Advertisement
ಅವರು ವೇಣೂರು ಫಲ್ಗುಣಿ ಸೇವಾ ಸಂಘದ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋಜನೆ ವೇಣೂರು ವಲಯದ ಆಶ್ರಯದಲ್ಲಿ ವೇಣೂರು ಮುಖ್ಯಪೇಟೆಯಲ್ಲಿ ಶುಕ್ರವಾರ ಜರಗಿದ 17ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ವೇಣೂರು ಸರಕಾರಿ ಪ್ರೌಢಶಾಲೆಯಲ್ಲಿ ಸುಮಾರು 35 ವರ್ಷಗಳ ಕಾಲ ದೆ„ಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡಿರುವ ನವೀನ್ ಕುಮಾರ್ ಜೈನ್ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.ವೈಭವೋಪೇತ ಮೆರವಣಿಗೆಯೊಂದಿಗೆ ಫಲ್ಗುಣಿ ನದಿಯಲ್ಲಿ ಗಣಪನ ವಿಗ್ರಹ ವಿಸರ್ಜಿಸಲಾಯಿತು. ಎಸ್. ರಾಮ ಉಪಾಧ್ಯಾಯ ಮತ್ತು ಮಕ್ಕಳು ಪೂಜಾ ವಿಧಿವಿಧಾನ ನಡೆಸಿಕೊಟ್ಟರು.
Related Articles
Advertisement
ವಿದ್ಯಾರ್ಥಿವೇತನ ವಿತರಣೆಫಲ್ಗುಣಿ ಸೇವಾ ಸಂಘದ ವತಿಯಿಂದ ದಿ| ಕೆ.ಎನ್. ಪೈ ಸ್ಮರಣಾರ್ಥ, ದಿ| ಎರ್ಮೋಡಿ ಗುಣಪಾಲ ಜೈನ್ ಸ್ಮರಣಾರ್ಥ ಹಾಗೂ ದಿ| ಸುಮಿತ್ರಾ ಜಯರಾಜ್ ಸ್ಮರಣಾರ್ಥ ಕಳೆದ ಶೆ„ಕ್ಷಣಿಕ ಸಾಲಿನಲ್ಲಿ ಸಾಧನೆಗೆ„ದ ಪ್ರಜ್ಞಾ ಪ್ರಭು, ಅನ್ನಪೂರ್ಣ ಎಸ್. ಹಾಗೂ ಸಂಗೀತಾ ಅವರಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. ಮತಾಂತರ
ಕಡಿವಾಣ ಸಾಧ್ಯ
ಹಿಂದೂಗಳಲ್ಲಿ ಒಗ್ಗಟ್ಟಿನ ಕೊರತೆ ಇದೆ. ಹಿಂದೂ ಸಮಾಜ ಸಂಘಟಿತರಾಗಬೇಕು. ಜತೆಗೆ ಸೇವಾಮನೋಭಾವ ಬೆಳೆಸಿಕೊಳ್ಳಬೇಕು. ಸಂಘ ಸಂಸ್ಥೆಗಳಿಂದ ಜನಸೇವೆ ನಡೆದರೆ ಮತಾಂತರಕ್ಕೆ ಕಡಿವಾಣ ಹಾಕಲು ಅಸಾಧ್ಯ.
– ವಿವೇಕ ಚೆ„ತನ್ಯಾನಂದ ಸ್ವಾಮೀಜಿ, ಶ್ರೀರಾಮಕೃಷ್ಣ ತಪೋವನ, ಪೊಳಲಿ