Advertisement

Mangaluru ಸುತ್ತಾಡಲು ಯುವತಿ ನಿರಾಕರಣೆ: ಪಿಜಿ ಹಾಸ್ಟೆಲ್‌ಗೆ ಕಲ್ಲೆಸೆದ ಯುವಕ

09:49 PM Nov 03, 2023 | Team Udayavani |

ಮಂಗಳೂರು: ತಾನು ಪ್ರೀತಿಸುತ್ತಿದ್ದವಳು ಸುತ್ತಾಡಲು ಬಂದಿಲ್ಲ ಎಂಬ ಸಿಟ್ಟಿನಿಂದ ಯುವಕನೋರ್ವ ಪಿಜಿ ಹಾಸ್ಟೆಲ್‌ ಕಟ್ಟಡಕ್ಕೆ ಕಲ್ಲೆಸೆದು ಹಾನಿಗೊಳಿಸಿದ ಘಟನೆ ನಗರದ ಸೈಂಟ್‌ ಆ್ಯಗ್ನೆಸ್‌ ಕಾಲೇಜು ಸಮೀಪದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.

Advertisement

ಸುಳ್ಯದ ವಿವೇಕ್‌ (18) ಪ್ರಕರಣದ ಆರೋಪಿ. ಈತ ಎಲೆಕ್ಟ್ರಿಕಲ್‌ ವೃತ್ತಿ ಮಾಡುತ್ತಿದ್ದ. ಪಿಜಿಯಲ್ಲಿ ಕೆಲಸಕ್ಕಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ. ಗುರುವಾರ ಸಂಜೆ ಆಕೆಯನ್ನು ಸುತ್ತಾಡುವುದಕ್ಕಾಗಿ ಕರೆದಿದ್ದ. ಆಕೆ ಅದಕ್ಕೆ ಒಪ್ಪಲಿಲ್ಲ. ಇದರಿಂದ ಸಿಟ್ಟಿಗೆದ್ದ ವಿವೇಕ್‌ ಪಿಜಿ ಹಾಸ್ಟೆಲ್‌ ಕಟ್ಟಡದ ಗಾಜುಗಳಿಗೆ ಕಲ್ಲೆಸೆದಿದ್ದಾನೆ. ಇದನ್ನು ಗಮನಿಸಿದ ಸಾರ್ವಜನಿಕರು ಆತನಿಗೆ ಥಳಿಸಿದ್ದಾರೆ. ಅನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next