Advertisement

ಸಮಾಜದ ಅಭಿವೃದ್ಧಿಗೆ ಯುವಕರ ಕೊಡುಗೆ ಅಗತ್ಯ

11:33 AM Nov 08, 2018 | Harsha Rao |

ಕಡಬ: ಕ್ರಿಸ್ತರ ತತ್ತಾÌದರ್ಶದ ಹಾದಿಯಲ್ಲಿ ಮುನ್ನಡೆಯುತ್ತಿರುವ ನಮ್ಮ ಸಮುದಾಯ ಸಮಾಜದಲ್ಲಿ ವಿಶೇಷ ಸ್ಥಾನ ಪಡೆದಿದೆ. ಸಮಾಜದ ಅಭಿವೃದ್ಧಿಗೆ ಯುವ ಸಮುದಾಯ ಕೊಡುಗೆ ಅಗತ್ಯ ಎಂದು ಮಂಗಳೂರು

Advertisement

ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಪೀಟರ್‌ ಪಾವ್‌É ಸಲ್ಡಾನ್ಹಾ ಅಭಿಪ್ರಾಯಪಟ್ಟರು.

ಅವರು ಕಡಬದ ಜೋಕಿಮ್ಸ್‌ ಚರ್ಚ್‌ ಮೈದಾನದಲ್ಲಿ ಭಾರತೀಯ ಕೆಥೋಲಿಕ್‌ ಯುವ ಸಂಚಲನ (ಐಸಿವೈಎಂ)ದ ಮಂಗಳೂರು ಧರ್ಮಪ್ರಾಂತದ ಕೇಂದ್ರೀಯ ಸಮಿತಿ ನಿರ್ದೇಶನದಲ್ಲಿ ಪುತ್ತೂರು ವಲಯ ಮತ್ತು ಕಡಬ ಸೈಂಟ್‌ ಜೋಕಿಮ್ಸ್‌ ಚರ್ಚ್‌ ಘಟಕದ ಆಶ್ರಯದಲ್ಲಿ ಆಯೋಜಿಸಲಾಗಿರುವ 9ನೇ ಜಿಲ್ಲಾ ಸಮಾವೇಶದಲ್ಲಿ ಸಂದೇಶ ನೀಡಿದರು. 

ಸೇವೆ, ಶಿಕ್ಷಣ, ಆರೋಗ್ಯ ಹಾಗೂ ಅಧ್ಯಾತ್ಮ ಸೇರಿದಂತೆ ಸಮಾಜದ ಎಲ್ಲ ಕ್ಷೇತ್ರಗಳಲ್ಲಿಯೂ ನಮ್ಮ ಪಾತ್ರ ಅತ್ಯಂತ ಹಿರಿದು. ಈ ಹಿರಿಮೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಭಾರತೀಯ ಯುವ ಸಮಿತಿಯ ರಾಷ್ಟ್ರೀಯ ನಿರ್ದೇಶಕ ವಂ| ಚೇತನ್‌ ಮಚಾದೊ ಮಾತನಾಡಿ, ಯುವಕ ರಲ್ಲಿ ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಈ ರೀತಿಯ ಸಮ್ಮೇಳನಗಳು ಪೂರಕ ಎಂದು ಹೇಳಿ ದರು. ರಾಷ್ಟ್ರೀಯ ಅಧ್ಯಕ್ಷ ಪರಿÕವಲ್‌ ಹಾಲ್ಟ್ ಹಾಗೂ ರಾಷ್ಟ್ರೀಯ ಯುವ ಸಚೇತಕ ವಂ| ಜೇಕಬ್‌ ಅನಿಲ್‌ ಡೇಸಾ ಮಾತನಾಡಿದರು.

