Advertisement

ಹಿಮದಲ್ಲಿ ಬಿದ್ದು ಹೊರಳಾಡ್ಬೇಕಾ? ಸ್ನೋ ಸಿಟಿಗೆ ಬನ್ನಿ!

04:22 PM Feb 18, 2017 | Team Udayavani |

ಅಂಟಾರ್ಟಿಕಾ, ಸ್ವಿಟ್ಝರ್ಲೆಂಡ್‌ ಹತ್ತಿರದಲ್ಲಿಲ್ಲವೇ ಇಲ್ಲ. ಹೋಗಲಿ ಕಾಶ್ಮೀರಕ್ಕೆ ಹೋಗೋಣವೆಂದರೆ ಅದು ಕೂಡಾ ಕಡಿಮೆ ದೂರದಲ್ಲೇನೂ ಇಲ್ಲ. ಇವಿಷ್ಟು ಉಸಾಬರಿ ಏಕೆಂದುಕೊಂಡಿರಾ? ಹಿಮ ನೋಡಲು. ದಕ್ಷಿಣ ಭಾರತೀಯರಾದ ನಮಗೆ ಹಿಮ ಯಾವತ್ತೂ ಅಪರಿಚಿತವೇ. ಅದರಲ್ಲೂ ಬೆಂಗಳೂರಿಗರಿಗೆ ಚಳಿಯ ಅನುಭವವಿರಬಹುದು, ಆದರೆ ಹಿಮದ ಅನುಭವ? ಅದನ್ನು ನೋಡಬೇಕೆಂದರೆ ಹಿಮ ಬೀಳುವ ಪ್ರದೇಶಗಳನ್ನೇ ಹುಡುಕ್ಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಈಗ ಹಾಗೆ ಮಾಡಬೇಕೆಂದಿಲ್ಲ.

Advertisement

ಬೆಂಗಳೂರಿನಲ್ಲಿ ಇದ್ದುಕೊಂಡೇ ಹಿಮವನ್ನು ನೋಡಬಹುದು, ಹಿಮದಲ್ಲಿ ಬಿದ್ದು ಹೊರಳಾಡಬಹುದು, ಹಿಮದ ಉಂಡೆ ಎಸೆದು ಸ್ನೇಹಿತರೊಂದಿಗೆ ಆಟವಾಡಬಹುದು. ಅಲ್ಲದೆ ಸ್ನೋ ಬಾಸ್ಕೆಟ್‌ಬಾಲ್‌, ಸ್ನೋ ರಾಕ್‌ ಕ್ಲೈಂಬಿಂಗ್‌, ಸ್ನೋ ರೈಡ್‌, ವಿವಿಧ ಹಿಮದಾಟಗಳೂ ಇವೆ. ಇವೆಲ್ಲವೂ ಸಾಧ್ಯವಾಗುತ್ತಿರುವುದು “ಸ್ನೋ ಸಿಟಿ’ಯಿಂದಾಗಿ. ಬೆಂಗಳೂರಿನ ಈ ಸ್ನೋ ಸಿಟಿ 12,500 ಚದರ ಅಡಿಗಳಷ್ಟು ವ್ಯಾಪ್ತಿಯನ್ನು ಹೊಂದಿದೆ. ಈ ಸ್ನೋ ಥೀಮ್‌ ಪಾರ್ಕಿನ ಒಳಗಿನ ಉಷ್ಣಾಂಶ ಮೈನಸ್‌ 5 ಡಿಗ್ರೀ ಸೆಲಿÒಯಸ್‌. ಎಷ್ಟಿದ್ದರೂ ಕೃತಕವಾಗಿ ಸೃಷ್ಟಿಸಿದ ವಾತಾವರಣವಲ್ಲವೆ ಎಂದು ನಿರ್ಲಕ್ಷ್ಯ ಮಾಡದಿರಿ. ಒಳಗೆ ಕಾಲಿಡುವ ಮುನ್ನ ಸಾಕ್ಸು, ಸ್ವೆಟರ್‌ ಧರಿಸಿರಬೇಕಾದ್ದು ಅವಶ್ಯ.

ಎಲ್ಲಿ?: ಫ‌ನ್‌ ವರ್ಲ್ಡ್ ಕಾಂಪೌಂಡ್‌, ಜಯಮಹಲ್‌ ಪ್ಯಾಲೇಸ್‌ ರೋಡ್‌
ಶುಲ್ಕ: 600

Advertisement

Udayavani is now on Telegram. Click here to join our channel and stay updated with the latest news.

Next