Advertisement

ಇದೇ ಮೊದಲ ಬಾರಿಗೆ ಚೀನಾದಲ್ಲಿ ಇಂದು ಸೊನ್ನೆ ಪ್ರಕರಣ

11:05 PM May 23, 2020 | Sriram |

ಬೀಜಿಂಗ್‌: ಶನಿವಾರ ಚೀನಾದಲ್ಲಿ ಒಂದೂ ಕೋವಿಡ್‌-19 ಪ್ರಕರಣ ಪತ್ತೆಯಾಗಿಲ್ಲ. ಕೋವಿಡ್‌-19 ಸಾಂಕ್ರಾಮಿಕ ಕಾಯಿಲೆ ಆರಂಭವಾದ್ದಾಗಿನಿಂದ ಇದೇ ಮೊದಲ ಬಾರಿಗೆ ಚೀನಾದಲ್ಲಿ ಸೊನ್ನೆ ಪ್ರಕರಣ ದಾಖಲಾಗಿರುವುದು. ಇದನ್ನು ಚೀನಾದ ಆಡಳಿತಾರೂಢ ಕಮ್ಯುನಿಸ್ಟ್‌ ಪಾರ್ಟಿ ಮಹತ್ತರ ಸಾಧನೆ ಎಂದು ಕರೆದಿದೆ.

Advertisement

ಚೀನಾದ ಸಂಸತ್ತು ನ್ಯಾಷನಲ್‌ ಪೀಪಲ್ಸ್‌ ಕಾಂಗ್ರೆಸ್‌ ತೆರೆದ ಮರುದಿನವೇ ಈ ಮಹತ್ತರ ಸಾಧನೆ ಸಂಭವಿಸಿದೆ ಎನ್ನಲಾಗಿದೆ.

ದೇಶ ಈಗಲೂ ಸಾಕಷ್ಟು ಸವಾಲನ್ನು ಎದುರಿಸುತ್ತಿದೆ ಎಂದು ಚೀನಾ ಪ್ರಧಾನಿ ಲಿ ಕೆಕಿಯಾಂಗ್‌ ಚೀನಾ ವನ್ನು ಎಚ್ಚರಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next