Advertisement
ಹುಡುಗಿ,ನೀನು ಇವತ್ಯಾಕೋ ಜಾಸ್ತೀನೆ ನೆನಪಾಗ್ತಾ ಇದೀಯ. ಫೇಸ್‌ಬುಕ್ಕು, ವಾಟ್ಸಾಪ್‌ಗ್ಳ ಹಾಯ್- ಬಾಯ್, ಚಿನ್ನು,
ಮುದ್ದು ಬೊಗಳೆಗಳ ಸಹವಾಸ ಬೇಡ ಅಂದ ನನ್ನರಸಿಗೆ ನನ್ನ ಮನವನ್ನು ಒಂದು ಪತ್ರದಲ್ಲಿ ತೆರೆದಿಡುವಾಸೆ. ಎದುರಿಗೆ
ಹೇಳಲು ಅದೇಕೋ ಸಂಕೋಚ, ಮುಜುಗರ. ಮಾತು ಮತ್ತು ಪದಗಳಿಗೆ ನಿಲುಕದ ನಿನ್ನ ಬಗೆಗಿನ ನನ್ನಂತರಂಗದ
ತುಡಿತವನ್ನು ಈ ಬಿಳಿ ಹಾಳೆಯ ಮೇಲೆ ಕೆಲವು ಶುಷ್ಕ ಪದಗಳಿಂದ ಮೂಡಿಸಲು ಖಂಡಿತಾ ಸಾಧ್ಯವಿಲ್ಲ. ಆದರೂ,
ಒಂದೆರಡು ನುಡಿಗಳನ್ನು ನುಡಿದೇ ತೀರುವ ಹುಚ್ಚು ಬಯಕೆ. ದಯವಿಟ್ಟು, ಸ್ವಲ್ಪ ಸಮಯ ಮೀಸಲಿಟ್ಟು ಅರ್ಪಿಸಿಕೋ ನನ್ನ ಭಾವತರಂಗವನ್ನು.
ಆಕರ್ಷಣೆ ಕಂಡೆ? ರೂಪದಲ್ಲಿ, ಗುಣದಲ್ಲಿ, ಪ್ರಪಂಚದಲ್ಲಿರುವ ಎಲ್ಲ ಒಳ್ಳೆಯದರಲ್ಲಿಯೂ, ಎಲ್ಲರಿಗಿಂತಲೂ ಒಂದು ಕೈ ಮೇಲೆ ಎಂಬಂತಿರುವ ನೀನು ನನ್ನಂಥ ಉಂಡಾಡಿ ಗುಂಡನನ್ನು ಪ್ರೀತಿಸಿದ್ದು, ನನ್ನ ಅದೆಷ್ಟೋ ಜನ್ಮದ ಪುಣ್ಯದ ಫಲವೇ ಸರಿ! ನಿನ್ನ ಪ್ರೀತಿಗೆ ಅದರ ರೀತಿಗೆ ಹೇಳು ಏನಿದೆ ಹೋಲಿಕೆ?
Related Articles
ಲೈಲಾ- ಮಜು°, ಸಲೀಂ- ಅನಾರ್ಕಲಿ ಹೀಗೆ ಅನೇಕ ವåಹಾನ್ ಪ್ರೇಮಿಗಳ ಬಗ್ಗೆ ಕೇಳಿದ್ದರೂ, ಇಂದಿನ ಟೈಂಪಾಸ್ ಪ್ರೀತಿಯನ್ನು, ಪಾಕೆಟ್ ಖಾಲಿಯಾಗುವವರೆಗಿನ ಕಿಲಾಡಿ ಪ್ರೀತಿಯನ್ನು ನೋಡಿ, ಕೇಳಿ- ಪ್ರೀತಿ ಎಂದರೆ ಅಸಹ್ಯ ಎಂದುಕೊಂಡಿದ್ದೆ, ನೀ ಎಲ್ಲಿಂದ ದೇವತೆಯಂತೆ ನನ್ನ ಬಾಳಿನಲ್ಲಿ ಬಂದೆಯೋ ಗೊತ್ತಿಲ್ಲ.
