Advertisement

ಯುವಶಕ್ತಿಯೇ ದೇಶದ ಆಸ್ತಿ

11:56 AM Aug 06, 2018 | |

ಕೆ.ಆರ್‌.ಪುರ: ಯುವಶಕ್ತಿ ಭಾರತದ ಬಹುದೊಡ್ಡ ಆಸ್ತಿ ಎಂದು ರಾಜ್ಯಸಭಾ ಸದಸ್ಯ ಪ್ರೊ.ರಾಜೀವ್‌ ಗೌಡ ಹೇಳಿದರು. ಕೆ.ಆರ್‌.ಪುರದ ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಭಾನುವಾರ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

Advertisement

ವಿಶ್ವದಲ್ಲೇ ಅತಿ ಹೆಚ್ಚು ಮಾನವ ಸಂಪನ್ಮೂಲ ಹಾಗೂ ಹೆಚ್ಚು ಯುವ ಜನರನ್ನು ಭಾರತ ಹೊಂದಿದೆ. ದೇಶದ ಅಭಿವೃದ್ಧಿಯಲ್ಲೂ ಯುವ ಸಮೂಹ ಮಹತ್ವದ ಪಾತ್ರ ವಹಿಸಿದೆ. ಇದೇ ಕಾರಣದಿಂದ ಭಾರತ ಇಂದು ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮುಂಜೂಣಿಯಲ್ಲಿದೆ ಎಂದರು.

ಡಾ.ಎಸ್‌.ಎಂ.ಶಿವಪ್ರಸಾದ್‌ ಮಾತನಾಡಿ, ನ್ಯಾನೊ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ ರೀತಿಯ ಬೇಡಿಕೆ ವಿಷಯಗಳ ಕಲಿಕೆಯತ್ತ ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ 700 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಕೇಂಬ್ರಿಡ್ಜ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಿ.ಕೆ.ಮೋಹನ್‌, ಪ್ರಿನ್ಸಿಪಾಲ್‌ ಡಾ.ಎಲ್‌.ಸುರೇಶ್‌, ಡಾ.ಶಶಿಕುಮಾರ್‌, ಡಾ.ಡಿ.ಎಚ್‌.ರಾವ್‌, ಡಾ.ಪತ್ತಾರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next