Advertisement

“ಶಾಲೆಗಳಲ್ಲಿ ಶೂನ್ಯ ದಾಖಲಾತಿ”: ಸದನದಲ್ಲಿ ಉದಯವಾಣಿ ವರದಿ ಪ್ರಸ್ತಾವಿಸಿದ ಮಂಜುನಾಥ ಭಂಡಾರಿ

11:11 PM Jul 11, 2023 | Team Udayavani |

ಬೆಂಗಳೂರು: “ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 55 ಶಾಲೆಗಳಲ್ಲಿ ಒಂದನೇ ತರಗತಿಗೆ ಶೂನ್ಯ ದಾಖಲಾತಿ” ಎಂಬ ಶೀರ್ಷಿಕೆಯಡಿ ಜುಲೈ 9ರಂದು “ಉದಯವಾಣಿ’ಯಲ್ಲಿ ಪ್ರಕಟವಾದ ವಿಶೇಷ ವರದಿ ಮಂಗಳವಾರ ಸದನದಲ್ಲಿ ಪ್ರಸ್ತಾವವಾಯಿತು. ವಿಧಾನಪರಿಷತ್ತಿನ ಕಲಾಪದ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಈ ವಿಷಯ ಪ್ರಸ್ತಾವಿಸಿದರು.

Advertisement

2023-24ನೇ ಶೈಕ್ಷಣಿಕ ವರ್ಷದಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ 55 ಶಾಲೆಗಳಲ್ಲಿ ಒಂದನೇ ತರಗತಿಗೆ ಶೂನ್ಯ ದಾಖಲಾತಿ ಆಗಿದೆ. ಮಕ್ಕಳು ಕಡಿಮೆಯೆಂದು ಶಿಕ್ಷಕರ ಸಂಖ್ಯೆಯನ್ನು ಅನುಪಾತ ನಿಗದಿಪಡಿಸಿ ಕಡಿಮೆ ಮಾಡಿದ ಕಾರಣ ಅಗತ್ಯ ಸೌಲಭ್ಯಗಳ ಕೊರತೆಯ ನೆಪವೊಡ್ಡಿ ಸ್ಥಿತಿವಂತರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿರುವುದರಿಂದ ಇದು ಒಂದು ರೀತಿಯ ವಿಷವರ್ತುಲವಾಗಿ ಗ್ರಾಮೀಣ ಸರಕಾರಿ ಶಾಲೆಗಳು ಕ್ರಮೇಣ ಮುಚ್ಚುವ ಸಾಧ್ಯತೆ ನಿಚ್ಚಳವಾಗಿದೆ.

ಈ ಹಿನ್ನೆಲೆಯಲ್ಲಿ ಸರಕಾರಿ ಶಾಲೆಗಳ ಉನ್ನತಿಗಾಗಿ ಅಗತ್ಯ ಪ್ರಮಾಣದ ಶಿಕ್ಷಕರು, ಹೆಚ್ಚುವರಿ ಸಿಬಂದಿ, ಸುಸಜ್ಜಿತ ಕಟ್ಟಡ ಮತ್ತಿತರ ಮೂಲಸೌಕರ್ಯಗಳನ್ನು ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಂಜುನಾಥ ಭಂಡಾರಿ ಒತ್ತಾಯಿಸಿದರು. ಶಿಕ್ಷಣ ಸಚಿವರಿಂದ ಈ ಬಗ್ಗೆ ಉತ್ತರ ಕೊಡಿಸುವುದಾಗಿ ಸಹ ಕಾರ ಸಚಿವ ಕೆ.ಎನ್‌. ರಾಜಣ್ಣ ಸದನದಲ್ಲಿ ಹೇಳಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next