Advertisement

ಪಾಕಿಸ್ಥಾನ ತಂಡ ಬ್ಯಾಟಿಂಗ್‌ ಕೋಚ್‌ ಆಗಿ ಯೂನಿಸ್‌ ಖಾನ್‌ ಆಯ್ಕೆ

02:38 PM Jun 10, 2020 | keerthan |

ಕರಾಚಿ: ಮುಂಬರುವ ಇಂಗ್ಲೆಂಡ್‌ ಪ್ರವಾಸಕ್ಕಾಗಿ ಪಾಕಿಸ್ಥಾನ ಕ್ರಿಕೆಟ್‌ ಮಂಡಳಿ (ಪಿಸಿಬಿ)ಯು ಮಾಜಿ ಯೂನಿಸ್‌ ಖಾನ್‌ ಅವರನ್ನು ರಾಷ್ಟ್ರೀಯ ತಂಡದ ಬ್ಯಾಟಿಂಗ್‌ ಕೋಚ್‌ ಆಗಿ ನೇಮಕ ಮಾಡಿದೆ. ಮಾತ್ರವಲ್ಲದೇ ಸ್ಪಿನ್‌ ಕೋಚ್‌ ಆಗಿ ಮುಷ್ತಾಕ್‌ ಅಹ್ಮದ್‌ ಅವರನ್ನು ಕರೆಸಿಕೊಂಡಿದೆ.

Advertisement

42ರ ಹರೆಯದ ಯೂನಿಸ್‌ ಅವರು ತನ್ನ ಜೀವನಶ್ರೇಷ್ಠ 313 ರನ್‌ ಸಹಿತ ಆಡಿದ 118 ಟೆಸ್ಟ್‌ಗಳಿಂದ 10,099 ರನ್‌ ಸಿಡಿಸಿದ್ದಾರೆ. ಯಶಸ್ವಿ ಕ್ರಿಕೆಟ್‌ ಬಾಳ್ವೆ ವೇಳೆ ಅವರು 313 ರನ್‌ ಸಿಡಿಸಿದ ಬಳಿಕ ಐಸಿಸಿ ರ್‍ಯಾಂಕಿಂಗ್‌ನಲ್ಲಿ ವಿಶ್ವದ ನಂಬರ್‌ ವನ್‌ ಸ್ಥಾನ ವನ್ನು ಏರಿದ್ದರು.

ಪಾಕಿಸ್ಥಾನ ತಂಡವು ಮೂರು ಪಂದ್ಯಗಳ ಟೆಸ್ಟ್‌ ಸರಣಿಗಾಗಿ ಜುಲೈ 30ರಿಂದ ಇಂಗ್ಲೆಂಡಿಗೆ ಪ್ರಯಾಣಿಸಲಿದೆ. ಆಬಳಿಕ ಆ. 29ರಿಂದ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ.

ಅಸಾಮಾನ್ಯ ಬ್ಯಾಟಿಂಗ್‌ ದಾಖಲೆ ಮಾಡಿದ ಕ್ರಿಕೆಟಿಗರಾದ ಯೂನಿಸ್‌ ಖಾನ್‌ ಅವರು ರಾಷ್ಟ್ರೀಯ ತಂಡದ ಬ್ಯಾಟಿಂಗ್‌ ಕೋಚ್‌ ಹುದ್ದೆ ಸ್ವೀಕರಿಸಲು ಒಪ್ಪಿಕೊಂಡಿರುವುದು ನಮಗೆ ರೋಮಾಂಚನ ನೀಡಿದೆ ಎಂದು ಪಿಸಿಬಿ ಮುಖ್ಯ ಕಾರ್ಯನಿರ್ವಾಹಕ ವಸೀಮ್‌ಖಾನ್‌ ಹೇಳಿದ್ದಾರೆ.

ಹಾಲಿ ಆಟಗಾರರ ಪಾಲಿಗೆ ಯೂನಿಸ್‌ ರೋಲ್‌ ಮಾಡೆಲ್‌ ಆಗಿದ್ದಾರೆ. ಮಾತ್ರವಲ್ಲದೇ ಎಲ್ಲರಿಂದಲೂ ಗೌರವಿಸಲ್ಪಡುವ ಕ್ರಿಕೆಟಿಗರಾಗಿದ್ದಾರೆ. ಅವರ ಉಪಸ್ಥಿತಿ ಮತ್ತು ಮಾರ್ಗದರ್ಶನದಿಂದತಂಡವು ಬಹಳಷ್ಟು ಪ್ರಯೋಜನ ಪಡೆಯಲಿದೆ ಎಂದು ಅವರು ತಿಳಿಸಿದರು.

Advertisement

ಪಾಕಿಸ್ಥಾನ ಪರ 52 ಟೆಸ್ಟ್‌ ಆಡಿರುವ ಮಾಜಿ ಲೆಗ್‌ ಸ್ಪಿನ್ನರ್‌ ಮುಷ್ತಾಕ್‌ ಅಹ್ಮದ್‌ 185 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದಾರೆ. ಅವರು ತಂಡದ ಮೆಂಟರ್‌ ಮತ್ತು ಸ್ಪಿನ್‌ ಕೋಚ್‌ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಅವರು ಈ ಹಿಂದೆ ಇಂಗ್ಲೆಂಡ್‌ ಮತ್ತು ವೆಸ್ಟ್‌ಇಂಡೀಸ್‌ ತಂಡದ ಬೌಲಿಂಗ್‌ ಕೋಚ್‌ ಆಗಿ ಮಾರ್ಗದರ್ಶನ ನೀಡಿದ್ದರು.

ಇಂಗ್ಲೆಂಡ್‌ ದೀರ್ಘ‌ ಸಮಯದಿಂದ ಕೌಂಟಿ ಕ್ರಿಕೆಟ್‌ ನಲ್ಲಿ ಆಡಿದ ಅನುಭವದಿಂದಾಗಿ ಮುಷ್ತಾಕ್‌ ಅವರು ಇಂಗ್ಲೆಂಡಿನ ಪರಿಸ್ಥಿತಿಯನ್ನು ಉಳಿದವರಿಗಿಂತ ಚೆನ್ನಾಗಿ ಅರಿತಿದ್ದಾರೆ ಎಂದು ವಸೀಮ್‌ ಹೇಳಿದರು.

ಸ್ಪಿನ್ನರ್‌ಗಳಿಗೆ ಮಾರ್ಗದರ್ಶನ ನೀಡುವುದರ ಜತೆ ಮುಷ್ತಾಕ್‌ ಅವರು ಪಂದ್ಯದ ಯೋಜನೆ ಮತ್ತು ಸಿದ್ಧತೆ ಬಗ್ಗೆ ಮಿಸ್ಬಾ ಅವರಿಗೆ ನೆರವಾಗಲಿದ್ದಾರೆ ಎಂದು ವಸೀಮ್‌ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next