ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರ, ವಿಶ್ವಕಪ್ ಹಿರೋ, ಸಿಕ್ಸರ್ ಸಿಂಗ್ ಯುವರಾಜ್ ಸಿಂಗ್ ಅವರು ಮತ್ತೆ ಕ್ರಿಕೆಟ್ ಗೆ ಮರಳುತ್ತಿದ್ದಾರೆ. ಈ ಬಗ್ಗೆ ಸ್ವತಃ ಯುವರಾಜ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಯುವರಾಜ್ ಸಿಂಗ್, “ದೇವರು ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತಾನೆ! ಸಾರ್ವಜನಿಕ ಬೇಡಿಕೆಯ ಮೇರೆಗೆ ಫೆಬ್ರವರಿಯಲ್ಲಿ ಪಿಚ್‌ಗೆ ಹಿಂತಿರುಗುವ ಬಗ್ಗೆ ಆಶಾದಾಯಕವಾಗಿದ್ದೇನೆ! ಈ ಭಾವನೆಯ ಹಾಗೆ ಯಾವದೂ ಇಲ್ಲ! ನಿಮ್ಮ ಪ್ರೀತಿ ಮತ್ತು ಶುಭಾಶಯಗಳಿಗೆ ಧನ್ಯವಾದಗಳು! ಭಾರತವನ್ನು ಬೆಂಬಲಿಸುತ್ತಾ ಇರಿ, ಇದು ನಮ್ಮ ತಂಡ ಮತ್ತು ನಿಜವಾದ ಅಭಿಮಾನಿ ಕಠಿಣ ಸಮಯದಲ್ಲಿ ಅವನ ಬೆಂಬಲವನ್ನು ತೋರಿಸುತ್ತಾನೆ” ಎಂದಿದ್ದಾರೆ.
ಇದನ್ನೂ ಓದಿ:ಎರಡೇ ದಿನದಲ್ಲಿ ಹೊಸ ನಾಯಕನ ಆಯ್ಕೆ: ಅಚ್ಚರಿ ಘೋಷಣೆ ಸಾಧ್ಯತೆ ಎಂದ ಬಿಸಿಸಿಐ ಮೂಲಗಳು
ಸದ್ಯ 39 ವರ್ಷದ ಪ್ರಾಯದ ಯುವರಾಜ್ ಸಿಂಗ್ ಭಾರತದ ನಿಗದಿತ ಕ್ರಿಕೆಟ್ ಮಾದರಿಯ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. 2011ರ ವಿಶ್ವಕಪ್ ನಲ್ಲಿ ಭಾರತದ ವಿಜಯಕ್ಕೆ ಯುವಿ ಪ್ರಮುಖ ಕಾರಣರಾಗಿದ್ದರು. ಆ ವಿಶ್ವಕಪ್ ನಲ್ಲಿ 90.50ರ ಸರಾಸರಿಯಲ್ಲಿ 362 ರನ್ ಗಳಿಸಿದ್ದ ಯುವಿ, 15 ವಿಕೆಟ್ ಗಳನ್ನೂ ಕಬಳಿಸಿದ್ದರು. ಆದರೆ ಈ ಕೂಟದ ಬಳಿಕ ಯುವಿ ಕ್ಯಾನ್ಸರ್ ಗೆ ತುತ್ತಾಗಿದ್ದರು.
Related Articles
View this post on InstagramAdvertisement
2019ರ ಜೂನ್ 10ರಂದು ಯುವರಾಜ್ ಸಿಂಗ್ ವಿದಾಯ ಹೇಳಿದ್ದರು. ಆ ಬಳಿಕ ಯುವಿ ಜಿಟಿ20 ಲೀಗ್ ನಲ್ಲಿ ಟೊರಾಂಟೋ ನ್ಯಾಶನಲ್ಸ್ ಪರ ಆಡಿದ್ದರು. ಅಬುಧಾಬಿ ಟಿ10 ಲೀಗ್ ನಲ್ಲಿ ಮರಾಠ ಅರೇಬಿಯನ್ಸ್ ತಂಡದ ಪರವಾಗಿಯೂ ಯುವಿ ಆಡಿದ್ದರು. 2021ರ ಮಾರ್ಚ್ ನಲ್ಲಿ ರೋಡ್ ಸೇಫ್ಟಿ ಲೀಗ್ ನಲ್ಲಿ ಯುವಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು.