Advertisement
ರವಿವಾರ ತಡರಾತ್ರಿ ನಡೆದ ಪುರುಷರ ಹಾಕಿ ಪೈನಲ್‌ನಲ್ಲಿ ಭಾರತ ತಂಡ ಮಲೇಶ್ಯ ಎದುರು 2-4 ಗೋಲುಗಳ ಅಂತರದಿಂದ ಪರಾಭವಗೊಂಡಿತು. ಅನಂತರ ನಡೆದ ವನಿತಾ ಫೈನಲ್ಸ್‌ನಲ್ಲಿ ಭಾರತ ಅತಿಥೇಯ ಅರ್ಜೆಂಟೀನಾ ವಿರುದ್ಧ 1-3 ಗೋಲುಗಳಿಂದ ಎಡವಿತು. ಮಲೇಶ್ಯ ಹಾಗೂ ಆರ್ಜೆಂಟೀನಾ ತಂಡಗಳು ಯೂತ್ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಹಾಕಿ ಚಿನ್ನದ ಪದಕ ಗೆದ್ದು ಸಂಭ್ರಮಿಸಿದೆ. ಆರ್ಜೆಂಟೀನಾ ಪುರುಷರ ತಂಡ ಹಾಗೂ ಚೀನದ ವನಿತಾ ತಂಡ ಕಂಚಿನ ಪದಕ ಜಯಿಸಿವೆ.
ಪುರುಷರ ಫೈನಲ್‌ನ ಆರಂಭದ ಮೊದಲ 2ನೇ ನಿಮಿಷದಲ್ಲಿ ಭಾರತದ ತಂಡ ನಾಯಕ ವಿವೇಕ್ ಸಾಗರ್ ಪ್ರಸಾದ್ ಗೋಲಿನ ಖಾತೆ ತೆರೆದರು. ಆದರೆ 2 ನಿಮಿಷದ ಬಳಿಕ ಫಿರ್ದಾಸ್ ರೊಸಿª ಗೋಲಿನ ಮೂಲಕ ಮಲೇಶ್ಯ ಸಮಬಲ ಸಾಧಿಸಿತು. ಅನಂತರ ಪ್ರಸಾದ್ ಮತ್ತೂಂದು ಗೋಲು ಹೊಡೆದು ಮೊದಲಾರ್ಧದಲ್ಲಿ ಭಾರತಕ್ಕೆ 2-1 ಮುನ್ನಡೆ ತಂದಿತ್ತರು. ಆದರೆ ಈ ಮುನ್ನಡೆಯನ್ನು ಉಳಿಸಿಕೊಳ್ಳಲಾಗಲಿಲ್ಲ. ಆರ್ಜೆಂಟೀನಾ ಅಜೇಯ
ಅಜೇಯವಾಗಿ ಫೈನಲ್ ಪ್ರವೇಶಿಸಿದ ಅತಿಥೇಯ ಅರ್ಜೆಂಟೀನಾ ವನಿತಾ ತಂಡ ಫೈನಲ್‌ನಲ್ಲೂ ಇದೇ ಮಟ್ಟವನ್ನು ಕಾಯ್ದು ಕೊಂಡು ಭಾರತವನ್ನು ಕಟ್ಟಿಹಾಕಿತು. ಪಂದ್ಯದ 49ನೇ ಸೆಕೆಂಡ್ ನಲ್ಲೇ ಮುಮ್ತಾಜ್ ಖಾನ್ ಗೋಲು ಹೊಡೆದು ಭಾರತಕ್ಕೆ ಮುನ್ನಡೆ ಕೊಡಿಸಿದರಾದರೂ, ತಂಡದ ಆರ್ಭಟ ಈ ಒಂದು ಗೋಲಿಗಷ್ಟೇ ಸೀಮಿತಗೊಂಡಿತು.