Advertisement

ಲಹರಿಗೆ ಯೂಟ್ಯೂಬ್‌ ಗೋಲ್ಡ್‌ ಬಟನ್‌ ಪ್ರಶಸ್ತಿ!

09:00 PM Dec 11, 2017 | Team Udayavani |

ಲಹರಿ ಸಂಸ್ಥೆ ಮತ್ತೂಮ್ಮೆ ಸುದ್ದಿಯಲ್ಲಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ದಕ್ಷಿಣ ಭಾರತದ ಜನಪ್ರಿಯ ಚಿತ್ರಗಳ ಹಾಡುಗಳ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಖರೀದಿಸಿದ್ದ ಲಹರಿ ಸಂಸ್ಥೆಯು ಈ ಬಾರಿ ಸುದ್ದಿಯಾಗುವುದಕ್ಕೆ ಕಾರಣ, ಯೂಟ್ಯೂಬ್‌ನ ಗೋಲ್ಡ್‌ ಬಟನ್‌ ಪ್ರಶಸ್ತಿ.

Advertisement

ಲಹರಿ ಸಂಸ್ಥೆಯು ಇದೀಗ ಯೂಟ್ಯೂಬ್‌ ಗೋಲ್ಡ್‌ ಬಟನ್‌ ಪ್ರಶಸ್ತಿಗೆ ಭಾಜನವಾಗಿದೆ. ಸಾಮಾನ್ಯವಾಗಿ ಈ ಪ್ರಶಸ್ತಿಯನ್ನು ಯೂಟ್ಯೂಬ್‌ನಲ್ಲಿ ಹತ್ತು ಲಕ್ಷ ಚಂದಾದಾರರಿರುವ ಸಂಸ್ಥೆಗಳಿಗೆ ಕೊಡಲಾಗುತ್ತದೆ. ಲಹರಿ ಸಂಸ್ಥೆಗೆ ಇದೀಗ 10 ಲಕ್ಷಕ್ಕಿಂತ ಹೆಚ್ಚು ಚಂದಾದಾರರಿದ್ದು, ಅದೇ ಕಾರಣಕ್ಕೆ ಸಂಸ್ಥೆಗೆ ಗೋಲ್ಡ್‌ ಬಟನ್‌ ಪ್ರಶಸ್ತಿಯನ್ನು ನೀಡಲಾಗಿದೆ.

ಈ ಮೂಲಕ ಕನ್ನಡಕ್ಕೆ ಮೊದಲ ಬಾರಿಗೆ ಇಂಥದ್ದೊಂದು ಪ್ರಶಸ್ತಿ ಬಂದಿದೆ. ಬರೀ ಚಲನಚಿತ್ರಗೀತೆಗಳಲ್ಲದೆ ಜಾನಪದ, ಭಾವಗೀತೆ, ಭಕ್ತಿಗೀತೆ ಸೇರಿದಂತೆ ಎಲ್ಲಾ ಪ್ರಾಕಾರಗಳ 1.75 ಲಕ್ಷದ ಹೆಚ್ಚು ಹಾಡುಗಳು ಲಹರಿ ಬಳಿ ಇದ್ದು, ಯೂಟ್ಯೂಬ್‌ನ ಲಹರಿ ಚಾನಲ್‌ನಲ್ಲಿ ಈ ಹಾಡುಗಳು ಲಭ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next