ಚೆನ್ನೈ: ಫಿಡೆ ಚೆಸ್ ಡಾಟ್ ಕಾಮ್ ವನಿತಾ ಸ್ಪೀಡ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಯುವ ಗ್ರ್ಯಾನ್‌ಮಾಸ್ಟರ್ ಆರ್. ವೈಶಾಲಿ ಅಮೋಘ ಸಾಧನೆಗೈದಿದ್ದಾರೆ. ಕೂಟದ ಮೊದಲ ಲೆಗ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಅಂಟಾವೊನೆಟಾ ಸ್ಟೆಫನೋವಾ ಅವರಿಗೆ ಆಘಾತಕಾರಿ ಸೋಲುಣಿಸಿದ್ದಾರೆ. ಆದರೆ ಇನ್ನೊಂದು ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಕೊನೆರು ಹಂಪಿ ಸೋಲನುಭವಿಸಿದ್ದಾರೆ.
ಚೆನ್ನೈ ಮೂಲದ ವೈಶಾಲಿ ಈಗ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು, ಮಂಗೋಲಿಯಾದ ಇಂಟರ್‌ನ್ಯಾಶನಲ್ ಮಾಸ್ಟರ್ ಮುಂಕ್‌ಝುಲ್ ತುರ್ಮುಂಕ್ ಅವರನ್ನು ಎದುರಿಸಲಿದ್ದಾರೆ.
ಬಲ್ಗೇರಿಯಾದ ಎದುರಾಳಿ ಸ್ಟೆಫನೋವಾ ಅವರನ್ನು ವೈಶಾಲಿ 6-5 ಅಂಕಗಳ ಅಂತರದಿಂದ ಪರಾಭವಗೊಳಿಸಿದರು. ಅರ್ಹತಾ ಸುತ್ತಿನಲ್ಲಿ ವೈಶಾಲಿ ಬಲಿಷ್ಠ ಎದುರಾಳಿಗಳಾದ ವ್ಯಾಲೆಂಟಿನಾ ಗುನಿನಾ, ಅಲಿನಾ ಕಶ್ಲಿನ್ಸ್‌ಕಾಯ ಅವರನ್ನು ಸೋಲಿಸಿದ್ದರು.
ಹಾಲಿ ವಿಶ್ವ ರ್ಯಾಪಿಡ್ ಚಾಂಪಿಯನ್ ಕೊನೆರು ಹಂಪಿ ವಿಯೆಟ್ನಾಮ್ ಎದುರಾಳಿಗೆ 4.5-5.5 ಅಂಕಗಳಿಂದ ಶರಣಾದರು.