Advertisement

ಬೌನ್ಸರ್‌, ಕ್ಯಾನ್ಸರ್‌ ಎರಡನ್ನೂ ಜಯಿಸಿದ ಯುವರಾಜ್‌ಗೆ 37ರ ಸಂಭ್ರಮ

06:00 AM Dec 13, 2018 | |

ಹೊಸದಿಲ್ಲಿ: ಕ್ರಿಕೆಟಿನ ಆರಂಭದ ದಿನಗಳಲ್ಲಿ ಬೌನ್ಸರ್‌ ಎದುರಿಸಿ, 2011ರಲ್ಲಿ ಮಹಾಮಾರಿ ಕ್ಯಾನ್ಸರ್‌ಗೆ ಸಡ್ಡು ಹೊಡೆದು ಗೆದ್ದು ಬಂದ ಡ್ಯಾಶಿಂಗ್‌ ಎಡಗೈ ಬ್ಯಾಟ್ಸ್‌ಮನ್‌ ಯುವರಾಜ್‌ ಸಿಂಗ್‌ ಅವರಿಗೆ ಬುಧವಾರ 37ನೇ ಹುಟ್ಟುಹಬ್ಬದ ಸಂಭ್ರಮ. ಎಂದಿನಂತೆ ಅವರು ಇದನ್ನು ಮಾನವೀಯ ಕಾರ್ಯದ ಮೂಲಕ ಸ್ಮರಣೀಯಗೊಳಿಸಿದರು. ತಮ್ಮ “ಯುವಿಕ್ಯಾನ್‌ ಫೌಂಡೇಶನ್‌’ ಮೂಲಕ 25 ಮಂದಿ ಕ್ಯಾನ್ಸರ್‌ ಪೀಡಿತ ಮಕ್ಕಳ ಚಿಕಿತ್ಸೆಗೆ ನೆರವಾಗುವ ಮೂಲಕ ಇತರರಿಗೆ ಮಾದರಿಯಾದರು.

Advertisement

“ಇಂದು ನನ್ನ ಬರ್ತ್‌ಡೇ. ನಮ್ಮ ಯುವಿಕ್ಯಾನ್‌ ಫೌಂಡೇಶನ್‌ ಮೂಲಕ ಕ್ಯಾನ್ಸರ್‌ನಿಂದ ನರಳುತ್ತಿರುವ 25 ಮಂದಿ ಮಕ್ಕಳ ಚಿಕಿತ್ಸೆಗೆ ನೆರವಾಗಲಿದ್ದೇನೆ. ಕ್ಯಾನ್ಸರ್‌ ಗೆದ್ದ ಬಳಿಕ ಬದುಕಿನ ಅಮೂಲ್ಯ ಉಡುಗೊರೆಯನ್ನು ನಾನಿಂದು ಅನುಭವಿಸುತ್ತಿದ್ದೇನೆ. ಕ್ಯಾನ್ಸರನ್ನು ಸೋಲಿಸಲು ನನಗೆ ಸಾಮರ್ಥ್ಯವನ್ನು ಕೊಟ್ಟ ದೇವರಿಗೆ ನಾನು ಕೃತಜ್ಞ. ದೇಶದಲ್ಲಿಂದು ಲಕ್ಷಾಂತರ ಮಂದಿ ಕ್ಯಾನ್ಸರ್‌ ಪೀಡಿತರು ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ. ನಾವು ಸ್ಥಾಪಿಸಿದ ಫೌಂಡೇ ಶನ್‌ನಿಂದ ಈ ಅಂತರ ಸ್ವಲ್ಪವಾದರೂ ಕಡಿಮೆ ಆಗಲಿದೆ ಎಂಬ ಸಮಾಧಾನ ನನ್ನದು’ ಎಂದು ಯುವರಾಜ್‌ ಟ್ವೀಟ್‌ ಮಾಡಿದ್ದಾರೆ. 2011ರ “ವಿಶ್ವಕಪ್‌ ಗೆಲುವಿನ ವರ್ಷ’ದಲ್ಲಿ ಕ್ರಿಕೆಟಿನ ಉತ್ತುಂಗದಲ್ಲಿರುವಾಗಲೇ ಯುವಿ ಮೇಲೆ ಶ್ವಾಸಕೋಶದ ಕ್ಯಾನ್ಸರ್‌ ಆಕ್ರಮಣ ಮಾಡಿತು. ಬಳಿಕ ಇಂಗ್ಲೆಂಡ್‌ನ‌ಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡರು. ಭಾರತ ತಂಡವನ್ನೂ ಪ್ರತಿನಿಧಿಸಿದರು. 

2011ರ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಗೆಲುವಿನ ರೂವಾರಿಯಾಗಿದ್ದ ಯುವರಾಜ್‌, 362 ರನ್‌ ಹಾಗೂ 15 ವಿಕೆಟ್‌ ಸಂಪಾದಿಸಿ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. 2017ರ ಜೂನ್‌ನಲ್ಲಿ ವಿಂಡೀಸ್‌ ವಿರುದ್ಧ ಕೊನೆಯ ಸಲ ಭಾರತವನ್ನು ಪ್ರತಿನಿಧಿಸಿದ ಅವರೀಗ ಪಂಜಾಬ್‌ ರಣಜಿ ತಂಡದ ಸದಸ್ಯನಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next