Advertisement
ರಾಜಧಾನಿಯಲ್ಲಿ ಪಟಾಕಿಗಳಿಂದ ತೀವ್ರ ಮಾಲಿನ್ಯವಾಗುತ್ತಿದೆ. ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ನ್ಯಾಯಪೀಠ ಹೀಗೆ ಹೇಳಿದೆ. ವಿಚಾರಣೆ ವೇಳೆ ವಕೀಲರು ದಿಲ್ಲಿ ಒಂದರಲ್ಲೇ 50 ಲಕ್ಷ ಕೇಜಿಯಷ್ಟು ಪಟಾಕಿ ದಾಸ್ತಾನು ಇಡಲಾಗಿದೆ ಎಂದು ಮಾಹಿತಿ ನೀಡಿದರು.
“ದೀಪಾವಳಿ 5 ದಿನಗಳ ಕಾಲ ಆಚರಿಸಲಾಗುತ್ತದೆ. ಅಂದರೆ ದಿನಕ್ಕೆ 10 ಲಕ್ಷ ಕೇಜಿ ಸುಟ್ಟಂತಾಗುತ್ತದೆ’ ಎಂದು ಆತಂಕ ವ್ಯಕ್ತ ಪಡಿಸಿತು. ಜತೆಗೆ ಚೀನ ಪಟಾಕಿ ನಿಷೇಧಕ್ಕೆ ಕೈಗೊಂಡ ಕ್ರಮಗಳೇನು ಎಂದು ಕೇಂದ್ರವನ್ನು ಪ್ರಶ್ನಿಸಿತು. ಚೀನ ಪಟಾಕಿಗಳಲ್ಲಿ ನಿಷೇಧಿತ ವಸ್ತುಗಳು ಅತಿಯಾಗಿರುತ್ತವೆ. ಇದರ ನಿಯಂತ್ರಣಕ್ಕೆ ಏನು ಮಾಡಿದ್ದೀರಿ ಎಂದೂ ಕೇಳಿತು.