Advertisement

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

10:58 PM Apr 23, 2024 | Team Udayavani |

ಜೈಪುರ: “ಇದು ಫಿಟ್‌ನೆಸ್‌ಗೆ ಮರಳಿದ ಬಳಿಕ ನನ್ನ ಮೊದಲ ಪಂದ್ಯವಾಗಿತ್ತು. ನಾನು ಫಿಟ್‌ ಆಗಿದ್ದೇ ನಿನ್ನೆ. ಪಿಚ್‌ ಸ್ಲೋ ಆ್ಯಂಡ್‌ ಲೋ ಆಗಿತ್ತು. ಹೀಗಾಗಿ ನನ್ನ ಬೌಲಿಂಗ್‌ ಯೋಜನೆ ಯಶಸ್ವಿಯಾಯಿತು’ ಎಂದು ರಾಜ್‌ಸ್ಥಾನ್‌ ತಂಡದ ಯಶಸ್ವಿ ಬೌಲರ್‌ ಸಂದೀಪ್‌ ಶರ್ಮ ಹೇಳಿದ್ದಾರೆ.

Advertisement

ಮುಂಬೈ ಎದುರಿನ ಪಂದ್ಯದಲ್ಲಿ ಅವರ ಸಾಧನೆ 18ಕ್ಕೆ 5 ವಿಕೆಟ್‌. ಸಂದೀಪ್‌ ಐಪಿಎಲ್‌ನಲ್ಲಿ 5 ವಿಕೆಟ್‌ ಉರುಳಿಸಿದ ಮೊದಲ ನಿದರ್ಶನ ಇದಾಗಿತ್ತು.

“ಎರಡು ವರ್ಷಗಳ ಹಿಂದೆ ನಾನು ಅನ್‌ಸೋಲ್ಡ್‌ ಆಗಿದ್ದೆ. ಇದೀಗ ಬದಲಿ ಆಟಗಾರನಾಗಿ ಬಂದಿದ್ದೇನೆ. ಪ್ರತಿಯೊಂದು ಪಂದ್ಯವನ್ನೂ ನಾನು ಆನಂದಿಸುತ್ತಿದ್ದೇನೆ’ ಎಂದು ಸಂದೀಪ್‌ ಶರ್ಮ ಹೇಳಿದರು.

“ಈ ಬಾರಿ ಬೌಲರ್ ಬಹಳ ದುಬಾರಿ ಆಗುತ್ತಿದ್ದಾರೆ. ನಾವು ಹೆಚ್ಚು ರನ್‌ ಬಿಟ್ಟುಕೊಡಲು, ದಂಡಿಸಿಕೊಳ್ಳಲು ಸಿದ್ಧರಾಗಿರಬೇಕು. ಹಾಗೆಯೇ ಇದನ್ನು ತಪ್ಪಿಸಿಕೊಳ್ಳಲು ಪದೇಪದೆ ಯೋಜನೆಗಳನ್ನು ಬದಲಾಯಿಸುತ್ತ ಇರಬೇಕು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next