೆ ಎಂದು ಹೇಳಲಾಗಿದೆ.
ಭಾನುವಾರದಿಂದ ಸೋಮವಾರಕ್ಕೆ ದೇಶದಲ್ಲಿ 35,499 ಮಂದಿಗೆ ಸೋಂಕು ತಗುಲಿದ್ದು 447 ಮಂದಿ ಸಾವಿಗೀಡಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4,02,188ಕ್ಕಿಳಿದಿದೆ. ಗುಣಮುಖ ಪ್ರಮಾಣ ಶೇ.97.39ಕ್ಕೇರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇದನ್ನೂ ಓದಿ:ತಿಂಗಳಂತ್ಯದಲ್ಲಿ ವಿದ್ಯಾಗಮ ನಿರ್ಧಾರ: ಶಿಕ್ಷಣ ಸಚಿವ ನಾಗೇಶ್
Related Articles
ಅಮೆರಿಕದಲ್ಲಿ ಕೋವಿಡ್ ಡೆಲ್ಟಾ ರೂಪಾಂತರಿಯ ಅಬ್ಬರ ತೀವ್ರಗೊಂಡಿದ್ದು, ದಿನಕ್ಕೆ ಲಕ್ಷ ದಷ್ಟು ಪ್ರಕರಣಗಳು ಪತ್ತೆಯಾಗುತ್ತಿವೆ. 24 ಲಕ್ಷ ಜನ ಸಂಖ್ಯೆಯಿರುವ ಆಸ್ಟಿನ್ ನಗರದಲ್ಲಿ ಈಗ ಖಾಲಿಯಿರುವುದು ಕೇವಲ 6 ಐಸಿಯು ಬೆಡ್‌ಗಳು. ಇದು ಪರಿಸ್ಥಿತಿಯ ಭೀಕರತೆಯನ್ನು ತೋರಿಸಿದೆ. ಇಲ್ಲಿನ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಕೋವಿಡ್ ನಿಯಂತ್ರಣದಲ್ಲಿ ಅಮೆ ರಿಕವು ವಿಫಲವಾಗುತ್ತಿದೆ ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆ ನಿರ್ದೇಶಕ ಫ್ರಾನ್ಸಿಸ್ ಕೋಲಿನ್ಸ್ ಹೇಳಿದ್ದಾರೆ.
Advertisement