Advertisement

ಸಮ್ಮಾನ
ಧರ್ಮಾಧ್ಯಕ್ಷ ರೈ| ರೆ| ಡಾ| ಪೀಟರ್‌ ಪಾವ್‌É ಸಲ್ಡಾನ್ಹಾ, ಭಾರತೀಯ ಯುವ ಸಮಿತಿಯ ರಾಷ್ಟ್ರೀಯ ನಿರ್ದೇ ಶಕ ವಂ| ಚೇತನ್‌ ಮಚಾದೊ, ಅಧ್ಯಕ್ಷ ಪರಿÕವಲ್‌ ಹಾಲ್ಟ್ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.

ಕೇಂದ್ರೀಯ ಸಮಿತಿಯ ನಿರ್ದೇಶಕ ವಂ| ರೊನಾಲ್ಡ್‌ ಪ್ರಕಾಶ್‌ ಡಿ’ಸೋಜಾ, ಸಹ ನಿರ್ದೇ ಶಕ ವಂ| ಅಶ್ವಿ‌ನ್‌ ಲೋಹಿತ್‌ ಕಾಡೋìಜಾ, ಪುತ್ತೂರು ವಲಯ ವಿಗಾರ್‌ ವಾರ್‌ ವಂ| ಆಲ್ಫೆ†ಡ್‌ ಜೆ. ಪಿಂಟೊ, ವಲಯ ನಿರ್ದೇಶಕ ವಂ| ಪ್ರವೀಣ್‌ ಡಿ’ಸೋಜಾ, ಕಡಬ ಘಟಕದ ನಿರ್ದೇಶಕ ವಂ| ರೊನಾಲ್ಡ್‌ ಲೋಬೊ, ಕಾರ್ಯದರ್ಶಿ ಫೆವೀಶಾ ಮೊಂತೆರೋ, ವೈಸಿಎಸ್‌ ಅಧ್ಯಕ್ಷೆ ಜೊವಿಟಾ ಕ್ವಾಡ್ರಸ್‌, ಯುವ ನಿರ್ದೇ ಶಕ ಸಿರಿಲ್‌ ಪ್ರಭು, ಪ್ರಾಂತ್ಯ ನಿರ್ದೇಶಕ ಪ್ರಜ್ವಲ್‌ ಲೋಪೆಝ್, ಕೇಂದ್ರೀಯ ಸಮಿತಿ ಕಾರ್ಯಕಾರಿ ಸಮಿತಿ ಅಧ್ಯಕ್ಷ‌ ಜೈಸನ್‌ ಪಿರೇರಾ, ಕಾರ್ಯದರ್ಶಿ ರಕ್ಷಿತ್‌ ಪಿಂಟೋ , ಜತೆ ಕಾರ್ಯದರ್ಶಿ ಅನೀಶ್‌ ಲೋಬೋ, ಅಧ್ಯಕ್ಷ ಜೇಮ್ಸ್‌ ಕ್ರಿಶಾಲ್‌ ಡಿ’ಸೋಜಾ, ಕಡಬ ಘಟಕದ ಅಧ್ಯಕ್ಷ ಫ್ರಾಯಲ್‌ ಗ್ಲಾಡ್‌ಸನ್‌ ಕ್ರೋಸ್‌, ಕಾರ್ಯದರ್ಶಿ ರಶ್ಮೀತಾ ಪಿರೇರಾ, ಸಚೇತಕ ಜೋಸೆಫ್‌ ವೇಗಸ್‌, ಕಡಬ ಸಂತ ಜೋಕಿಮರ ಚರ್ಚ್‌ನ ಪಾಲನಾ ಸಮಿತಿ ಉಪಾಧ್ಯಕ್ಷ ಲುವಿಸ್‌ ಮಸ್ಕರೇನ್ಹಸ್‌, ಕಾರ್ಯದರ್ಶಿ ಜೆಸಿಂತಾ ವೇಗಸ್‌ ಉಪಸ್ಥಿತರಿದ್ದರು.

ಕ್ಲೀಟಾ ಡಿ’ಸೋಜಾ ಅವರು ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next