Advertisement

ನಿಮ್ಮ ಮನೆಯೀಗ ವರ್ಣರಂಜಿತ

09:18 PM Feb 21, 2020 | mahesh |

ಎಲ್ಇಡಿ ದೀಪಗಳು ಕೇವಲ ಕಾರುಗಳಲ್ಲಿ ಹೆಚ್ಚಿನ ಬಳಕೆಯಲ್ಲಿರುತ್ತವೆ. ಆದರೆ ವಾಸ್ತವದಲ್ಲಿ ಈ ಬಲುºಗಳು ವರ್ಣರಂಜಿತ ಮನೆಗೆ ಹೆಚ್ಚಿನ ಅಂದವನ್ನು ನೀಡುವುದರಲ್ಲಿ ಸಂಶಯವೇ ಇಲ್ಲ. ಇತ್ತೀಚೆಗೆ ನವೀನ ತಂತ್ರಜ್ಞಾನದೊಂದಿಗೆ ಬರುವ ಹಲವು ಬಗೆಯ ಬಣ್ಣದ ಎಲ್‌ಇಡಿ ಬಲ್ಬಗೆ ಮನಸೋತು ಮನೆಯ ಒಳಾಂಗಣ ಅಲಂಕಾರಕ್ಕಾಗಿ ಎಲ್‌ಇಡಿ ಬಲ್ಬಗಳನ್ನು ಖರೀದಿಸುತ್ತಾರೆ. ನಿಮ್ಮ ಮನೆಯ ಅಲಂಕಾರಕ್ಕಾಗಿ ಎಲ್‌ಇಡಿ ಬಲ್ಬಗಳ ಬಗ್ಗೆ, ಅದನ್ನು ಬಳಸುವ ಬಗ್ಗೆ ತಿಳಿಯೋಣ.

Advertisement

ಹ್ಯಾಲೊಜಿನ್‌ ದೀಪಗಳು
ಹ್ಯಾಲೊಜಿನ್‌ ದೀಪಗಳು ಪ್ರಕಾಶಮಾನವಾದ ದೀಪಗಳು. ಇದು ಹಲವಾರು ವಿಧಗಳಲ್ಲಿ ಲಭ್ಯವಾಗಿದೆ. ಇದು ಹೊರಸೂಸುವ ಬೆಳಕು ನೈಸರ್ಗಿಕ ಹಗಲು ಬೆಳಕನ್ನು ಹೋಲುತ್ತದೆ, ಆದ್ದರಿಂದ ಇದು ಪ್ರಕಾಶಮಾನವಾಗಿ ಮತ್ತು ಬಿಳಿಯಾಗಿರುತ್ತದೆ. ಹ್ಯಾಲೊಜಿನ್‌ ದೀಪಗಳ ಅಡಿಯಲ್ಲಿ ಬಣ್ಣಗಳು ಎದ್ದು ಕಾಣುತ್ತವೆ. ಈ ಪ್ರಮುಖ ಗುಣದಿಂದಾಗಿ, ಹ್ಯಾಲೊಜಿನ್‌ ಬಲ್ಬಗಳು ಹೆಚ್ಚು ಉಪಯುಕ್ತವಾಗಿವೆ. ಹ್ಯಾಲೊಜಿನ್‌ ದೀಪಗಳು ಪ್ರಕಾಶಮಾನವಾದವುಗಳಿಗಿಂತ ಹೆಚ್ಚಿನ ಶಕ್ತಿ ಮತ್ತು ಹಣವನ್ನು ಉಳಿಸುತ್ತದೆ.

ಬಾಗಿಲು, ಕಿಟಕಿ ಚೌಕಟ್ಟು ಅಲಂಕರಿಸಿ
ಎಲ್‌ಇಡಿ ಬಲ್ಬಗಳಿಂದ ನಿಮ್ಮ ಮನೆಯ ಬಾಗಿಲು ಮತ್ತು ಕಿಟಕಿ ಚೌಕಟ್ಟುಗಳನ್ನು ಅಲಂಕರಿಸಬಹುದು. ಎಲ…ಇಡಿ ಸ್ಟ್ರಿಪ್‌ ದೀಪಗಳನ್ನು ಮೇಲಕ್ಕೆ, ಕೆಳಕ್ಕೆ ಮತ್ತು ಚೌಕಟ್ಟಿನಾದ್ಯಂತ ಇರಿಸಿ. ಅಲಂಕಾರದ ಅಗತ್ಯವಿರುವ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಸ್ಟ್ರಿಪ್‌ಗ್ಳನ್ನು ಬಗ್ಗಿಸಿ ಮತ್ತು ತಿರುಗಿಸಿ. ಇದರಿಂದ ನಿಮ್ಮ ಮನೆ ಸುಂದರವಾಗಿ ಕಾಣುತ್ತದೆ.

ಮರಗಳು, ಸಸ್ಯಗಳನ್ನು ಅಲಂಕರಿಸಿ
ಮನೆಯ ಪಕ್ಕದ ಮರಗಳು ಮತ್ತು ಸಸ್ಯಗಳ ಸುತ್ತಲು ಮಿನಿ ಎಲ…ಇಡಿ ದೀಪಗಳನ್ನು ಬಳಸಿಕೊಂಡರೆ ಉತ್ತಮವಾಗಿ ಕಂಗೊಳಿಸುತ್ತವೆೆ. ಕ್ರಿಸ್ಮಸ್‌ ಟ್ರೀ, ಮನೆಯ ಸುತ್ತಲಿನ ಸಸ್ಯಗಳಿಗೆ ನಿಮಗೆ ಯಾವ ಬಣ್ಣದ ಬಲ್ಬ್ ಬೇಕು ಎಂದು ನಿರ್ಧರಿಸಿ, ಬಲ್ಬ್ಗಳನ್ನು ಅಳವಡಿಸಿಕೊಳ್ಳಿ. ಅದಲ್ಲದೆ ಎಲ್‌ಇಡಿ ಬಲ್ಬ್ ಅನ್ನು ಬಳಸುವುದರಿಂದ ಹಣದ ಉಳಿತಾಯ ಮಾಡಬಹುದು.

– ಪೂರ್ಣಿಮಾ ಪೆರ್ಣಂಕಿಲ

Advertisement
Advertisement

Udayavani is now on Telegram. Click here to join our channel and stay updated with the latest news.

Next