Advertisement

ಸಂಚಾರ ನಿಯಮ ಉಲ್ಲಂಘಿಸಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುವಂತಿಲ್ಲ

08:37 PM Jun 14, 2020 | Sriram |

ತಿರುವನಂತಪುರ: ಯಾವ ವ್ಯಕ್ತಿಯೂ ಸಂಚಾರ ನಿಯಮ ಉಲ್ಲಂಘಿಸಿ ಶಿಕ್ಷೆಗೆ ಗುರಿಯಾಗದೇ ಇರಲು ಸಾಧ್ಯವಿಲ್ಲದಂತೆ ಕೇರಳ ಸರ್ಕಾರ ಕಾನೂನನ್ನು ಬಿಗಿಗೊಳಿಸಿದೆ.

Advertisement

ಕೇರಳದಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಇ-ಛಲನ್‌ ಮೂಲಕ ದಂಡ ಕಟ್ಟುವ ಅವಕಾಶವಿರುತ್ತದೆ. ಆ ವ್ಯಕ್ತಿಯ ಬಳಿ ಅಗತ್ಯವಿರುವಷ್ಟು ನಗದು ಇರದಿದ್ದರೆ ಅವರು ಕಾರ್ಡ್‌ ಬಳಸಿ ದಂಡದ ಮೊತ್ತ ನೀಡಬಹುದು. ಅದಕ್ಕಾಗಿ ಪೊಲೀಸ್‌ ಇಲಾಖೆಯ ವಾಹನದಲ್ಲೇ ವ್ಯವಸ್ಥೆ ಮಾಡಲಾಗಿರುತ್ತದೆ. ಅದೂ ಸಾಧ್ಯವಾಗದೇ ಇದ್ದಾಗ ಆನ್‌ಲೈನ್‌ ಮೂಲಕ ದಂಡ ಪಾವತಿಸಬಹುದು. ಆದರೆ ದಂಡ ಕಟ್ಟುವುದರಿಂದ ಯಾರಿಂದಲೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇಷ್ಟಾದರೂ ವ್ಯಕ್ತಿ ದಂಡ ಕಟ್ಟುವುದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ ಎಂದರೆ ಆತನ ವಿರುದ್ಧ ಆರೋಪ ಪಟ್ಟಿ ಕೂಡಲೇ ತಯಾರಾಗುತ್ತದೆ. ಅದು ಕೂಡಲೇ ಇ-ಕೋರ್ಟ್‌ಗೆ ಹೋಗುತ್ತದೆ. ಇ-ಕೋರ್ಟ್‌ ತಕ್ಷಣವೇ ತೀರ್ಪನ್ನೂ ನೀಡುತ್ತದೆ. ಈ ಎಲ್ಲಾ ಪ್ರಕ್ರಿಯೆಗಳೂ ಪೊಲೀಸರ ಫೋನ್‌ನಲ್ಲಿ ಇರುವ ಮೊಬೈಲ್‌ ಅಪ್ಲಿಕೇಷನ್‌ ಮೂಲಕ ನಡೆಯುತ್ತವೆ ಎಂದು ಅಲ್ಲಿಯ ಅಧಿಕಾರಿಗಳು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next