Advertisement
ಧಾರವಾಡದ ವಿಜೇತಕುಮಾರ ಹೊಸಮಠ ಹಾಗೂ ಮಹ್ಮದ್ ರಫಿಕ್ ಎಂಬ ಯುವಕರು ಜಮ್ಮುವಿನಿಂದ ಕನ್ಯಾಕುಮಾರಿವರೆಗೆ ಸ್ಪ್ಲೆಂಡರ್ ಪ್ಲಸ್ ಬೈಕ್‌ನಲ್ಲಿ ಪ್ರಯಾಣಿಸಿದ್ದಾರೆ. ವಿಶೇಷ ಎಂದರೆ ವಿಜೇತಕುಮಾರ ಒಬ್ಬರೇ ಸುಮಾರು 6,275 ಕಿಮೀ ದೂರ ಬೈಕ್ ಚಾಲನೆ ಮಾಡಿದ್ದಾರೆ. ಕುಟುಂಬ ಹಾಗೂ ಸ್ನೇಹಿತರ ಆರ್ಥಿಕ ನೆರವಿನೊಂದಿಗೆ ಪ್ರವಾಸ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಬದಲಾಯಿಸಬೇಕಾಯಿತಂತೆ. ಜಮ್ಮು-ಕಾಶ್ಮೀರದಲ್ಲಿ ಹೊರಗಡೆ ಮಲಗಲು ಸೈನಿಕರು ಅವಕಾಶ ನೀಡದ್ದರಿಂದ ಅಲ್ಲಿ ಎರಡು ದಿನ ರೂಮ್ ಮಾಡಿದ್ದು ಬಿಟ್ಟರೆ ಉಳಿದೆಲ್ಲ ಕಡೆ ಧಾಬಾ, ಪೆಟ್ರೋಲ್ ಬಂಕ್, ಲಾರಿಗಳು ನಿಂತಿರುವ ಕಡೆಗಳಲ್ಲಿಯೇ ಮಲಗುತ್ತಿದ್ದರು. 6,275 ಕಿಮೀ ದೂರದ ಪ್ರಯಾಣದಲ್ಲಿ ಸುಮಾರು 1,000 ಮಾಸ್ಕ್ಗಳನ್ನು ಲಾರಿ ಚಾಲಕರಿಗೆ ವಿತರಿಸಿದ್ದಾರೆ.
Related Articles
Advertisement
ಭಾರತ ಧ್ವಜ ಕಂಡು ಹಲ್ಲೆಗೆ ಮುಂದುಜಮ್ಮು-ಕಾಶ್ಮೀರದಲ್ಲಿನ ಅನಂತನಾಗ ಜಿಲ್ಲೆಯಲ್ಲಿ ಬೈಕ್‌ನಲ್ಲಿ ಬರುತ್ತಿದ್ದಾಗ ಒಂದು ಕೋಮಿನ ಕೆಲವರು ಪ್ರಾರ್ಥನೆ ಮುಗಿಸಿ ಆಗಮಿಸುವಾಗ ಭಾರತದ ಧ್ವಜ ಕಂಡು ಯಾರು ನೀವು, ಈ ಧ್ವಜ ಹಿಡಿದು ಯಾಕೆ ಬಂದಿದ್ದೀರಿ ಎಂದು ಹಲ್ಲೆಗೆ ಮುಂದಾಗಿದ್ದರಾದರೂ ಬೈಕ್‌ನಲ್ಲಿ ಹಿಂದಿನ ಸವಾರ ತನ್ನ ಹೆಸರು, ಪರಿಚಯ ಹೇಳಿಕೊಂಡ ನಂತರ ಸುಮ್ಮನೆ ಕಳುಹಿಸಿದ್ದು ಬಿಟ್ಟರೆ ಬೇರಾವ ಕೆಟ್ಟ ಘಟನೆಗಳು ಆಗಿಲ್ಲ. ಪ್ರಯಾಣದುದ್ದಕ್ಕೂ ಅನೇಕ ಕಡೆಗಳಲ್ಲಿ ಲಾರಿ ಚಾಲಕರೇ
