Advertisement

ಪೇಜಾವರ ವಿಶೇಷ: ಒಂದೆರಡು ವರ್ಷದಲ್ಲಿ ನಾಲ್ಕು ಶಾಲೆಗಳಿಗೆ ಹೋಗಿದ್ದ ವೆಂಕಟ್ರಾಮು  

09:56 AM Dec 30, 2019 | keerthan |

ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪೂರ್ವಾಶ್ರಮದ ಹೆಸರು ವೆಂಕಟರಮಣ. ತಾಯಿ ಕರೆಯುತ್ತಿದ್ದ ಮುದ್ದಿನ ಹೆಸರು ವೆಂಕಟ್ರಾಮು. ಇದುವೇ ವೆಂಕಟರಾಮ ಆದದ್ದೂ ಇದೆ. ಸುಬ್ರಹ್ಮಣ್ಯ ಸಮೀಪ ಪುತ್ತೂರು ತಾಲೂಕು ವ್ಯಾಪ್ತಿಯ ರಾಮಕುಂಜದಲ್ಲಿ 1931ರ ಎಪ್ರಿಲ್ 27ರಂದು ಎಂ. ನಾರಾಯಣಾಚಾರ್ಯ ಮತ್ತು ಕಮಲಮ್ಮ ದಂಪತಿಗೆ ವೆಂಕಟ್ರಾಮು ಜನಿಸಿದ.

Advertisement

ನಾರಾಯಣಾಚಾರ್ಯರಿಗೆ ಒಟ್ಟು ಆರು ಮಂದಿ ಮಕ್ಕಳು, ಮೂವರು ಪುತ್ರರು, ಮೂವರು ಪುತ್ರಿಯರು. ಮೂವರು ಪುತ್ರರಲ್ಲಿ ಹಿರಿಯವನೇ ವೆಂಕಟ್ರಾಮು.

ನಾರಾಯಣಾಚಾರ್ಯ ತಮ್ಮ ನರಸಿಂಹ ಆಚಾರ್ಯ ಉಡುಪಿ ಪೇಜಾವರ ಮಠದಲ್ಲಿ ಮೆನೇಜರ್ ಆಗಿದ್ದರು. ಈ ಕಾರಣದಿಂದ ನಾರಾಯಣಾಚಾರ್ಯರು ಉಡುಪಿಗೂ ಬಂದು ಹೋಗುತ್ತಿದ್ದರು. ಆ ಕಾಲದಲ್ಲಿ ಬದುಕೆಂದರೆ ಊಟವೇ ದೊಡ್ಡ ಖರ್ಚಿನ ಬಾಬ್ತು. ನಾರಾಯಣಾಚಾರ್ಯರು ತಲಕಾವೇರಿಗೆ ಸೀಸನ್ನಲ್ಲಿ ಕೆಲಸಕ್ಕೆಂದು ಹೋಗುತ್ತಿದ್ದರು. ಆಗ ಒಂದೂರಿನಿಂದ ಇನ್ನೊಂದೂರಿಗೆ ಹೊಗುವುದೆಂದರೆ ಸಂಸಾರ ಸಮೇತ ಹೋಗುವ ಕ್ರಮವಿತ್ತು. ತಂದೆ ತಾಯಿಗಳ ಜತೆಗೆ ವೆಂಕಟ್ರಾಮುವೂ ಬರುತ್ತಿದ್ದ.

ಕಮಲಮ್ಮನ ತವರೂರು ಕಾಣಿಯೂರು ಬಳಿಯ ತುಂಬೆಯಲ್ಲಿ. ಅಲ್ಲಿಗೂ ವೆಂಕಟ್ರಾಮು ಹೋಗುತ್ತಿದ್ದ. ಆಗಿನ ಶಾಲಾ ಶಿಕ್ಷಣವೆಂದರೆ ಹೋದಲ್ಲಿ ಆ ಊರಿನ ಶಾಲೆಗೆ ಹೋಗುವುದು ಕ್ರಮ. ತಾಯಿ ಮನೆಗೆ ಹೋದಾಗ ಬೆಳಂದೂರು ಶಾಲೆ, ರಾಮಕುಂಜದಲ್ಲಿದ್ದಾಗ ನೇರಂಕಿ ಶಾಲೆ, ಕೆಲವು ವೇಳೆ ರಾಮಕುಂಜದ ಸಂಸ್ಕೃತ ಶಾಲೆ, ಉಡುಪಿಗೆ ಬಂದಾಗ ಈಗ ನಗರಸಭೆ ಎದುರು ಇರುವ ಮಹಾತ್ಮಾ ಗಾಂಧಿ ಸ.ಹಿ.ಪ್ರಾ. ಶಾಲೆ ಹೀಗೆ ಒಂದೋ ಎರಡೋ ತರಗತಿಗೆಂದು ಹೋದದ್ದು ಸುಮಾರು ನಾಲ್ಕು ಶಾಲೆಗಳಿಗೆ. ಅನಂತರ ಅದೇ ಶ್ರೀವಿಶ್ವೇಶ ತೀರ್ಥರು ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ನಡೆಸುವ ಶಾಲಾ ಕಾಲೇಜುಗಳನ್ನು, ಬಡಮಕ್ಕಳಿಗೆ ಉಚಿತ ಊಟ, ವಸತಿ ಕೊಡುವ ಹಾಸ್ಟೆಲ್ಗಳನ್ನು ನಡೆಸುವ ಸಾಮರ್ಥ್ಯ ಪಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next