Advertisement

Fitness: ಕೆಕೆಆರ್‌ ಸೇರಿಕೊಂಡ ಶ್ರೇಯಸ್‌ ಅಯ್ಯರ್‌

12:26 AM Mar 18, 2024 | Team Udayavani |

ಕೋಲ್ಕತಾ: ಕೋಲ್ಕತಾ ನೈಟ್‌ರೈಡರ್ ನಾಯಕ ಶ್ರೇಯಸ್‌ ಅಯ್ಯರ್‌ ರವಿವಾರ ತಂಡದ ಅಭ್ಯಾಸ ಶಿಬಿರವನ್ನು ಸೇರಿಕೊಂಡರು. ಅವರು ಶನಿವಾರ ಕೋಲ್ಕತಾಕ್ಕೆ ಆಗಮಿಸಿದ್ದರು.

Advertisement

29 ವರ್ಷದ ಶ್ರೇಯಸ್‌ ಅಯ್ಯರ್‌ ಬೆನ್ನುನೋವಿನ ಸಮಸ್ಯೆಯಿಂದಾಗಿ 2023ರ ಸಂಪೂರ್ಣ ಐಪಿಎಲ್‌ ಪಂದ್ಯಾವಳಿಯನ್ನು ತಪ್ಪಿಸಿಕೊಂಡಿದ್ದರು. ಈ ಸಲವೂ ಅನುಮಾನವಿತ್ತು.

ಮತ್ತೆ ಬೆನ್ನುನೋವು
ಕಳೆದ ಎಪ್ರಿಲ್‌ನಲ್ಲಿ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅಯ್ಯರ್‌, ಸೆಪ್ಟಂಬರ್‌ನಲ್ಲಿ ಸ್ಪರ್ಧಾತ್ಮಕ ಕ್ರಿಕೆಟಿಗೆ ಮರಳಿದ್ದರು. ಪ್ರವಾಸಿ ಇಂಗ್ಲೆಂಡ್‌ ಎದುರಿನ ಮೊದಲೆರಡು ಟೆಸ್ಟ್‌ಗಳಲ್ಲೂ ಆಡಿದ್ದರು. ಮತ್ತೆ ಕಾಡಿದ ಬೆನ್ನುನೋವಿನಿಂದಾಗಿ ಟೀಮ್‌ ಇಂಡಿಯಾದಿಂದ ಬೇರ್ಪಟ್ಟಿದ್ದರು. ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ ಕೂಡ ಆಡಿರಲಿಲ್ಲ. ಆದರೆ ಸೆಮಿಫೈನಲ್‌ ಮತ್ತು ಫೈನಲ್‌ನಲ್ಲಿ ಆಡಲಿಳಿದಿದ್ದರು. ಫೈನಲ್‌ ಪಂದ್ಯದ ಕೊನೆಯ 2 ದಿನ ಫೀಲ್ಡಿಂಗ್‌ ನಡೆಸಿರಲಿಲ್ಲ. ಬೆನ್ನುನೋವೇ ಇದಕ್ಕೆ ಕಾರಣವಾಗಿತ್ತು. ಹೀಗಾಗಿ ಈ ಐಪಿಎಲ್‌ನಲ್ಲಿ ಆಡುತ್ತಾರೋ ಇಲ್ಲವೋ ಎಂಬ ಆತಂಕ ಕೆಕೆಆರ್‌ ಅಭಿಮಾನಿಗಳದ್ದಾಗಿತ್ತು.

ಕೆಕೆಆರ್‌ ಫ್ರಾಂಚೈಸಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಶ್ರೇಯಸ್‌ ಅಯ್ಯರ್‌ ಆಗಮನದ ಚಿತ್ರವನ್ನು ಪೋಸ್ಟ್‌ ಮಾಡಿದ ಬಳಿಕ ಅಭಿಮಾನಿಗಳಿಗೆ ಸಮಾಧಾನ ಆಗಿದೆ. ಆದರೆ ಪಂದ್ಯಾವಳಿ ಮೊದಲ್ಗೊಂಡ ಬಳಿಕ ಅಯ್ಯರ್‌ ಫಿಟ್‌ನೆಸ್‌ ಹೇಗಿದ್ದೀತು ಎಂಬುದು ಮುಖ್ಯ.

2022ರ ಹರಾಜಿನಲ್ಲಿ 12.25 ಕೋಟಿ ರೂ.ಗಳ ದೊಡ್ಡ ಮೊತ್ತಕ್ಕೆ ಅಯ್ಯರ್‌ ಕೆಕೆಆರ್‌ ಪಾಲಾಗಿದ್ದರು. 14 ಪಂದ್ಯ ಆಡಿದ್ದು, 401 ರನ್‌ ಗಳಿಸಿದ್ದಾರೆ. ಕೆಕೆಆರ್‌ ತನ್ನ ಮೊದಲ ಪಂದ್ಯವನ್ನು ಮಾ. 23ರಂದು ತವರಿನ ಈಡನ್‌ ಗಾರ್ಡನ್ಸ್‌ ಅಂಗಳದಲ್ಲಿ ಸನ್‌ರೈಸರ್ ಹೈದರಾಬಾದ್‌ ವಿರುದ್ಧ ಆಡಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next