Advertisement
ಪ್ರೀತಿಯ ಅಮೃತವನ್ನು ಮನಸಾರೆ ಉಣಬಡಿಸಿ, ಸೊಗದ ಸುಧೆಯಲ್ಲಿ ತೇಲಾಡುವಂತೆ ಮಾಡಿದೆ. ಸುಖದಲ್ಲಿ ಸಖೀಯಾಗಿ, ದುಃಖದಲ್ಲಿ ಕಣ್ಣೊರೆಸುವ ಕೈಗಳಾದೆ ನೀನು. ಹುಣ್ಣಿಮೆಯ ಹಾಲೆºಳದಿಂಗಳಿನಂಥ ನಿನ್ನ ಪ್ರೀತಿಯಲ್ಲಿ ಮಿಂದೆದ್ದ ನಾನೇ ಧನ್ಯ. ಒಂದು ವೇಳೆ ನೀ ನನಗೆ ಸಿಗದಿದ್ದರೆ ಖಂಡಿತಾ ನನ್ನ ಬದುಕು ಬರಡಾಗುತ್ತಿತ್ತು.
“ಏನೋ ಇದು… ಇಷ್ಟು ಹೊಗಳ್ತಾ ಇದೀಯ? ಎದುರಿಗೆ ಹೇಳಿದ್ರೆ ಬೈತೀನಿ ಅನ್ಕೊಂಡು ಲೆಟರ್ ಬರೀತಿದೀಯ?’ ಅಂತಖಂಡಿತಾ ಬಯೆºàಡ. ನಂಗೊತ್ತು, ಹೊಗಳಿದ್ರೆ ಯಾವತ್ತೂ ನಿಂಗೆ ಇಷ್ಟ ಆಗಲ್ಲ ಅಂತ. ಹೊಗಳಿದ್ರೆ ಮರ ಹತ್ತಿ ಕೂತ್ಕೊಳ್ಳೋ ಹುಡ್ಗಿàರ
ಮಧ್ಯೆ ಹೊಗಳಿಕೇನೆ ಇಷ್ಟಪಡದೆ, ನೇರವಾಗಿ ಮಾತಾಡೋ ನಿನ್ನ ಚಿನ್ನದಂಥ ಗುಣವೇ ನನ್ನನ್ನು ನಿನ್ನೆಡೆಗೆ ಸೂಜಿಗಲ್ಲಿನಂತೆ ಸೆಳೆದಿದ್ದಲ್ಲವಾ? ಮತ್ತೆ ಶುರು ಮಾಡಿದ್ಯಲ್ಲೋ ನಿನ್ನ ಹೊಗಳ್ಳೋ ಪುರಾಣಾನಾ ಅನ್ನಬೇಡ. ನಿಂಗೂ ಗೊತ್ತು. ನಾನು ಯಾರನ್ನೂ ಸುಮ್‌ಸುಮ್ನೆ ಹೊಗಳಲ್ಲ ಅಂತ. ಒಳ್ಳೆ ಫಿಲಾಸಫರ್ ಥರ ಬರಿªದ್ದೀಯ ಅಂತ ಮತ್ತೆ ಕಿಚಾಯಿಸಬೇಡ. ಸರಿ, ಈಗ ಇಷ್ಟು ಸಾಕು. ಇನ್ನೂ ಜಾಸ್ತಿ
ಕಾಯೋಕೆ ನನ್ನಿಂದ ಆಗಲ್ಲ. ಬೇಗ ಬಂದುಬಿಡು. ಕಣ್ಣು ರೆಪ್ಪೆತೆರೆದಾಗಲೂ, ಮುಚ್ಚಿದಾಗಲೂ ನಿನ್ನದೇ ಕನವರಿಕೆ,
ನಿನಗಾಗಿ ಹಂಬಲಿಕೆ. ಈ ವಿರಹವ ಸಹಿಸಲಾರೆನು, ಬೇಗ ಬಂದು ನನ್ನ ಸೇರು. ನಿನ್ನದೇ ಕನವರಿಕೆಯಲ್ಲಿ… – ರಾಘವೇಂದ್ರ ಹೊರಬೈಲು, ಚಿಂತಾಮಣಿ