Advertisement

ನೀವೂ ಆಗಿ ಫಿಟ್ನೆಸ್‌ ಟ್ರೈನರ್‌

01:20 PM Nov 28, 2018 | |

ಈಗಿನ ಯುವ ಜನತೆ ದೇಹ ಸೌಂದರ್ಯಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ನೀಡುತ್ತಿದ್ದಾರೆ. ಇದರಿಂದ ದಿನೇ ದಿನೆ ಜಿಮ್‌, ಇತ್ಯಾದಿ ಫಿಟ್ನೆಸ್‌ ಕಾಯ್ದುಕೊಳ್ಳುವ ತರಬೇತಿಗಳಿಗೆ ಹೋಗುವುವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಫಿಟ್ನೆಸ್‌ ಟ್ರೈನರ್‌ಗಳಿಗೆ ಬೇಡಿಕೆ ಹೆಚ್ಚಾಗಿವೆ. ಇದರಿಂದ ಫಿಟ್ನೆಸ್‌ ಕುರಿತು ಆಸಕ್ತಿ ಹೊಂದಿದ ಯುವಕರಿಗೆ ಈ ಟ್ರೈನರ್‌ ಕೆಲ ಸ ಒಂದು ಒಳ್ಳೆಯ ಅವಕಾಶ. ಹೌದು ಫಿಟ್ನೆಸ್‌ ತರಬೇತುದಾರರು ಜನರಿಗೆ ವ್ಯಾಯಾಮ ಹಾಗೂ ಶರೀರಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ತಿಳಿಸುತ್ತಾರೆ. ಅದು ವ್ಯಕ್ತಿ ಅಥವಾ ಗುಂಪುಗಳೊಂದಿಗೆ ತರಬೇತುದಾರರು ಫಿಟ್ನೆಸ್‌ ಕುರಿತ ಸೂಚನೆ ಮತ್ತು ಪ್ರೇರಣೆಯನ್ನು ನೀಡುವ ಕೆಲಸವನ್ನು ನಿರ್ವಹಿಸುತ್ತಾರೆ.

Advertisement

ಇಂದು ಕಾಲೇಜು ಓದುತ್ತಿರುವ ಹೆಚ್ಚಿನ ಯುವಕರು ಈ ಫಿಟ್ನೆಸ್‌ ನ ಮೊರೆ ಹೋಗಿದ್ದಾರೆ. ಇದರಿಂದ ಬಾಡಿ ಬಿಲ್ಡ್‌ ಮಾಡಿಕೊಂಡು ಫಿಟ್‌ ಆಗಿರುತ್ತಾರೆ. ಆದರೆ ತಮ್ಮ ಬಾಡಿ ಫಿಟ್‌ ಮಾಡಿಕೊಂಡು ಇತರರಿಗೂ ಫಿಟ್ನೆಸ್‌ ತರಬೇತಿ ನೀಡಬಹುದು.

ಫಿಟ್ನೆಸ್‌ಕೋರ್ಸ್‌
ಫಿಟ್ನೆಸ್‌ ತರಬೇತುದಾರರಾಗಲೂ ದೈಹಿಕವಾಗಿ ಯೋಗ್ಯರಾಗಿರಬೇಕು. ಡಿಪ್ಲೊಮಾ ಕೋರ್ಸ್‌ಗಳನ್ನು ಮಾಡಿರಬೇಕಾಗುತ್ತದೆ. ಇಂತಹ ಕೋರ್ಸ್‌ ಗಳನ್ನು ಮಾಡುವುದರ ಜತೆಗೆ ಸಿಪಿಆರ್‌, ಪ್ರಥಮ ಚಿಕಿತ್ಸಾ ತರಬೇತಿ, ಅಉಈ ಪ್ರಮಾಣೀಕರಣ, ಏರೋಬಿಕ್ಸ್‌, ತೂಕ ತರಬೇತಿ, ಯೋಗ ಮತ್ತು ಇನ್ನಿತರ ಚಟುವಟಿಕೆಗಳಲ್ಲಿ ತರಬೇತಿ ಹಾಗೂ ಪರಿಣತಿ ಪಡೆದಿದ್ದರೆ ಫಿಟ್ನೆಸ್‌ ಅಥವಾ ಆರೋಗ್ಯ ಸಂಬಂಧಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ನಿಮ್ಮ ಬೇಡಿಕೆ ಹೆಚ್ಚಾಗುತ್ತದೆ.

