Advertisement

Kerala; ಡಿಡಿ ಆಯ್ತು, ಚರ್ಚ್‌ನಲ್ಲೂ ‘ಕೇರಳ ಸ್ಟೋರಿ’ ಪ್ರದರ್ಶನ

12:39 PM Apr 09, 2024 | Team Udayavani |

ತಿರುವನಂತಪುರ: ದೂರದರ್ಶನದಲ್ಲಿ “ದ ಕೇರಳ ಸ್ಟೋರಿ’ ಸಿನೆಮಾ ಪ್ರಸಾರ ಕುರಿತು ಪರ-ವಿರೋಧ ಚರ್ಚೆಗಳು ನಡೆದ ಬೆನ್ನಲ್ಲೇ ಕೇರಳದ ಕ್ಯಾಥಲಿಕ್‌ ಡಯೋಸಿಸ್‌ ಚರ್ಚ್‌ವೊಂದು ವಿದ್ಯಾರ್ಥಿಗಳಿಗಾಗಿ ಇದೇ ಸಿನೆಮಾ ಪ್ರದರ್ಶನ ಏರ್ಪಡಿಸಿದೆ.

Advertisement

“ಹದಿಹರೆಯದವರಿಗೆ ತರಬೇತಿ’ ಎಂಬ ಹೆಸರನಲ್ಲಿ ಸೈರೋ ಮಲಬಾರ್‌ ಕ್ಯಾಥೊಲಿಕ್‌ ಚರ್ಚ್‌ನ ಇಡುಕ್ಕಿ ಡಯಾ ಸಿಸ್‌ನಲ್ಲಿ ಸಿನೆಮಾ ಪ್ರದರ್ಶಿಸಲಾಗಿದೆ. 10, 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಸಿನೆಮಾ ತೋರಿಸಿದ ಬಳಿಕ, ಚಿತ್ರದ ಬಗ್ಗೆ ವಿಮಶಾìತ್ಮಕ ಲೇಖನ ಬರೆವಂತೆ ಸೂಚಿಸಲಾಗಿದೆ. ಜತೆಗೆ ತಮ್ಮ ವಾಟ್ಸ್‌ಆ್ಯಪ್‌ ಗ್ರೂಪ್‌ಗ್ಳಲ್ಲಿ ಚರ್ಚಿಸಲು ಸೂಚಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಯಾ ಸಿಸ್‌ನ ಮಾಧ್ಯಮ ವಿಭಾಗದ ಮುಖ್ಯಸ್ಥ ಫಾ| ಜಿನ್ಸ್‌ ಕಾರಕ್ಕಟ್‌, ಪ್ರೀತಿ ಮತ್ತು ಅದರಿಂದ ಉಂಟಾಗುವ ಅಪಾಯಗಳ ಬಗ್ಗೆ ಮನವರಿಕೆ ಮಾಡಲು ಸಿನೆಮಾ ಪ್ರದರ್ಶಿಸಲಾಗಿತ್ತು ಎಂದಿದ್ದಾರೆ.

ಸುರೇಂದ್ರನ್‌ ಮೆಚ್ಚುಗೆ: “ಕೇರಳದ ಪ್ರತೀ ಜಿಲ್ಲೆಯಲ್ಲೂ ಲವ್‌ ಜೆಹಾದ್‌ ಸಮಸ್ಯೆಯಿದೆ. ರಾಜ್ಯದಲ್ಲಿ ನೂರಕ್ಕೂ ಅಧಿಕ ಮಂದಿ ಲವ್‌ ಜೆಹಾದ್‌ ಸಂತ್ರಸ್ತರಿದ್ದಾರೆ’ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸುರೇಂದ್ರನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next