Advertisement

ಸರಕು ಸಾಗಣೆ ವಾಹನದಿಂದ ಕೆಳಗೆ ಬಿದ್ದು ಯುವಕ ಸಾವು

01:47 PM Jul 30, 2020 | keerthan |

ಮೈಸೂರು: ಚಲಿಸುತ್ತಿದ್ದ ಸರಕು ಸಾಗಣೆ ವಾಹನದಿಂದ ಕೆಳಗೆ ಬಿದ್ದ ಯುವಕನೋರ್ವ ಮೃತಪಟ್ಟ ಘಟನೆ ನಂಜನಗೂಡು ರಸ್ತೆಯ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ಬುಧವಾರ ಸಂಜೆ ನಡೆದಿದೆ.

Advertisement

ಗೌಸಿಯಾನಗರದ ನಿವಾಸಿ ಫಾಜೀಲ್ (22) ಎಂಬಾತ ಮೃತ ಯುವಕ

ಹೂ ತರಲು ಗುಂಡ್ಲುಪೇಟೆಗೆ ಹೋಗುತ್ತಿದ್ದ ಸರಕು ಸಾಗಣೆ ವಾಹನದಲ್ಲಿ ಖಾಲಿ ಕ್ರೇಟ್‌ಗಳನ್ನು ಕಟ್ಟಿಕೊಂಡು ಅದರ ಮೇಲೆ ಯುವಕ ಫಾಜೀಲ್ ಕುಳಿತುಕೊಂಡಿದ್ದ. ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ವಾಹನ ಸಾಗುವಾಗ ಅದರ ಹಗ್ಗ ಸಡಿಲಗೊಂಡು ಕ್ರೇಟ್‌ಗಳು ಜಾರಿದ್ದು ಈ ವೇಳೆ ಕೆಳಗೆ ಬಿದ್ದ ಫಾಜೀಲ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಮೈಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next