ಝಂಬಥಾನ್! ಸುತ್ತಲೂ ನೂರಾರು ಜನ. ಕಿವಿಗೆ ತಟ್ಟುವ ಸಂಗೀತ. ಆ ಜೋಶ್‌ನಲ್ಲಿ ನಮ್ಮ ಕೈಕಾಲುಗಳು ಸುಮ್ಮನಿರಲಾರದೆ, ಕುಣಿಯುತ್ತಲೇ ಇರುತ್ತವೆ. ಬಾಲಿವುಡ್‌ನ ಅಕ್ಷಯ್ ಕುಮಾರ್, ಸಲ್ಮಾನ್‌ಖಾನ್ ಸಿನಿಮಾಗಳಲ್ಲಷ್ಟೇ ನೋಡಿರಬಹುದಾದ ಈ ಮಸ್ತ್ ಝಂಬಥಾನ್ ಈಗ ಬೆಂಗ್ಳೂರಿಗೂ ಬಂದಿದೆ. ಇದಕ್ಕೆ ನೆಪ ಆಗಿರೋದು “ಬೆಂಗ್ಳೂರು ಆಹಾರ ಉತ್ಸವ- 2017′!
ಸಂಗೀತದೊಟ್ಟಿಗೆ ಹೊಟ್ಟೆಯನ್ನೂ ತುಂಬಿಸಿಕೊಳ್ಳಬಹುದು. ಆಹಾರ ಸೇವನೆ ವೇಳೆ ಸಂಗೀತ ಆಲಿಸುವುದು ಈಗಿನವರ ಫ್ಯಾಶನ್ನು. ಇನ್ನೂ ಕೆಲವರಿಗೆ ಜಂಕ್‌ಫುಡ್ ಸೇವಿಸುತ್ತಲೇ ಸಣ್ಣಗೆ ಸ್ಟೆಪ್ಸ್ ಹಾಕೋದೂ ರೂಢಿ. ಬೆಂಗಳೂರಿನ “ಆಹಾರ ಉತ್ಸವ- 2017’ರಲ್ಲಿ ಈ ರಸಕ್ಷಣಗಳನ್ನು ನಿಮ್ಮ ಮುಂದಿಡಲಿದೆ. ಲೈವ್ ಮ್ಯೂಸಿಕ್ ಮತ್ತು ನೃತ್ಯ ಪ್ರದರ್ಶಗಳನ್ನು ನೋಡುತ್ತಲೇ ಆಹಾರ ಮತ್ತು ಪಾನೀಯಗಳನ್ನು ಸವಿಯಬಹುದು.
ಫ್ಯಾಮಿಲಿ ವೀಕೆಂಡ್‌ಗಾಗಿ ಯೋಜನೆ ರೂಪಿಸುತ್ತಿರುವವರಿಗೆ ಇದು ಒಳ್ಳೆಯ ಛಾನ್ಸು. ಅಲ್ಲದೆ, ಮಕ್ಕಳಿಗಾಗಿಯೇ ಹಾಪ್, ಸ್ಕಿಪ್ ಮತ್ತು ಜಂಪ್ ಆಟಗಳೂ ಇಲ್ಲಿರಲಿವೆ. “ಬಿಗ್ಗೆಟ್ಸ್ ಝುಂಬಥಾನ್’ ಇದಾಗಿದ್ದು, ಬೆಂಗಳೂರಿನ ಟಾಪ್ ರೆಸ್ಟೋರೆಂಟುಗಳ ಸ್ವಾದಿಷ್ಟ ಆಹಾರಗಳು ಬಾಯಿಯ ರುಚಿಯನ್ನು ತಣಿಸಲಿವೆ. ಡಿಸೈನ್ ಥಿಯರಿ ಜಾಹೀರಾತು ಏಜೆನ್ಸಿ ಮಾಲಿಕ ಉನ್ನತ್ ರೆಡ್ಡಿಯವರ ಪರಿಕಲ್ಪನೆ ಇದಾಗಿದ್ದು, ಬೆಂಗ್ಳೂರಿನಲ್ಲಿ ಇವರು ಪ್ರತಿವರ್ಷ ಪಾಕ ಕಲೆಯ ಉತ್ಸವ ಆಯೋಜಿಸುತ್ತಲೇ ಬಂದಿದ್ದಾರೆ. ಇಲ್ಲಿ ನೀವು ಡಿಜೆಯನ್ನೂ ಕೇಳಬಹುದು.
ಯಾವಾಗ?: ಏಪ್ರಿಲ್ 16, ಭಾನುವಾರ
ಎಲ್ಲಿ?: ಕಾರ್ಲೆ ಮೈದಾನ, ಮಾನ್ಯತಾ ಟೆಕ್ ಪಾರ್ಕ್ ಸಮೀಪ