ಬ್ರೆಜಿಲಿಯಾ: ಆಟವಾಡುತ್ತಾ ಅಮೆಜಾನ್ ಕಾಡು ಹೊಕ್ಕಿದ್ದ ಪುಟಾಣಿ ಮಕ್ಕಳು ಬರೋಬ್ಬರಿ 25 ದಿನಗಳ ಕಾಲ ಅದೇ ಕಾಡಿನಲ್ಲಿದ್ದು, ಇದೀಗ ವಾಪಸು ಬಂದಿರುವ ಘಟನೆ ಬ್ರೆಜಿಲ್‌ನ ಅಮೇಜಾನ್ ರಾಜ್ಯದಲ್ಲಿ ನಡೆದಿದೆ.
ಅಮೇಜಾನ್ ಕಾಡಿನ ಸಮೀಪದಲ್ಲಿರುವ ಹಳ್ಳಿಯೊಂದರ ನಿವಾಸಿಗಳಾಗಿರುವ ಗ್ಲಾವೊRà(7) ಮತ್ತು ಗ್ಲೆಸನ್ ಫೆರೈರಾ (9) ಫೆ. 26ರಂದು ಮನೆಯಿಂದ ಕಾಣೆಯಾಗಿದ್ದರು. ಅಮೆಜಾನ್ ಕಾಡು ಹೊಕ್ಕಿದ್ದ ಅಣ್ಣ- ತಮ್ಮನಿಗೆ ಮನೆಯ ದಾರಿ ತಿಳಿಯದ ಹಿನ್ನೆಲೆ ಕಾಡಿನಲ್ಲೇ ಕಾಲ ಕಳೆದಿದ್ದಾರೆ.
ಅಲ್ಲಿದ್ದ ನೀರನ್ನು ಕುಡಿದುಕೊಂಡೇ ಜೀವನ ನಡೆಸಿದ್ದಾರೆ. ಅವರ ಹುಡುಕಾಟಕ್ಕೆ ಅಧಿಕಾರಿಗಳ ದೊಡ್ಡ ತಂಡವೇ ಸೇರಿದ್ದು, ಕಾಡಿನಾದ್ಯಂತ ಹುಡುಕಾಡಲಾಗಿದೆ.
ಕೊನೆಯದಾಗಿ 25 ದಿನಗಳ ನಂತರ ಮಕ್ಕಳು ಮರ ಕಡಿಯುವ ವ್ಯಕ್ತಿಯೊಬ್ಬನಿಗೆ ಸಿಕ್ಕಿದ್ದಾಗಿ ತಿಳಿಸಲಾಗಿದೆ.
ಮಕ್ಕಳಿಬ್ಬರು ಅಪೌಷ್ಠಿಕತೆಯಿಂದಾಗಿ ಸೊರಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.