Advertisement

ಅಮೆರಿಕದಲ್ಲಿ ಜೋಂಬಿ ಅಟ್ಯಾಕ್‌! ನಡು ರಸ್ತೆಯಲ್ಲೇ ಜನರಿಂದ ವಿಚಿತ್ರ ವರ್ತನೆ

01:14 AM Feb 24, 2023 | Team Udayavani |

ಜೋಂಬಿ! ಈ ಪದ ಕೇಳಿದ್ದೇವೆ, ಹಲವರು ಕೊರಿಯಾ ಮೂಲದ ಸಿನೆಮಾವೊಂದರಲ್ಲಿ ಮನುಷ್ಯರು ಜೋಂಬಿಗಳಂತಾಗುವ ದೃಶ್ಯ ವನ್ನೂ ನೋಡಿದ್ದೇವೆ. ಆದರೆ ಜೋಂಬಿ ಎನ್ನುವ ಪರಿಕಲ್ಪನೆಯೇ ಕಾಲ್ಪನಿಕ ಎಂದುಕೊಂಡಿದ್ದ­ರು. ಇಂದು ಅಮೆರಿಕದಲ್ಲಿ ಜೋಂಬಿ ನಿಜವಾಗಿಬಿಟ್ಟಿದೆ!

Advertisement

ರಸ್ತೆಯಲ್ಲಿ ಬಿದ್ದು ಒದ್ದಾಡುವ ಜನ
ಇತ್ತೀಚೆಗಷ್ಟೇ ಫಿಲಡೆಲ್ಫಿಯಾದಲ್ಲಿ ರಸ್ತೆಯಲ್ಲೇ ಮಹಿಳೆಯೊಬ್ಬರು ಜೋಂಬಿಯಂತೆ ವರ್ತಿಸಿದ್ದ ವೀಡಿಯೋ ವೈರಲ್‌ ಆಗಿತ್ತು. ಅಲ್ಲದೇ ಜನರ ಚರ್ಮ ಕೂಡ ಜೋಂಬಿಗಳಂತೆ ಕೊಳೆಯು ತ್ತಿರುವುದು ಆರೋಗ್ಯ ತಜ್ಞರಲ್ಲಿ ಆತಂಕ ಮೂಡಿಸಿದೆ. ಇದಕ್ಕೆಲ್ಲ ಕಾರಣ “ಜೋಂಬಿ ಡ್ರಗ್‌’.

ಜೋಂಬಿ ವರ್ತನೆ ಏಕೆ?
ಡ್ರಗ್‌ ಓವರ್‌ಡೋಸ್‌ ಆಗುತ್ತಿದ್ದಂತೆ ಹಲವು ರೀತಿಯ ಸಮಸ್ಯೆ ಎದುರಾ­ಗುತ್ತದೆ. ತೀವ್ರ ನಿದ್ರೆ, ಖನ್ನತೆ, ಮೈ ಮೇಲಿನ ನಿಯಂತ್ರಣ ತಪ್ಪು ವುದು ವರದಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಜನರು ಜೋಂಬಿ ಗಳ ರೀತಿಯೇ ವರ್ತಿಸುತ್ತಿದ್ದು, ಈ ಔಷಧ ಮನುಷ್ಯರನ್ನು ಜೋಂಬಿಗಳಾಗಿ ಪರಿವರ್ತಿ­ಸುತ್ತಿದೆಯೇ ಎನ್ನುವ ಆತಂಕವೂ ಮೂಡಿದೆ. ಡ್ರಗ್‌ ಓವರ್‌ಡೋಸ್‌ನಿಂದ 2020ರಲ್ಲಿ ಮೃತಪಟ್ಟವರಲ್ಲಿ ಶೇ.6.7 ಮಂದಿಯಲ್ಲಿ ಕ್ಸೆ„ಲಾಜಿನ್‌ ಅಂಶವಿರುವುದು ಪತ್ತೆಯಾಗಿತ್ತು. ಈಗ ಮತ್ತೆ ಅದರ ಅಕ್ರಮ ಬಳಕೆ ಹೆಚ್ಚಾಗಿರುವುದು ವರದಿಯಾಗಿದೆ.

ಏನಿದು ಜೋಂಬಿ ಡ್ರಗ್‌?
ಕ್ಸೆ„ಲಾಜಿನ್‌ ಅಥವಾ ಜೋಂಬಿ ಡ್ರಗ್‌ ಎನ್ನುವ ಔಷಧವನ್ನು ಪ್ರಾಣಿಗಳಿಗೆ ಮಾತ್ರ ಬಳಸಲು ಪ್ರಮಾಣೀಕರಿ­ಸಲಾಗಿದೆ. ಆದರೆ ನಿಷೇಧಿತ ಮಾದಕವಸ್ತು­ಗಳಲ್ಲಿಯೂ ಈ ಡ್ರಗ್‌ ಅನ್ನು ಅಕ್ರಮವಾಗಿ ಬಳಸುತ್ತಿರು­ವುದು ವರದಿಯಾಗಿದೆ. ಮನುಷ್ಯರು ಇದರ ಬಳಿಯಿರುವ ಮಾದಕ­ ವಸ್ತುಗಳನ್ನು ಸೇವಿಸು ತ್ತಿದ್ದಂತೆ ಡ್ರಗ್‌ ಓವರ್‌ ಡೋಸ್‌ ಆಗಿ ಸಾಯು ತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next