ನವದೆಹಲಿ: ಚಲಿಸುತ್ತಿರುವ ಕಾರಿನ ಮೇಲೆ ನಿಂತು ಭರ್ಜರಿಯಾಗಿ ಬರ್ತ್‌ಡೇ ಪಾರ್ಟಿ ನಡೆಸಿದ್ದ ಯೂಟ್ಯೂಬರ್ ಪ್ರಿನ್ಸ್ ದೀಕ್ಷಿತ್‌ನನ್ನು ದೆಹಲಿ ಪೋಲಿಸರು ಬಂಧಿಸಿದ್ದಾರೆ.
ಕಳೆದ ನವೆಂಬರ್ 16 ರಂದು ರಾತ್ರಿ ಸ್ನೇಹಿತರ ಜೊತೆಗೆ ಚಲಿಸುತ್ತಿರುವ ಕಾರಿನ ಮೇಲೆ ನಿಂತು ತನ್ನ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿದ್ದ ಪ್ರಿನ್ಸ್ ದೀಕ್ಷಿತ್‌ನ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ವೀಡಿಯೊ ನೋಡಿ ಅವರನ್ನು ಬೆನ್ನತ್ತಿದ್ದ ಪೋಲಿಸರು ಇದೀಗ ಪ್ರಿನ್ಸ್ ದೀಕ್ಷಿತ್‌ನನ್ನು ಬಂಧಿಸಿದ್ದಾರೆ.
ಸದ್ಯ ಪ್ರಿನ್ಸ್ ದೀಕ್ಷಿತ್‌ನನ್ನು ಬಂಧಿಸಿರುವ ದೆಹಲಿ ಪೋಲಿಸರು ಆತನ ಮೇಲೆ ಸಂಚಾರ ನಿಯಮ ಉಲ್ಲಂಘಿಸಿ ಗೂಂಡಾಗಿರಿ ಪ್ರದರ್ಶಿಸಿದ ಆರೋಪದ ಹಿನ್ನಲೆಯಲ್ಲಿ ಆತನ ವಿರುದ್ಧ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ. ವೀಡಿಯೊ ವೈರಲ್ ಆದ ಬೆನ್ನಲ್ಲೇ ಪ್ರಿನ್ಸ್ ದೀಕ್ಷಿತ್‌ಗೆ ಬಲೆ ಬೀಸಿದ್ದ ದೆಹಲಿ ಪೋಲಿಸರು ಆತನನ್ನು ಬಂಧಿಸಿದ್ದು, ಆತನ ಸ್ನೇಹಿತರಿಗೆ ಬಲೆ ಬೀಸಿದ್ದಾರೆ.
2022 ರ ನವೆಂಬರ್ 16 ರಂದು ರಾಷ್ಟ್ರೀಯ ಹೆದ್ಧಾರಿ-24 ರಲ್ಲಿ ಚಲಿಸುವ ಕಾರಿನ ಮೇಲೆ ನಿಂತು ಹುಟ್ಟುಹಬ್ಬ ಆಚರಿಸಿದ್ದೂ ಅಲ್ಲದೇ, ಸಾಲು ಸಾಲು ಕಾರುಗಳಲ್ಲಿ ಆತನ ಬೆಂಬಲಿಗರು ಆತನ ಜೊತೆಯಲ್ಲಿದ್ದರು. ಹುಟ್ಟುಹಬ್ಬ ಆಚರಿಸಲು ಟ್ರಾಫಿಕ್ ಜಾಮ್ ಮಾಡಿ ರಸ್ತೆ ಮಧ್ಯದಲ್ಲೇ ಕೇಕ್ ಕಟ್ ಮಾಡಲಾಗಿತ್ತು.
ಇದೀಗ ಪ್ರಿನ್ಸ್ ದೀಕ್ಷಿತ್ ಬಂಧಿಸಲಾಗಿದ್ದು, ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:
ಪುತ್ತೂರು: ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದವನ ಬಂಧನ; ಗಾಂಜಾ, ಕಾರು ವಶ