Advertisement

ಯುವರಾಜ್‌ ಸಿಂಗ್‌ ನಿವೃತ್ತಿಯ ಯೋಜನೆ?

09:07 AM May 21, 2019 | Team Udayavani |

ಹೊಸದಿಲ್ಲಿ: ಭಾರತದ ಖ್ಯಾತ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಹೇಳುವ ಯೋಜನೆಯಲ್ಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಲಾರಂಭಿಸಿದೆ.

Advertisement

ಆದರೆ ಇದರ ಪ್ರತಿಕ್ರಿಯೆಗೆ ಅವರು ಲಭ್ಯರಾಗಿಲ್ಲ. ಫ್ರಾಂಚೈಸಿಗಳನ್ನು ಹೊಂದಿರುವ ಲೀಗ್‌ಗಳಲ್ಲಿ ಮುಂದುವರಿಯುವುದು ಅವರ ಯೋಜನೆ ಎನ್ನಲಾಗಿದೆ.

“ಯುವರಾಜ್‌ ಸಿಂಗ್‌ ಕೆಲವರಲ್ಲಿ ತಮ್ಮ ನಿವೃತ್ತಿ ಕುರಿತು ಅನೌಪಚಾರಿಕವಾಗಿ ಹೇಳಿಕೊಂಡಿದ್ದಾರೆ. ಇದನ್ನು ಅವರು ಅಧಿಕೃತವಾಗಿ ಪ್ರಕಟಿಸಲೂಬಹುದು’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

2011ರ ವಿಶ್ವಕಪ್‌ ವಿಜೇತ ಭಾರತ ತಂಡದ ಹೀರೋ ಆಗಿ ಮೆರೆದಿದ್ದ ಯುವರಾಜ್‌ ಸಿಂಗ್‌ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next