Advertisement

ಅಂಗವಿಕಲ ಮಕ್ಕಳಿಗಾಗಿ 4 ವರ್ಷದ ಗೌರವಧನ ನೀಡಿದ ಜಿಪಂ ಸದಸ್ಯ

03:33 PM Jul 08, 2017 | |

ಜೇವರ್ಗಿ: ವಿಶೇಷ ಅಗತ್ಯವುಳ್ಳ ಅಂಗವಿಕಲ ಮಕ್ಕಳ ಸಂಪನ್ಮೂಲ ಕೇಂದ್ರದ ಸಲಕರಣೆಗಾಗಿ ತಮ್ಮ ನಾಲ್ಕು ವರ್ಷದ ಗೌರವಧನ
ನೀಡುತ್ತೇನೆ ಎಂದು ಜಿಪಂ ಸದಸ್ಯ ಶಿವರಾಜ ಪಾಟೀಲ ರದ್ದೇವಾಡಗಿ ಹೇಳಿದರು.

Advertisement

ಪಟ್ಟಣದ ಬಿಆರ್‌ಸಿ ಕಚೇರಿ ಆವರಣದಲ್ಲಿ ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸರ್ವ ಶಿಕ್ಷಣ ಅಭಿಯಾನ ಹಾಗೂ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶೇಷ ಅಗತ್ಯವುಳ್ಳ ಅಂಗವಿಕಲ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರವನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಕ್ಕಳಲ್ಲಿರುವ ಪ್ರತಿಭೆ ಹೊರಬರಲು ಹಲವು ವೈಕಲ್ಯಗಳು ಅವರನ್ನು ತೊಂದರೆಗೀಡು ಮಾಡುತ್ತಿವೆ. ಅಂತಹ ಕಷ್ಟ ಮೆಟ್ಟಿ ನಿಂತಿರುವ ಸಾಧಕರು ಅಷ್ಟೇ ಪ್ರಮಾಣದಲ್ಲಿದ್ದಾರೆ. ಯಾವುದೇ ಕಾರಣದಿಂದ ಅಂಗವೈಕಲ್ಯ ಹೊಂದಿರುವ ಮಗು ನಿತ್ಯ ಸಂಕಟ ಅನುಭವಿಸಬಾರದು. ಈ ಕಾರಣದಿಂದ ನನ್ನ 4 ವರ್ಷದ
ಜಿಪಂ ಸದಸ್ಯತ್ವದ ಗೌರವಧನವನ್ನು ಈ ಮಕ್ಕಳ ಸಲಕರಣೆಗಾಗಿ ವಿನಿಯೋಗಿಸಲಾಗುವುದು ಎಂದರು.

ಅಂಗವಿಕಲ ಮಕ್ಕಳಲ್ಲೂ ಪ್ರತಿಭೆಗೆ ಕೊರತೆ ಇಲ್ಲ. ಅವರು ಉನ್ನತ ಸಾಧನೆ ಮಾಡುತ್ತಿದ್ದಾರೆ. ಆದರೆ ಕೆಲವರಿಗೆ ಆರೋಗ್ಯದ ಭಾಗ್ಯ ಸಿಗುವುದು ತುಂಬಾ ವಿರಳವಾಗುತ್ತಿರುವ ಈ ದಿನಗಳಲ್ಲಿ ಸರಕಾರವೇ ಇಂತಹ ಯೋಜನೆ ಹಾಕಿಕೊಂಡಿರುವುದು ಸಂತಸ ಎಂದರು.
ಇದಕ್ಕೂ ಮುನ್ನ ಜಿಪಂ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕ್ಕಿ ಚನ್ನಮಲ್ಲಯ್ಯ ಹಿರೇಮಠ ಶಿಬಿರ ಉದ್ಘಾಟಿಸಿದರು.
ಹುಬ್ಬಳ್ಳಿಯ ಮನೋವಿಕಾಸ ತಂಡದ ವೈದ್ಯರು ಅಂಗವೈಕಲ್ಯ, ಶ್ರವಣ ದೋಷ ಹಾಗೂ ಬುದ್ದಿಮಾಂಧ್ಯ ಮಕ್ಕಳಿಗೆ ವೈದ್ಯಕೀಯ
ಪರೀಕ್ಷೆ ನಡೆಸಿದರು. ಬಿಇಒ ಮಜಹರ್‌ ಹುಸೇನ, ಬಿಆರ್‌ಸಿ ಡಾ| ನಿಂಗರಾಜ ಮೂಲಿಮನಿ, ಶರಣಪ್ಪ ಸುಂಗಠಾಣ, ಡಿ.ಬಿ.ಪಾಟೀಲ, ಶರಣಪ್ಪ ಹೊಸಮನಿ, ಗುರುಬಸಪ್ಪ ಚಾಂದಕವಟೆ, ಗುಡುಲಾಲ ಶೇಖ,  ಮರೆಪ್ಪ ಮೂಲಿಮನಿ, ನೋಡಲ್‌ ಅಧಿಕಾರಿ ಗೋಪಾಲಕೃಷ್ಣ,
ನಾನಾಗೌಡ ಕೂಡಿ, ಗುರುಶಾಂತಪ್ಪ ಚಿಂಚೋಳಿ, ಡಾ|ವಿಜಯಕುಮಾರ ಹಿರೇಮಠ, ವಿರುಪಾಕ್ಷ ಅಡ್ಡರ್ಗಿ, ಪ್ರೀಯಾಂಕಾ ಅಡ್ಡರ್ಗಿ, ಪ್ರಕಾಶ, ಶಿವಕುಮಾರ ಹಿರೇಮಠ, ಮಹಾನಂದಾ, ಬಸವರಾಜ ತೇಲ್ಕರ್‌, ಗಣಪತಿ ಬಜೇಂತ್ರಿ, ಮಲ್ಲಣ್ಣಗೌಡ ಪಾಟೀಲ, ಪೀರಸಾಬ ಮುಲ್ಲಾ ಹಾಗೂ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next