Advertisement

Bengaluru: 14 ಲಕ್ಷ ರೂ. ಒಡವೆ ಕದಿದ್ದ ಬಾಲಕ ವಶಕ್ಕೆ

12:57 PM May 18, 2024 | Team Udayavani |

ಬೆಂಗಳೂರು: ಮನೆಗೆ ನುಗ್ಗಿ ಚಿನ್ನಾಭರಣ ಮತ್ತು ವಜ್ರ ಆಭರಣಗಳ ಕಳವು ಮಾಡಿದ್ದ ಬಾಲಕನನ್ನು ಜಯ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ.

Advertisement

ಜೆ.ಪಿ.ನಗರ ನಿವಾಸಿ 16 ವರ್ಷದ ಬಾಲಕನನ್ನು ವಶಕ್ಕೆ ಪಡೆದು, ಬಾಲ ನ್ಯಾಯ ಮಂಡಳಿಗೆ ಹಾಜರು ಪಡಿಸಲಾಗಿದೆ. ಈತನಿಂದ 8 ಲಕ್ಷ ರೂ. ಮೌಲ್ಯದ 83 ಗ್ರಾಂ ಚಿನ್ನಾಭರಣ ಮತ್ತು ವಜ್ರದ ಆಭರಣಗಳು ಮತ್ತು 49 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ಈತನ ವಿಚಾರಣೆಯಲ್ಲಿ ಗಿರಿನಗರ ಮತ್ತು ಬನಶಂಕರಿ ಹಾಗೂ ಜಯನಗರ ಠಾಣೆಗಳಲ್ಲಿ ದಾಖಲಾಗಿದ್ದ ಬೈಕ್‌ ಕಳವು ಪ್ರಕರಣಗಳು ಪತ್ತೆಯಾಗಿವೆ. ಬಾಲಕ ಇತ್ತೀಚೆಗೆ, ಜಯನಗರದ 5ನೇ ಬ್ಲಾಕ್‌ ನಿವಾಸಿ ದ್ವಾರಕನಾಥ್‌ ಎಂಬುವರ ಮನೆಯ ಹಿಂಬದಿ ಮೆಟ್ಟಿಲ ಮೂಲಕ ಮನೆಯೊಳಗೆ ಹೋಗಿದ್ದ. ಬಳಿಕ ಬೀರುವಿನ ಕೀ ತೆಗೆದು, 2.5 ಲಕ್ಷ ರೂ. ನಗದು, 1 ವಜ್ರದ ಉಂಗುರ, 2 ಜತೆ ವಜ್ರದ ಕಿವಿಯೋಲೆ, ಒಂದು ವಜ್ರದ ಮೂಗುತಿ ಸೇರಿ 14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಈ ಬಗ್ಗೆ ಪ್ರಕರಣ ದಾಖಲಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next