ದೇವನಹಳ್ಳಿ: ಅಧಿಕಾರಿಗಳು ಕೆಡಿಪಿ ಸಭೆಗೆ ಬರುವಾಗ ಸಮಗ್ರ ಮಾಹಿತಿ ತರಬೇಕು. ಪ್ರತಿಯೊಂದು ವಿಚಾರವು ಸಭೆ ಗಮನಕ್ಕೆ ತರಬೇಕು ಎಂದು ಜಿಪಂ ಅಧ್ಯಕ್ಷ ವಿ. ಪ್ರಸಾದ್ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಭೆ(ಕೆಡಿಪಿ)ಯಲ್ಲಿಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಿನ ನಲ್ಲೂರು ವ್ಯಾಪ್ತಿಯ ಮಲ್ಲೇಪುರ ರೇಷ್ಮೆ ಕೃಷಿ ಕ್ಷೇತ್ರದಲ್ಲಿನ ವಸತಿ ಗೃಹ ಆವರಣದಲ್ಲಿ ಅನಧಿಕೃತ ಶೆಡ್ ಹಾಕಿಕೊಂಡಿದ್ದು, ಕೂಡಲೇ ತೆರವುಗೊಳಿಸಬೇಕು ಎಂದು ಜಿಪಂ ಅಧ್ಯಕ್ಷ ವಿ. ಪ್ರಸಾದ್ ರೇಷ್ಮೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಗತಿ ಇಲ್ಲ: ಜಿಲ್ಲೆಯಲ್ಲಿ ಲಕ್ಷ ನರೇಗಾ ಮಾನವ ದಿನಗಳಲ್ಲಿ ಸರಿಯಾದ ಪ್ರಗತಿ ಆಗಿಲ್ಲ. ಇನ್ನೂ 63 ಸಾವಿರ ಮಾನವ ದಿನ ಜಿಲ್ಲೆಯಲ್ಲಿ ಮುಗಿಸಬೇಕಾಗಿದೆ. ಕೆರೆ ಹೂಳೆತ್ತುವುದು, ಕಾಲುವೆ ನಿರ್ಮಾಣ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಇನ್ನು 4 ದಿವಸದ ಒಳಗಾಗಿ ಪ್ರಗತಿ ಸಾಧಿಸಬೇಕು. ಅಂಗನವಾಡಿಗೆ ಕಿಚನ್ ಗಾರ್ಡನ್ ನಿರ್ಮಾಣಕ್ಕೆ ಸಸಿಗಳನ್ನು ಕೂಡಲೇ ವಿತರಿಸಬೇಕು ಎಂದರು.
ವಿದ್ಯುತ್ ಸಂಪರ್ಕ ನೀಡಿ: 2ನೇ ಹಂತದಲ್ಲಿ ಕೊರೊನಾಗೆ ಲಸಿಕೆ ನೀಡುತ್ತಿದ್ದ ನಮಗೆ ಪರಿಚಯವಿರುವ ಅಧಿಕಾರಿಗಳಿಗೆ ತಿಳಿಸುತ್ತೇವೆ. ಗಂಗಾಕಲ್ಯಾಣ ಯೋಜನೆಯಲ್ಲಿ ಬಾಕಿ ಇರುವ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡಬೇಕು. ವಸತಿ ಯೋಜನೆಯಲ್ಲಿ ನೀಡಿರುವ ಮನೆಗಳನ್ನು ನೀಡಬೇಕು. ಪ್ರತಿಯೊಂದು ಇಲಾಖೆ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಜಿಲ್ಲೆ ಅಭಿವೃದ್ಧಿ ಹೊಂದುತ್ತದೆ. ಹಾಸ್ಟೆಲ್‌ಗಳಲ್ಲಿ ಪ್ರವೇಶ ನೀಡುತ್ತಿಲ್ಲ ಎಂಬ ದೂರುಗಳಿದೆ. ಗ್ರಾಮೀಣ ಭಾಗದ ಬಸ್‌ಗಳ ಸಮಸ್ಯೆ ಹೆಚ್ಚಾಗಿರುವುದರಿಂದ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳು ಉಳಿದು ವ್ಯಾಸಂಗ ಮಾಡಲು ಅನುಕೂಲವಾಗುತ್ತದೆ ಎಂದರು.
ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಿಲ್ಲ: ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಂಜುಳಾ ಮಾತನಾಡಿ, ಈಗಾಗಲೇ ಲಸಿಕಾ ಕಾರ್ಯಕ್ರಮ 2ನೇ ಹಂತ ಶುರುವಾಗಿದೆ. ಶೇ.61.24ರಷ್ಟು ಲಸಿಕಾ ಕಾರ್ಯ ವಾಗಿದೆ. ಕೊರೊನಾ ಜಿಲ್ಲೆಯಲ್ಲಿ ಇಳಿಮುಖವಾಗಿದೆ. ಕೆಲವರು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಿಲ್ಲ ಎಂದರು.
ಇದನ್ನೂ ಓದಿ :ಶಾಸಕರ ಸೂಚನೆಗೂ ಬೆಲೆ ನೀಡದ ಅಧಿಕಾರಿಗಳು!
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಂಗಮಾರೇಗೌಡ ಮಾತನಾಡಿ, ಜಿಲ್ಲಾ ವ್ಯಾಪ್ತಿ 4 ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸರ್ಕಾರಿ ಶಾಲೆಗಳ ಜಮೀನು ಇಲಾಖೆ ಹೆಸರಿಗೆ ನೋಂದಾಯಿಸಲು ಈಗಾಗಲೇ ಎಲ್ಲ ರೀತಿಯ ಕ್ರಮ ಮಾಡಲಾಗಿದೆ. ಈ ಖಾತೆಗಳನ್ನು ಸಂಬಂಧಪಟ್ಟ ಗ್ರಾಪಂ ವ್ಯಾಪ್ತಿಯಲ್ಲಿ ಮಾಡಿಸಲಾಗುತ್ತಿದೆ. ಸಂಬಂಧ ಪಟ್ಟ ಅಧಿಕಾರಿ, ತಹಶೀಲ್ದಾರ್ ಅವರನ್ನು ಸಂಪರ್ಕಿಸಿ ನಿಯಮಾವಳಿ
ಪ್ರಕಾರ ಇ-ಖಾತೆ ಮಾಡಿಸಲಾಗುತ್ತಿದೆ ಎಂದರು. ಜಿಪಂ ಉಪಾಧ್ಯಕ್ಷೆ ರೂಪಾ, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ. ಮಂಜುನಾಥ್, ಜಿಪಂ ಉಪಕಾರ್ಯದರ್ಶಿ ಕೆ.ಕರಿಯಪ್ಪ, ಮುಖ್ಯ ಯೋಜನಾಧಿಕಾರಿ ಬಿ. ವಿನುತಾರಾಣಿ, ಮುಖ್ಯ ಲೆಕ್ಕಾಧಿಕಾರಿ ಡಿ. ರಮೇಶ್‌ರೆಡ್ಡಿ, ವಿವಿಧ ಇಲಾಖೆ ಜಿಲ್ಲಾಮಟ್ಟದ ಅಧಿಕಾರಿ ಇದ್ದರು.