ಊಟ ನೀಡಿ, ರಾತ್ರಿ ವೇಳೆ ತಮ್ಮೊಂದಿಗೆ ಇರಿಸಿಕೊಂಡಿದ್ದರು. ಕನ್ಯಾಕುಮಾರಿ ತಲುಪುವ ವೇಳೆಗೆ ತಮಿಳುನಾಡಿನಲ್ಲಿ ಚಂಡಮಾರುತ ಕಂಡುಬಂದು ದೊಡ್ಡ ಪ್ರಮಾಣ ಮಳೆ ಬಿದ್ದಿತ್ತಲ್ಲದೆ ಬೈಕ್‌ನಲ್ಲಿ ತೆರಳುವುದು ಬೇಡ ಎಂದು ಪೊಲೀಸರು ಸಲಹೆ ನೀಡಿದ್ದರು. ಆದರೆ ಮಳೆಯಲ್ಲಿಯೇ ಪ್ರಯಾಣ ಬೆಳೆಸಿ ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ತಲುಪಿದೆವು ಎಂಬುದು ಬೈಕ್ ಸವಾರರಿಬ್ಬರ ಅನಿಸಿಕೆ. ಗುಜರಾತ್‌ನಿಂದ ಈಶಾನ್ಯ ರಾಜ್ಯಗಳಿಗೆ ಬೈಕ್ ಪ್ರವಾಸ
ಮತದಾನ ಜಾಗೃತಿಗಾಗಿ2018ರಲ್ಲಿ ಧಾರವಾಡದಿಂದ ಕನ್ಯಾಕುಮಾರಿವರೆಗೆ ಇದೇ ಸ್ಪ್ಲೆಂಡರ್‌ಪ್ಲಸ್ ಬೈಕ್‌ನಲ್ಲಿ ಮೂರು ದಿನದಲ್ಲಿ ಸುಮಾರು 2,700 ಕಿಮೀ ಪ್ರಯಾಣ ಕೈಗೊಂಡಿದ್ದೆ. 2021ರಲ್ಲಿ ಜಮ್ಮುವಿನಿಂದ ಕನ್ಯಾಕುಮಾರಿವರೆಗೆ ಸ್ಪ್ಲೆಂಡರ್ ಪ್ಲಸ್ ಬೈಕ್ ಪ್ರಯಾಣ ಮಾಡಿಯಾಗಿದೆ. ಪ್ರಾಯೋಜಕರು ದೊರೆತರೆ ಜುಲೈ-ಆಗಸ್ಟ್ ನಲ್ಲಿ ಇದೇ ಬೈಕ್‌ನಲ್ಲಿ ಗುಜರಾತ್‌ನಿಂದ ಅಸ್ಸಾಂ, ಮಣಿಪುರ ಸೇರಿದಂತೆ ಈಶಾನ್ಯ ರಾಜ್ಯಗಳಿಗೆ ತೆರಳಲು ನಿರ್ಧರಿಸಿದ್ದೇನೆ. ದೇಶ ಸುತ್ತಲು ಬೈಕ್ ಪ್ರಯಾಣ ಎಂದರೆ ಕೇವಲ 150 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಬೈಕ್‌ಗಳು ಬೇಕು ಎಂಬ ಅನಿಸಿಕೆ ಸುಳ್ಳಾಗಿಸಲು 11 ವರ್ಷ ಹಳೆಯದಾದ 97 ಸಿಸಿ ಸ್ಪ್ಲೆಂಡರ್ ಪ್ಲಸ್ ಬೈಕ್ ಸವಾರಿ ಕೈಗೊಂಡಿದ್ದೇನೆ. ಜಮ್ಮು-ಕಾಶ್ಮೀರದಲ್ಲಿ ಮೈನಸ್ 2 ಡಿಗ್ರಿ ಚಳಿ ಅನುಭವಿಸಿದರೆ, ರಾಜಸ್ಥಾನ, ಗುಜರಾತ್‌ನಲ್ಲಿ ಮೈ ಮೇಲೆ ಬೊಬ್ಬೆ ಬರುವಷ್ಟು ಬಿಸಿಲು ಅನುಭವಿಸಿದೆವು. ರಾತ್ರಿ ಪ್ರಯಾಣವನ್ನೇ ಹೆಚ್ಚು ಕೈಗೊಳ್ಳುತ್ತಿದ್ದೆವು. ಮುಂಬೈನಲ್ಲಿ ಕುಂದಾಪುರ ಮೂಲದವರೊಬ್ಬರು ಪೇದೆಯಾಗಿದ್ದು, ನಮ್ಮನ್ನು ತಡೆದರಾದರೂ ಪ್ರಯಾಣದ ವಿಷಯ ತಿಳಿದು ಚಹಾ ಕುಡಿಸಿ ಕಳುಹಿಸಿಕೊಟ್ಟರು. ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನಿಂದ ಮೆಡಲ್, ಪ್ರಮಾಣ ಪತ್ರಗಳನ್ನು ಕಳುಹಿಸಿದ್ದಾರೆ.
ವಿಜೇತಕುಮಾರ ಹೊಸಮಠ ಅಮರೇಗೌಡ ಗೋನವಾರ