Advertisement

ಪ್ರಸಿದ್ಧ ವಾಹಿನಿಗಳಾಗಿರುವ ಜೀ-ಸೋನಿ ವಿಲೀನಕ್ಕೆ ಸಿಸಿಐ ಒಪ್ಪಿಗೆ

10:49 AM Oct 06, 2022 | Team Udayavani |

ನವದೆಹಲಿ: ಪ್ರಸಿದ್ಧ ವಾಹಿನಿಗಳಾಗಿರುವ ಜೀ ಮತ್ತು ಸೋನಿ ವಿಲೀನ ಮಾಡುವ ಮನವಿಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ(ಸಿಸಿಐ) ಅನುಮತಿ ಕೊಟ್ಟಿದೆ.

Advertisement

ಆದರೆ ಎರಡೂ ಸಂಸ್ಥೆಗಳು ಕೆಲವು ಬದಲಾವಣೆಗಳನ್ನು ಮಾಡಿಕೊಂಡು, ವಿಲೀನ ಮಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ.

ಹೀಗಾಗಿ, ಅ.14ರಂದು ಷೇರುದಾರರ ಸಭೆ ನಡೆಯಲಿದೆ. ಈ ಎರಡೂ ಸಂಸ್ಥೆಗಳು ವಿಲೀನ ಆಗುವುದಾಗಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲೇ ಘೋಷಿಸಿದ್ದವು.

ಆದರೆ ವಿಲೀನಗೊಂಡ ವಾಹಿನಿಗೆ ಹೆಚ್ಚು ಗ್ರಾಹಕರು ಸಿಗುವುದರಿಂದ ಜಾಹೀರಾತು ದರ ಹೆಚ್ಚಿಸಬಹುದು ಹಾಗೂ ವಾಹಿನಿಯ ಶುಲ್ಕವನ್ನೂ ಹೆಚ್ಚಿಸಿಬಿಡಬಹುದು ಎಂದು ಸಿಸಿಐ ಅಭಿಪ್ರಾಯ ವ್ಯಕ್ತಪಡಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next