Advertisement

“ಯಂಗ್​ ಅಂಡ್​ ಎನರ್ಜಿಟಿಕ್ ರೆಬಲ್​ ಇಸ್​ ಬ್ಯಾಕ್’

03:07 PM Mar 19, 2018 | Team Udayavani |

ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಬಹುನಿರೀಕ್ಷಿತ ಚಿತ್ರ “ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿದ್ದು, ಕನ್ನಡದ ವರನಟ ಡಾ.ರಾಜಕುಮಾರ್​, ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್​, ಮತ್ತು ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅವರ ಜೊತೆ ಇರುವ ಬ್ಲಾಕ್​ ಅಂಡ್​ ವೈಟ್​ ಫೋಟೊಗಳು ಮತ್ತು “ರೆಬಲ್​ ಇಸ್​ ಬ್ಯಾಕ್’​ ಎಂಬ ಟೈಟಲ್​ ಜೊತೆಗೆ “ಯಂಗ್​ ಅಂಡ್​ ಎನರ್ಜಿಟಿಕ್’ ಎಂಬ ಬರಹವು ಟೀಸರ್’ನಲ್ಲಿ ಕಾಣಿಸುವುದು ಸಿನಿಪ್ರಿಯರಿಗೆ ಚಿತ್ರದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

Advertisement

ಅಲ್ಲದೇ “ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದಲ್ಲಿ ಅಂಬರೀಷ್‌ ಅವರ ವಿಭಿನ್ನ ಗೆಟಪ್‌ಗಳಲ್ಲಿ ಮಿಂಚಿದ್ದು, ಚಿರ ಯೌವ್ವನದ ಯುವಕನಾಗಿ ಮತ್ತು ಆ್ಯಂಗ್ರಿ ಯಂಗ್‌ ಮ್ಯಾನ್‌ ಲುಕ್‌ನಲ್ಲಿ ಕಿಚ್ಚ ಸುದೀಪ ಯಂಗ್ ರೆಬೆಲ್ ಆಗಿ ಕಾಣಿಸಿಕೊಂಡಿದ್ದಾರೆ. ಮು‍ಖ್ಯವಾಗಿ ಸುಹಾಸಿನಿ ಮತ್ತು ಅಂಬರೀಶ್​ ತೆರೆ ಮೇಲೆ 14 ವರ್ಷಗಳ ಬಳಿಕ ಕಾಣಿಸಿಕೊಂಡಿರುವುದು ವಿಶೇಷ. ಚಿತ್ರದಲ್ಲಿ ಶ್ರುತಿ ಹರಿಹರನ್‌ ಕೂಡಾ ಸುದೀಪಗೆ ಜೋಡಿಯಾಗಿ ನಟಿಸುತ್ತಿದ್ದಾರೆ.

“ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರ ತಮಿಳಿನ “ಪವರ್‌ ಪಾಂಡಿ’ ಚಿತ್ರದ ರೀಮೇಕ್‌ ಆಗಿದ್ದು, ಈ ಚಿತ್ರವನ್ನು ಗುರುದತ್‌ ಗಾಣಿಗ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಸುದೀಪ್‌ ಅವರ ಜೊತೆ ಸಹಾಯಕ ನಿರ್ದೇಶಕರಾಗಿದ್ದ ಗುರುದತ್‌ ಅವರಿಗೆ ನಿರ್ದೇಶಕರಾಗಿ ಇದು ಚೊಚ್ಚಲ ಸಿನಿಮಾ. ಇನ್ನು ಅರ್ಜುನ್‌ ಜನ್ಯಾ ಸಂಗೀತ, ಜಾಕ್‌ ಮಂಜು ನಿರ್ಮಾಣ, ಜೆಬಿನ್‌ ಜಾಕೋಬ್‌ ಛಾಯಾಗ್ರಹಣ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next