ಉಳ್ಳಾಲ: ತುಳುನಾಡಿಗೆ ತನ್ನದೇ ಆದ ವೈಶಿಷ್ಟ್ಯ ಇದ್ದು, ಈ ಭಾಗದ ಜನರಿಗೆ ದೈವದತ್ತವಾದ ಕೊಡುಗೆಯಿದ್ದರೂ ಪ್ರಸ್ತುತ ದಿನಗಳಲ್ಲಿ ಹಾಳಾಗುತ್ತಿರುವುದು ಖೇದನೀಯ. ಇದನ್ನು ಸರಿಪಡಿಸುವ ಶಕ್ತಿ ಯುವಜನತೆಯಲ್ಲಿದ್ದು, ಹಿರಿಯರ ಮಾರ್ಗದರ್ಶನದಲ್ಲಿ ಯುವಕರು ಸಂಘಟಿತರಾಗಿ ಸಮಾಜದ ಒಳಿತಿಗೆ ಶ್ರಮಿಸಬೇಕು ಎಂದು ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ವೇದಮೂರ್ತಿ ಶ್ರೀ ಲಕ್ಷ್ಮೀ ನಾರಾಯಣ ಆಸ್ರಣ್ಣ ಅಭಿಪ್ರಾಯಪಟ್ಟರು.
ತುಳುನಾಡ ಜವನೆರ್ ಮಂಗಳೂರು ಇದರ ಉದ್ಘಾಟನೆ ಪ್ರಯುಕ್ತ ಭಾನುವಾರ ಕೊಲ್ಯದಿಂದ ಉಳ್ಳಾಲ ಅಬ್ಬಕ್ಕ ವೃತ್ತದವರೆಗೆ ನಡೆದ ಜಾಗೃತಿ ಜಾಥಾಕ್ಕೆ ಕೊಲ್ಯ ಶ್ರೀದೇವಿ ಮೂಕಾಂಬಿಕಾ ದೇವಸ್ಥಾನದಲ್ಲಿ ಚಾಲನೆ ನೀಡಿ ಮಾತನಾಡಿದರು. ಸೂಕ್ತ ವ್ಯವಸ್ಥೆ ಇಲ್ಲದಿದ್ದರೆ ಊರೇ ನಾಶವಾಗಬಹುದು. ಅದೇ ರೀತಿ ಯುವಕರನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡಾಗ ಸಮಾಜ ಸುಧಾರಣೆ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ ಉಳ್ಳಾಲ್, ಶ್ರೀ ದೇವಿ ಮೂಕಾಂಬಿಕಾ ದೇವಸ್ಥಾನದ ಅಧ್ಯಕ್ಷ ಮಹಾಬಲ ಶೆಟ್ಟಿ, ವಿಶ್ವಹಿಂದೂ ಪರಿಷತ್‌ನ ಜಿಲ್ಲಾ ಉಪಾಧ್ಯಕ್ಷ ವಾಸುದೇವ ಗೌಡ, ಜಿಲ್ಲಾ ಕಾರ್ಯದರ್ಶಿ ಗೋಪಾಲ ಕುತ್ತಾರ್, ಮುಖಂಡ ಕೋಡಿಕೆರೆ ಮನೋಜ್, ತುಳುನಾಡ ಜವನೆರ್ ಸ್ಥಾಪಕಾಧ್ಯಕ್ಷ ರಾಹುಲ್ ಉಳ್ಳಾಲ, ಅಧ್ಯಕ್ಷ ಅಶ್ವಿನ್ ಕೊಲ್ಯ ಪ್ರಧಾನ ಸಂಚಾಲಕ ಸುಜಿತ್ ಮಾಡೂರು, ಸುನೀಲ್ ಬೀರಿ, ಸುಧೀರ್ ಬಲ್ಯ, ನಾಗರಾಜ್ ಮಾಡೂರು, ಲಯೀಶ್ ಉಳ್ಳಾಲ್, ಚೇತನ್ ಉಳ್ಳಲ್, ದೀಪಕ್ ಕೊಲ್ಯ, ಅನುರಾಗ್ ಉಳ್ಳಾಲ್, ರಾಜೇಶ್ ಶೆಟ್ಟಿ ತೊಕ್ಕೊಟ್ಟು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಉಳ್ಳಾಲ್ ಸ್ವಾಗತಿಸಿದರು. ಕೋಶಾಧಿಕಾರಿ ಅಜಂತ ಪಿಲಾರ್ ಕಾರ್ಯಕ್ರಮ ನಿರೂಪಿಸಿದರು.