ಫಿಟ್ನೆಸ್‌ಮತ್ತು ಮನೋರಂಜನ ಕೇಂದ್ರಗಳು, ಜಿಮ್‌ಗಳು, ವ್ಯಾಯಾಮ ಸ್ಟುಡಿಯೋಗಳು, ಕಂಟ್ರಿ ಕ್ಲಬ್‌ಗಳು, ರೆಸಾರ್ಟ್‌ಗಳು, ವಿಶ್ವವಿದ್ಯಾನಿಲಯಗಳಲ್ಲಿ ಫಿಟ್ನೆಸ್‌ ತರಬೇತುದಾರ ಕೆಲಸ ಮಾಡುವ ಅವಕಾಶಗಳಿವೆ. ಇದನ್ನು ಪಾರ್ಟ್‌ ಟೈಮ್‌ ಜಾಬ್‌ ರೀತಿಯಲ್ಲೂ ನಿರ್ವಹಿಸಬಹುದು ಅಥವಾ ಸ್ವತಃ ನೀವು ಜಿಮ್‌ ಅಥವಾ ತರಬೇತಿಗಳನ್ನು ನೀಡಲು ಮುಂದಾಗುವುದಾದರೆ ವೃತ್ತಿಪರ ಪ್ರಮಾಣೀಕರಣ ಅಗತ್ಯ.

ಟ್ರೈನರ್‌ ಜವಾಬ್ದಾರಿ
ವ್ಯಕ್ತಿ ಅಥವಾ ಗುಂಪುಗಳಿಗೆ ತರಬೇತಿ ನೀಡುವುದು, ವ್ಯಕ್ತಿಯ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಿ ಅದಕ್ಕೆ ಪ್ರತಿಕ್ರಿಯೆ ನೀಡುವುದು. ಉಪಕರಣ ಮತ್ತು ತಂತ್ರಗಳ ಸರಿಯಾದ ಬಳಕೆಯನ್ನು ಪ್ರದರ್ಶಿಸಿ ಅವರಿಗೆ ತಿಳಿಸುವುದು. ಇಲ್ಲಿ ಗ್ರಾಹಕರ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಅವುಗಳನ್ನು ಪೂರೈಸುವುದು ಟ್ರೈನರ್‌ಗಳ ಗುರಿಯಾಗಿರುತ್ತದೆ. ಸಲಕರಣೆಗಳನ್ನು ಸರಿಯಾಗಿ ಹೇಗೆ ವ್ಯಾಯಾಮಕ್ಕೆ ಬಳಸುವುದು ಎಂಬುದನ್ನು ತಿಳಿಸಿಕೊಡುವುದು ಮತ್ತು ಅದರ ಎಚ್ಚರಿಕೆಗಳನ್ನು ಕೂಡ ತಿಳಿಸಬೇಕಾಗುತ್ತದೆ.

Advertisement

ಕೆಲವರಿಗೆ ವ್ಯಾಯಾಮದಲ್ಲಿ ಬೋರು ಬಂದಾಗ ಅವರನ್ನು ಪ್ರೇರೇಪಿಸುವ ಸಾಮರ್ಥ್ಯ ಇರಬೇಕು. ಇದರಿಂದ ಅವರನ್ನು ಫಿಟ್‌ ಆಗಿ ಇರಿಸಲು ಸಾಧ್ಯ. ಜನರು ತಮ್ಮ ಕೆಲಸದ ಮುಂಚೆ ಮತ್ತು ಅನಂತರ ಹಾಗೂ ವಾರಾಂತ್ಯದಲ್ಲಿ ಹೆಚ್ಚಾಗಿ ಜಿಮ್‌ಗಳಿಗೆ ಬರುವುದರಿಂದ ದಿನ ಪೂರ್ತಿ ಕೆಲಸವಿರುವುದಿಲ್ಲ. ಹಾಗಾಗಿ ಆ ಸಮಯದಲ್ಲಿ ಬೇರೆ ಕೆಲಸವನ್ನು ನಿರ್ವಹಿಸಬಹುದು ಹಾಗೂ ಉತ್ತಮ ಸಂಭಾವನೆಯನ್ನು ಪಡೆಯಬಹುದು. 

ಭರತ್‌ ರಾಜ್‌ ಕರ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next